ಅಂತಿಮ ಘಟ್ಟ ತಲುಪಿದ ಧರ್ಮಸ್ಥಳ ಬುರುಡೆ ಪ್ರಕರಣ

ಧರ್ಮಸ್ಥಳ: ಧರ್ಮಸ್ಥಳದಲ್ಲಿ ಉದ್ಭವಿಸಿದ ಬುರುಡೆ ಪ್ರಕರಣದ ತನಿಖೆಯು ಇದೀಗ ಅಂತಿಮ ಘಟ್ಟ ಪ್ರವೇಶಿಸಿರುವುದು ಸ್ಪಷ್ಟವಾಗುತ್ತಿದೆ. ಪ್ರಮುಖ ಆರೋಪಿ ಚಿನ್ನಯ್ಯನು ಉಚ್ಚರಿಸಿದ ಅನೇಕ ಹೆಸರುಗಳ ಆಧಾರದ ಮೇಲೆ ವಿಶೇಷ ತನಿಖಾ ದಳವು (SIT) ನಾಲ್ವರನ್ನು ವಿಚಾರಣೆಗೆ ಒಳಪಡಿಸಿ ತೀವ್ರ ಪರಿಶೀಲನೆ ನಡೆಸಿದೆಯೆಂದು ವರದಿಗಳು ತಿಳಿಸಿವೆ.

ಗಿರೀಶ್ ಮಟ್ಟಣ್ಣನವರ್‌, ಜಯಂತ್ ಟಿ., ಅಭಿಷೇಕ್ ಹಾಗೂ ವಿಠಲ ಗೌಡ ಎಂಬವರನ್ನು ನೋಟಿಸ್ ನೀಡಿಸಿ ಹಾಜರುಗೊಳಿಸಿದ ಅಧಿಕಾರಿಗಳು, ನಿನ್ನೆ ತಡರಾತ್ರಿ ತನಕ ಪ್ರಶ್ನೆಗಳ ಸುರಿಮಳೆಯ ಮೂಲಕ ವಿಚಾರಣೆ ಮುಂದುವರೆಸಿದರು. SIT ಮುಖ್ಯಸ್ಥರಾದ ಪ್ರಣಬ್ ಮೊಹಾಂತಿ ಅವರ ನೇತೃತ್ವದಲ್ಲಿ ನಡೆದ ಈ ವಿಚಾರಣೆಯ ತೀಕ್ಷ್ಣತೆಗೆ ಆರೋಪಿಗಳು ಬೆಚ್ಚಿಬಿದ್ದಿದ್ದಾರೆ ಎನ್ನಲಾಗುತ್ತಿದೆ.

ಚಿನ್ನಯ್ಯ ಬಾಯ್ಬಿಟ್ಟ ಹೆಸರುಗಳು:
ಪ್ರಾರಂಭದಲ್ಲಿ ಬುರುಡೆಯನ್ನು ತಂದದ್ದೇ ಜಯಂತ್ ಎಂದು ಚಿನ್ನಯ್ಯನು ತಿಳಿಸಿದ್ದನೆಂದು ಮೂಲಗಳು ತಿಳಿಸಿವೆ. ನಂತರ ಜಯಂತ್ ವಿಚಾರಣೆಯಲ್ಲಿ ಗಿರೀಶ್ ಮಟ್ಟಣ್ಣನವರ್‌ ಹೆಸರನ್ನು ಉಲ್ಲೇಖಿಸಿದನು ಎನ್ನುವುದು ವರದಿಯಾಗಿದೆ. ಹೀಗಾಗಿ ತನಿಖಾ ದಳವು ಗಿರೀಶ್ ಜೊತೆಗೆ ಇತರರನ್ನೂ ವಿಚಾರಣೆಗೆ ಒಳಪಡಿಸಿದೆ. ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿ SIT ವರದಿ ಬಂದ ಬಳಿಕವಷ್ಟೆ ಬಹಿರಂಗವಾಗಬೇಕಿದೆ.

ಸಾಮೂಹಿಕ ವಿಚಾರಣೆ
ಬುರುಡೆಯ ಹೊಣೆ ವಹಸಿಕೊಳ್ಳಲು ಒಬ್ಬೊಬ್ಬರು ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವ ಕಾರಣ, ಅಧಿಕಾರಿಗಳು ಎಲ್ಲರನ್ನೂ ಒಟ್ಟಿಗೆ ಕುಳ್ಳಿರಿಸಿ ವಿಚಾರಣೆ ಮುಂದುವರೆಸಿದ್ದಾರೆ. ಬುರುಡೆಯ ಮೂಲ ಯಾವುದು, ಅದನ್ನು ಯಾವ ಉದ್ದೇಶಕ್ಕಾಗಿ ಬಳಸಲಾಯಿತು ಎಂಬ ವಿಷಯದಲ್ಲಿ ನಿರಂತರವಾಗಿ ಪ್ರಶ್ನೆಗಳನ್ನಾಡಿ ವಿವರಗಳನ್ನು ಪಡೆದುಕೊಳ್ಳುವ ಪ್ರಯತ್ನ ನಡೆದಿದೆ. ಈ ನಡುವೆ ಮಾಸ್ಕ್‌ ಮ್ಯಾನ್‌ ಚಿನ್ನಯ್ಯನ SIT ಕಸ್ಟಡಿ ಅಂತ್ಯಗೊಂಡಿದೆ.

ಮುಂದೇನು?
ತನಿಖೆಯು ತನ್ನ ಕೊನೆಯ ಹಂತ ತಲುಪಿರುವ ಈ ಸಂದರ್ಭದಲ್ಲಿ, ಇನ್ನೂ ಕೆಲ ಮಹತ್ವದ ಹೆಸರುಗಳು ಬಯಲಾಗುವ ಸಾಧ್ಯತೆಯಿದ್ದು, ಮೂಲವರೆಗೂ ತಲುಪುವ ಉದ್ದೇಶದಿಂದ ಅಧಿಕಾರಿಗಳು ಅತಿ ಗಂಭೀರತೆಯಿಂದ ಕಾರ್ಯಾಚರಣೆ ಮುಂದುವರೆಸುತ್ತಿದ್ದಾರೆ.

error: Content is protected !!