ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 53ನೇ ಬಜಾಲ್ ವಾರ್ಡ್ ನಂತೂರ್ ಫೈಸಲ್ ನಗರದಲ್ಲಿ ಬದ್ರಿಯಾ ರಸ್ತೆಗೆ ಸುಮಾರು 50 ಲಕ್ಷ ರೂ.ಅನುದಾನದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯನ್ನು ಮ.ನ.ಪಾ ನಿಕಟಪೂರ್ವ ಸದಸ್ಯ ಕೆ.ಇ. ಅಶ್ರಫ್ ರವಿವಾರ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮ.ನ.ಪಾ ನಿಕಟಪೂರ್ವ ಸದಸ್ಯ, ಬಜಾಲ್ ನಂತೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರವೂಫ್, 2002ಕ್ಕೂ ಮೊದಲು ಕುಗ್ರಾಮವಾಗಿದ್ದ ಬಜಾಲ್ ಗ್ರಾಮ ಅಭಿವೃದ್ಧಿ ಹಿಂದುಳಿದ ಗ್ರಾಮ ವಾಗಿತ್ತು. ಪಾಲಿಕೆ ವ್ಯಾಪ್ತಿಗೆ ಬಂದ ಬಳಿಕ ಬಜಾಲ್ ಸುಗ್ರಾಮವಾಗಿ ಪರಿವರ್ತನೆಯಾಗಿದೆ. ಈ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಅಭಿವೃದ್ಧಿಯ ಪಥಕ್ಕೆ ಕೊಂಡೊಯ್ಯಲಾಗಿದೆ. ವಾರ್ಡ್ ಜನತೆಯ ಬಹುಬೇಡಿಕೆ ಮೇರಗೆ ರಸ್ತೆ ನಿರ್ಮಿಸಿ ಕಾಂಕ್ರೀಟೀಕರಣ ಮಾಡಲಾಗಿದೆ. ರಸ್ತೆಗೆ ಜಾಗ ದಾನ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಸ್ಥಳೀಯರ ಕಾರ್ಯ ಶ್ಲಾಘನೀಯ ಎಂದರು.
ಈ ಸಂದರ್ಭ ತಾಲೂಕು ಪಂಚಾಯತ್ ಮಾಜಿ ಸದಸ್ಯ ಬಿ.ಅಹ್ಮದ್ ಬಾವಾ, ಕಣ್ಣೂರು ಮಂಡಲ ಪಂಚಾಯತ್ ಮಾಜಿ ಸದಸ್ಯ ಬಿ.ಎನ್. ಅಬ್ಬಾಸ್, ಬಜಾಲ್ ಗ್ರಾಮ ಪಂ. ಮಾಜಿ ಸದಸ್ಯರಾದ ಬಿ. ಫಕ್ರುದ್ದೀನ್, ಅಬ್ದುಲ್ ಹಮೀದ್, ಭರತೇಶ್ ಅಮೀನ್, ಮಾಜಿ ಉಪಾಧ್ಯಕ್ಷೆ ರತ್ನ, ಗೌಸಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಝಾಕ್, ಉಪಾಧ್ಯಕ್ಷ ಮೊಹಮ್ಮದ್ ರಫೀಕ್, ಜೆ.ಎಫ್ ಅಸೋಶಿಯೇಷನ್ ಅಧ್ಯಕ್ಷ ನಝೀರ್ ಬಜಾಲ್, ಎನ್.ಎಸ್.ಆರ್ ನಾಸೀರ್, ಎಚ್.ಎಸ್.ಉಮರ್ ಫಾರೂಕ್, ಮೊಹಮ್ಮದ್ ಹನೀಫ್ ಕೆಳಗಿನಮನೆ, ಎಸ್ಕೆಎಸ್ಸೆಸೆಫ್ ಅಧ್ಯಕ್ಷ ಹಮ್ಮಬ್ಬ ಮೋನಾಕ, ಸೌಕತ್ ಇಬ್ರಾಹೀಂ, ಹಕೀಝ್,ಅಬ್ದುಲ್ ಜಬ್ಬಾರ್, ಹಂಝ ಫೈಸಲ್ ನಗರ, ಅಬ್ಬಾಸ್ ಶಾಂತಿನಗರ, ಮೊಹಮ್ಮದ್ ಮುಸ್ತಫಾ ಕಟ್ಟಾ, ಇಸಾಖ್ ಮತ್ತಿತರರು ಉಪಸ್ಥಿತರಿದ್ದರು. ಇಕ್ಬಾಲ್ ಅಹ್ಸನಿ ಸ್ವಾಗತಿಸಿದರು. ಸಜ್ಜಾದ್ ವಂದಿಸಿದರು.