ಬಾಹುಬಲಿಯ ಬೆಡಗಿಗೆ ಸಿಕ್ಕೇಬಿಟ್ಟ ಬೆಂಗಳೂರಿನ ಗಂಡು: ದೇವಸೇನಾ ಮನೆಯಲ್ಲಿ ಶೀಘ್ರವೇ ಕಲ್ಯಾಣ ವಾಲಗ!

ದಕ್ಷಿಣ ಭಾರತದ ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಲಿಸ್ಟ್‌ನಲ್ಲಿ ಈ ಚೆಲುವೆಯ ಹೆಸರೇ ಮೊದಲ ಸಾಲಿನಲ್ಲಿತ್ತು. ಅತ್ತ ಪ್ರಭಾಸ್ ಜೊತೆಗಿನ ಸ್ನೇಹದ ಬಗ್ಗೆ ಗಲ್ಲಿ ಗಲ್ಲಿಗಳಲ್ಲೂ ಗಾಸಿಪ್‌ಗಳು ಹರಿದಾಡುತ್ತಿದ್ದರೂ, ಈಕೆ ಮಾತ್ರ ಸಿಂಗಲ್ ಸ್ಟೇಟಸ್‌ಗೆ ಫೆವಿಕಾಲ್ ಹಾಕಿಕೊಂಡವರಂತೆ ಮೌನವಾಗಿದ್ದರು. ಆದರೆ ಈಗ ಸಿಕ್ಕಿರುವ ಸುದ್ದಿ ಮಾತ್ರ ಅಂತಿಂಥದ್ದಲ್ಲ, ಅಕ್ಷರಶಃ ಪಟಾಕಿ ಸಿಡಿಸುವಂತಿದೆ!

ಪ್ರಭಾಸ್ ಅಲ್ಲ.. ಇನ್ಯಾರೋ?
ಇಷ್ಟು ವರ್ಷ ಸಿನಿರಂಗದ ಮಂದಿ ʻಪ್ರಭಾಸ್ ಮತ್ತು ಅನುಷ್ಕಾ’ ಮದುವೆಯಾಗುತ್ತಾರೆ ಎಂದು ಜಾತಕಗಳನ್ನೇ ಮ್ಯಾಚ್ ಮಾಡಿದ್ದರು. ಆದರೆ, ಕರಾವಳಿಯ ಈ ಮುತ್ತಿನಂತಹ ಹುಡುಗಿ ಕೊನೆಗೂ ಮನ ಸೋತಿದ್ದು ಸಿನಿಮಾ ಮಂದಿಗಲ್ಲವಂತೆ! ಹೌದು, ಈಗ ಕೇಳಿಬರುತ್ತಿರುವ ಲೇಟೆಸ್ಟ್ ಸುದ್ದಿ ಪ್ರಕಾರ, ನಮ್ಮ ಬೆಂಗಳೂರಿನ ಉದ್ಯಮಿಯೊಬ್ಬರ ಮೇಲೆ ಅನುಷ್ಕಾ ಅವರ ಕಣ್ಣು ಬಿದ್ದಿದೆ. ಈಗಾಗಲೇ ಕುಟುಂಬಗಳ ನಡುವೆ ಸದ್ದಿಲ್ಲದೆ ಮಾತುಕತೆಗಳೂ ಮುಗಿದಿವೆಯಂತೆ.

44ರ ಹರೆಯದಲ್ಲಿ ಅರಳಿ ನಿಂತ ಪ್ರೇಮ:
ವಯಸ್ಸು 44 ಆದರೂ ಅನುಷ್ಕಾ ಅವರ ಸೌಂದರ್ಯಕ್ಕೆ ಇಂದಿಗೂ ಇಡೀ ದಕ್ಷಿಣ ಭಾರತವೇ ಫಿದಾ. ಮಗಳ ಮದುವೆ ನೋಡಲು ಕಾತರವಾಗಿದ್ದ ಮನೆಯವರಿಗೆ ಈಗ ಸಮಾಧಾನ ತಂದಿದೆ. ಕರಾವಳಿ ಮೂಲದವರೇ ಆದರೂ ಬೆಂಗಳೂರಿನ ಆ ಉದ್ಯಮಿ ಯಾರು ಎನ್ನುವ ಕುತೂಹಲ ಮಾತ್ರ ಈಗ ಎಲ್ಲರನ್ನೂ ಕಾಡುತ್ತಿದೆ. ಆಪ್ತರ ಪ್ರಕಾರ, ಈ ವರ್ಷದ ಅಂತ್ಯದೊಳಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಅನುಷ್ಕಾ ಕೈಗೆ ಮೆಹಂದಿ ಹತ್ತುವುದು ಗ್ಯಾರಂಟಿ!

ಅಂತೂ ಇಂತೂ ಪ್ರಭಾಸ್ ಜೊತೆಗಿನ ಆಮಿಲಿಯನ್ ಡಾಲರ್ ಪ್ರಶ್ನೆಗೆ ಈಗ ಉತ್ತರ ಸಿಕ್ಕಂತಾಗಿದೆ. ಅನುಷ್ಕಾ ಅಧಿಕೃತವಾಗಿ ಈ ವಿಚಾರವನ್ನು ಎಂದು ಬಹಿರಂಗಪಡಿಸುತ್ತಾರೆ ಎಂದು ಫ್ಯಾನ್ಸ್ ಕಾದು ಕುಳಿತಿದ್ದಾರೆ. ಒಂದಂತೂ ಸತ್ಯ, ನಮ್ಮ ಕರಾವಳಿ ಬೆಡಗಿ ಈಗ ಸಿಂಗಲ್ ಆಗಿ ಉಳಿಯಲು ರೆಡಿಯಿಲ್ಲ!

error: Content is protected !!