ಧರ್ಮಸ್ಥಳ ಪ್ರಕರಣದಲ್ಲಿ ಕೇರಳ ಸಂಸದನಿಗೆ ಸಂಕಷ್ಟ: ಚಿನ್ನಯ್ಯ ಇಂದು ಕೋರ್ಟ್‌ಗೆ ಹಾಜರು

ಬೆಳ್ತಂಗಡಿ: ಬುರುಡೆ ಪ್ರಕರಣಕ್ಕೆ ಸಂಬಂಧಿಸಿ ಕೇರಳ ರಾಜ್ಯದ ಕಮ್ಯುನಿಸ್ಟ್ ಪಕ್ಷದ ಸಂಸದನನ್ನು ಭೇಟಿಯಾಗಿ ಮಾತುಕತೆ ನಡೆಸಲಾಗಿತ್ತು ಎಂಬ ಮಾಹಿತಿ ವಿಚಾರಣೆ ವೇಳೆ ತಿಳಿದು ಬಂದಿದೆ ಎನ್ನಲಾಗಿದೆ.

ಕೇರಳ ರಾಜ್ಯದ ಕಮ್ಯುನಿಸ್ಟ್ ಪಕ್ಷದ ಸಂಸದ ಸಂತೋಷ್ ಕುಮಾರ್ ಅವರನ್ನು ಆರೋಪಿ ಚಿನ್ನಯ್ಯ, ಗಿರೀಶ್ ಮಟ್ಟಣ್ಣ‌ನವರ್, ಜಯಂತ್ ಸೇರಿ ಭೇಟಿಯಾಗಿದ್ದಾರೆ ಎನ್ನಲಾಗಿದೆ. ಒಟ್ಟಾರೆ ತನಿಖೆ ಶೇ.25 ಮಾತ್ರ ಪೂರ್ಣಗೊಂಡಿದ್ದು, ಈ ಷಡ್ಯಂತ್ರ ಬಹಳಷ್ಟು ಆಳವಾಗಿದೆ. ಇದರ ಪೂರ್ಣ ತನಿಖೆ ಸಾಕಷ್ಟು ದಿನ ಹಾಗೂ ಅನೇಕ‌ ಮಂದಿ ಸಿಲುಕುವ ಸಾಧ್ಯತೆ ಕಂಡುಬಂದಿದೆ.

(ಜಾಹೀರಾತು)ಮಂಗಳೂರು: ADVOCATE ಕಚೇರಿಗೆ ಪದವಿ ಪಡೆದಿರುವ ಯುವತಿ ಬೇಕಾಗಿದ್ದಾರೆ. ಸಂಪರ್ಕ ಸಂಖ್ಯೆ: 8660040298

ಬುರುಡೆ ಪ್ರಕರಣದಲ್ಲಿ ತನಿಖೆ ಸಂಬಂಧ ವಿಚಾರಣೆಯಲ್ಲಿದ್ದ ಗಿರೀಶ್ ಮಟ್ಟಣ್ಣನವರ್, ಜಯಂತ್. ಟಿ., ವಿಠಲ ಗೌಡ, ಯೂಟ್ಯೂಬರ್ ಅಭಿಷೇಕ್ ನಾಲ್ಕು ಮಂದಿ ತಡರಾತ್ರಿ ತೆರಳಿದ್ದರು. ಇದೀಗ ಸೆ.6 ರಂದು ಬೆಳಗ್ಗೆ 10:30 ಕ್ಕೆ ವಿಚಾರಣೆಗೆ ಮತ್ತೆ ಹಾಜರಾಗಿದ್ದಾರೆ.

ಶುಕ್ರವಾರ(ಸೆ.5) ತಡರಾತ್ರಿವರೆಗೆ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರು ನಾಲ್ವರನ್ನು ವಿಚಾರಣೆ ನಡೆಸಿ ತೆರಳಿದ್ದಾರೆ.

ಇದೀಗ ಪ್ರಮುಖ ಆರೋಪಿ ಚಿನ್ನಯ್ಯನನ್ನು 15 ದಿನಗಳ ಎಸ್ಐಟಿ ಕಸ್ಟಡಿ ಮುಕ್ತಾಯ ಆಗಿರುವ ಹಿನ್ನೆಲೆ ಇಂದು (ಸೆ.06) ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

error: Content is protected !!