ಸುಳ್ಯ: ಮಾಣಿ – ಮೈಸೂರು ಹೆದ್ದಾರಿಯ ಜಾಲ್ಸೂರು ಗ್ರಾಮದ ಕದಿಕಡ್ಕ ಕಲ್ಲಮುರ ಎಂಬಲ್ಲಿ ಶನಿವಾರ(ಸೆ. 6) ರಾತ್ರಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವನಿಗೆ ಕಾರು ಢಿಕ್ಕಿಯಾಗಿ ಮೃತಪಟ್ಟಿರುವ ಘಟನೆ ಸಂಭವಿಸಿದೆ.
ಕನಕಮಜಲು ಗ್ರಾಮದ ನಿವಾಸಿ ಕನ್ನಡ್ಕ ಉಮೇಶ(54) ಮೃತಪಟ್ಟ ವ್ಯಕ್ತಿ .
ಅವರು ಜಾಲ್ಸೂರು ಪೇಟೆಯಿಂದ ದಿನಸಿ ಸಾಮಗ್ರಿ ಖರೀದಿಸಿ ಮನೆಗೆ ಮರಳುತ್ತಿದ್ದ ವೇಳೆ ಪುತ್ತೂರು ಕಡೆಯಿಂದ ಸುಳ್ಯದತ್ತ ಬರುತ್ತಿದ್ದ ಕಾರು ಢಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಎಸೆಯಲ್ಪಟ್ಟು ಕಾಲು ಮತ್ತು ತಲೆಗೆ ಗಂಭೀರ ಗಾಯವಾಯಿತು. ಅದೇ ಕಾರಿನಲ್ಲಿ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು. ಪರೀಕ್ಷಿಸಿದ ವೈದ್ಯರು ಅವರು ಅದಾಗಲೇ ಕೊನೆಯುಸಿರೆಳೆದಿರುವುದಾಗಿ ತಿಳಿಸಿದರು.
ಕಾರು ಚಾಲಕ ಜಗದೀಶ್ (26) ವಿರುದ್ಧ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.