ಮಂಗಳೂರು: ʻಕೆಂಪು ಕಲ್ಲು ಸಮಸ್ಯೆಗೆ ಇನ್ನೇನು ಸಮಸ್ಯೆಗೆ ಪರಿಹಾರ ಸಿಗಲಿದೆʼ ಎಂಬ ನಿರೀಕ್ಷೆಯಲ್ಲಿ ಮೂರು ತಿಂಗಳು ಕಾಯುತ್ತಿದ್ದ ಕರಾವಳಿ ಜನರ ಭರವಸೆಯನ್ನು ಸರ್ಕಾರ ಮತ್ತೆ ಹುಸಿಗೊಳಿಸಿದ್ದು, ತುಳುನಾಡಿನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ ಕಾರ್ಮಿಕರ ಬದುಕೂ ಕೂಡ ಬೀದಿಗೆ ಬಿದ್ದಿದ್ದು, ಕಟ್ಟಡ ಕಾಮಗಾರಿ ನಡೆಯದ ಕಾರಣ ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಜಡವಾಗಿದೆ. ಇದಕ್ಕೆ ಕಾರಣವೂ ಇದೆ.
ಕೆಂಪು ಕಲ್ಲು ಗಣಿಗಾರಿಕೆ ನಿಯಮಾವಳಿ ಕುರಿತ ನಿರ್ಣಯವನ್ನು ಸಚಿವ ಸಂಪುಟ ಸಭೆಯಲ್ಲಿ ಸೆ.4ರಂದು ಕೈಗೊಳ್ಳಲಾಗುವುದು ಎಂದು ಸಚಿವರು ಮುಖ್ಯವಾಗಿ, ದಿನೇಶ್ ಗುಂಡೂರಾವ್, ಸ್ಪೀಕರ್ ಖಾದರ್ ಹೇಳಿದ್ದರು. ಆದರೆ, ಸೆ.4ರಂದು ನಡೆದ ಸಭೆಯಲ್ಲೂ ಕೆಂಪು ಕಲ್ಲಿನ ಪ್ರಸ್ತಾಪ ಬಂದಿಲ್ಲ. ರಾಜ್ಯ ಸರ್ಕಾರ ತುಳುನಾಡನ್ನು ನಿರ್ಲಕ್ಷಿಸುತ್ತಿದೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಕೆಂಪು ಕಲ್ಲಿನ ರಾಯಲ್ಟಿ ಏರಿಕೆಯ ಪರಿಣಾಮವಾಗಿ ಗಣಿಗಾರಿಕೆ ಸಂಪೂರ್ಣವಾಗಿ ನಿಂತುಹೋಗಿದೆ. ಅದರಿಂದ ತಮ್ಮ ಹೊಟ್ಟೆ ತುಂಬುತ್ತಿದ್ದ ಸಾವಿರಾರು ಕಾರ್ಮಿಕರ ಬದುಕು ಕೂಡಾ ಇಂದು ಕೆಂಪು ಕಲ್ಲಿನಂತೆ ಕುಸಿದು ಬಿದ್ದಿದೆ. ದಿನಗೂಲಿ ಕಾರ್ಮಿಕರಿಂದ ಹಿಡಿದು ಟ್ರಕ್ ಮಾಲಕ- ಚಾಲಕರ ಬದುಕೂ ಬರಡಾಗಿದೆ. ತುಳುನಾಡಿನ ಆರ್ಥಿಕತೆಯ ನಾಡಿ ಮಿಡಿತವಾಗಿರುವ ಕಟ್ಟಡ ಕಾಮಗಾರಿಯಾಗಿರುವುದರಿಂದ ಪ್ರತೀಯೊಬ್ಬರು ಇದರಿಂದ ಏಟು ತಿನ್ನುತ್ತಿದ್ದಾರೆ.
ಕೆಂಪು ಕಲ್ಲು, ಮರಳು ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಸಿಎಂ ಭೇಟಿ ಮಾಡಿದ ಬಿಜೆಪಿ ನಿಯೋಗ!
ಇತ್ತೀಚೆಗೆ ಸಚಿವರು ಅಧಿಕಾರಿಗಳ ನಡುವೆ ಮೂರು ಬಾರಿ ಸಭೆಗಳು ನಡೆದಿದ್ದು ಜಿಲ್ಲೆಯ ಜನರಲ್ಲಿ ಹೊಸ ನಿರೀಕ್ಷೆ ಹುಟ್ಟಿಕೊಂಡಿತ್ತು. “ಇನ್ನು ಮುಂದೆ ಸರಳೀಕರಣ ಆಗಲಿದೆ, ರಾಯಲ್ಟಿ ಇಳಿಸಲಾಗುವುದು” ಎಂಬ ಮಾತುಗಳು ಕೇಳಿಬಂದಿದ್ದರೂ ಸಂಪುಟದಲ್ಲಿ ಇನ್ನೂ ನಿರ್ಣಯವಾಗದೇ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಶೀಘ್ರದಲ್ಲೇ ಮರಳು, ಕೆಂಪುಕಲ್ಲು ಸಮಸ್ಯೆ ಪರಿಹಾರವಾಗುತ್ತಾ? ರಮಾನಾಥ ರೈ ಹೇಳಿದ್ದೇನು?
ಒಂದು ಕೆಂಪು ಕಲ್ಲಿಗೆ ರೂ.60!
ಮುಂಚೆ ಒಂದು ಕೆಂಪು ಕಲ್ಲಿನ ದರ 23ರಿಂದ 30ರ ಒಳಗಿತ್ತು. ಆದರೆ ಇದೀಗ ಅದರ ದರ 60 ರೂ. ವರೆಗೆ ತಲುಪಿದೆ. ಕೆಂಪು ಕಲ್ಲು ತುಳುನಾಡು ಭಾಗದಲ್ಲಿ ಮಾತ್ರ ಹೆಚ್ಚಾಗಿ ಬಳಕೆಯಾಗುವ ಕಟ್ಟಡ ಸಾಮಗ್ರಿಯಾಗಿದ್ದು, ಇಲ್ಲಿನ ಭೌಗೋಳಿಕ ದೃಷ್ಟಿಯಿಂದ ಕಟ್ಟಡಗಳಿಗೆ ಬಳಸಲಾಗುತ್ತದೆ. ಇದು ಅನ್ಯ ಜಿಲ್ಲೆಗಳಿಗೆ ರಫ್ತಾಗುವ ವಸ್ತುವಲ್ಲ. ಈ ಬಗ್ಗೆ ಸಂಬಂಧಪಟ್ಟವರಲ್ಲಿ ಗಮನಸೆಳೆಯುವಲ್ಲಿ ಸರ್ಕಾರ ಸಂಪೂರ್ಣ ಎಡವಿದೆ ಎಂಬ ಆರೋಪಗಳು ಕೇಳಿಬರುತ್ತಿದೆ.
ಕೆಂಪು ಕಲ್ಲು ಕ್ಯಾಬಿನೆಟ್‌ಗೆ: ಶೀಘ್ರ ಸಮಸ್ಯೆ ಪರಿಹಾರದ ಭರವಸೆ ನೀಡಿದ ಸ್ಪೀಕರ್!