ಮಂಗಳೂರು: ಕೆನರಾ ಇಂಜಿನಿಯರಿಂಗ್ ಕಾಲೇಜಿನ ಪ್ರಸಕ್ತ ಸಾಲಿನ ಹೊಸ 26ನೇ ಇಂಜಿನಿಯರಿಂಗ್ ಬ್ಯಾಚಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಖುಷಿಗಾಗಿ ಶನಿವಾರ ಕಾಲೇಜಿನ ಡಾ. ಪಿ. ದಯಾನಂದ ಪೈ ಪಿ ಸತೀಶ್ ಪೈ ಅಡಿಟೋರಿಯಂನಲ್ಲಿ ಓರಿಯೆಂಟೇಶನ್ ಡೇ ಆಚರಿಸಲಾಯಿತು.
ಕಾಲೇಜು ಆಡಳಿತ ಮಂಡಳಿ ಗೌರವ ಕಾರ್ಯದರ್ಶಿ , ಕಾಲೇಜಿನ ಸಂಚಾಲಕ ಎಂ. ರಂಗನಾಥ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಂತ್ರಿಕ ಶಿಕ್ಷಣದ ವಿದ್ಯಾರ್ಥಿಗಳಾಗಿ ಯುವ ಪ್ರತಿಭೆಗಳು ಶಿಸ್ತು, ಕುತೂಹಲ, ಮತ್ತು ಭಾವೈಕ್ಯತೆಯನ್ನು ತಮ್ಮದಾಗಿಸಿಕೊಳ್ಳಬೇಕು ಎಂದರು.
ಆಡಳಿತ ಮಂಡಳಿ ಜತೆ ಕಾರ್ಯದರ್ಶಿ ಟಿ. ಗೋಪಾಲಕೃಷ್ಣ ಶೆಣೈ ಮಾತನಾಡಿ, ಹೆತ್ತವರು ವಿದ್ಯಾರ್ಥಿಗಳ ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕು ಎಂದರು.
ವಿದ್ಯಾರ್ಥಿಗಳನ್ನು ರಾಷ್ಟ್ರದ ಸಂಪತ್ತಾಗಿ ರೂಪಿಸುವ ಬದ್ಧತೆಯೊಂದಿಗೆ ಕೆನರಾ ತನ್ನ ಪರಂಪರೆಯನ್ನು ಮುನ್ನಡೆಸಿಕೊಂಡು ಬರುತ್ತಿದೆ ಎಂದರು.
ತಾಂತ್ರಿಕ ಚಿಂತನೆಗಳಿಗೆ ಹೊಸ ಅನ್ವೇಷಣೆಯ ರೂಪ ನೀಡುವ ವಿದ್ಯಾರ್ಥಿಗಳ ವೇದಿಕೆ ಸಿಓಎಸ್ ಕಮ್ಯುನಿಟಿ ಕುರಿತು ವಿದ್ಯಾರ್ಥಿಗಳಾದ ಆಕೃತಿ, ಮಣೇಲ್ ಓಂ ನಾಯಕ್ ವಿವರಿಸಿದರು. ಕಾಲೇಜಿನ ಚಟುವಟಿಕೆಗಳ ಚಿತ್ರಣದ ವಾರಪತ್ರಿಕೆಯ 33 ಸಂಚಿಕೆಗಳ ಸಂಕಲನವನ್ನು ಅನಾವರಣಗೊಳಿಸಲಾಯಿತು.
ಪದವಿ ಪೂರ್ವ ಶಿಕ್ಷಣದಲ್ಲಿ ಸಾಧನೆಗೈದು ಕೆನರಾ ಸಂಸ್ಥೆಗೆ ಸೇರಿರುವ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಪ್ರಾಂಶುಪಾಲ ಡಾ. ನಾಗೇಶ್ ಹೆಚ್. ಆರ್. ಸ್ವಾಗತಿಸಿ ಉಪ ಪ್ರಾಂಶುಪಾಲ ಡಾ. ಡೇಮಿಯನ್ ಆಂಟನಿ ಡಿ ಮೆಲ್ಲೋ ವಂದಿಸಿದರು. ಶೈಕ್ಷಣಿಕ ಚಟುವಟಿಗಳ ಒಳ ನೋಟ ಕುರಿತು ವಿದ್ಯಾರ್ಥಿ ಕ್ಷೇಮಪಾಲನಾ ಡೀನ್ ಡಾ. ಪ್ರಿಯಾ ವಿ. ಫ್ರ್ಯಾಂಕ್, ನೇಮಕಾತಿ ಅವಕಾಶಗಳ ಕುರಿತು ತರಬೇತಿ, ನೇಮಕಾತಿ , ಹಳೆ ವಿದ್ಯಾರ್ಥಿ ಬಾಂಧವ್ಯ ವಿಭಾಗದ ದೀಪ್ತಿ ದಿನೇಶ್ ಪ್ರಭು ವಿವರಿಸಿದರು. ಕ್ಯಾರೆಲ್ ಡಿ ಮೆಲ್ಲೋ ಕಾರ್ಯಕ್ರಮ ನಿರೂಪಿಸಿದರು.