ಮಂಗಳೂರು: ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಗಣೇಶಪುರ, ಹಿಂದು ಧಾರ್ಮಿಕ ಸೇವಾ ಸಮಿತಿ ಕಾಟಿಪಳ್ಳ ಹಾಗೂ ಕ್ರೀಡಾ ಭಾರತಿ ಮಂಗಳೂರು ಇದರ ಸಹಯೋಗದಲ್ಲಿ ಗಣೇಶಪುರ ಮೈದಾನದಲ್ಲಿ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ಕಬಡ್ಡಿ ಪಂದ್ಯಾಟ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ರೀಡಾ ಭಾರತಿ ಮಂಗಳೂರು ಸಹಕಾರ್ಯದರ್ಶಿ ಪ್ರಸನ್ನ ಶೆಣೈ ಕಾರ್ಕಳ ವಹಿಸಿದ್ದರು.
ಅತಿಥಿಗಳಾಗಿ ಕಾಟಿಪಳ್ಳ ನಿವೃತ್ತ ಭಾರತೀಯ ಭೂಸೇನೆ ಯೋದ ಸಾದು ಶೆಟ್ಟಿ,ಕ್ರೀಡಾ ಭಾರತಿ ಮಂಗಳೂರು ಜಿಲ್ಲಾಧ್ಯಕ್ಷರು ಅನಂತ ಪದ್ಮನಾಭ ಪ್ರಭು,ಜಿಲ್ಲಾ ಮಹಿಳಾ ಪ್ರಮುಖ್ ಶ್ರೀಮತಿ ನಿರ್ಮಲಾ,ಮಂಗಳೂರು ಮಿಲಾಗ್ರಿಸ್ ಕಾಲೇಜ್ ದೈಹಿಕ ಶಿಕ್ಷಕ ಆಕಾಶ್ ಶೆಟ್ಟಿ,ದಿನಕರ್ ಎನ್ ಬಂಗೇರ ಎಂ,ಅರ್,ಪಿ,ಎಲ್,ಬಿಜೆಪಿ ಮಂಗಳೂರು ಉತ್ತರ ಮಂಡಲ ಉಪಾಧ್ಯಕ್ಷ ರಾಘವೇಂದ್ರ ಶೆಣೈ, ಕೇಸರಿ ಪ್ರೆಂಡ್ಸ್ ಗಣೇಶಪುರ ಗೌರವಾಧ್ಯಕ್ಷರು ದುರ್ಗಾದಾಸ್ ಶೆಟ್ಟಿ, ಹಿಂದು ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ಹರೀಶ್ ಮುಡಾಯಿಕೊಡಿ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಸುವರ್ಣ, ಕೋಶಾಧಿಕಾರಿ ಭಾಸ್ಕರ್,ಮನಪಾ ಮಾಜಿ ಸದಸ್ಯ ಲೋಕೇಶ್ ಬೊಳ್ಳಾಜೆ,ಜಯಪ್ರಕಾಶ್ ಸೂರಿಂಜೆ,ಮುಂತಾದವರು ಉಪಸ್ಥಿತರಿದ್ದರು.
ಚೇತನ್ ಗುರುನಗರ ಸ್ವಾಗತಿಸಿದರು, ನವೀನ್ ಶೆಟ್ಟಿ ಕಣಿ ಧನ್ಯವಾದ ಸಮರ್ಪಿಸಿದರು ಹಾಗೂ ನಿತೇಶ್ ಕೋಟೆ ಕಾರ್ಯಕ್ರಮವನ್ನು ನಿರೂಪಿಸಿದರು.