ವಾರ್ಡನ್ ಮೇಲೆ ಹಲ್ಲೆ ನಡೆಸಿ ಜೈಲಿನಿಂದ ಎಸ್ಕೇಪ್ ಆದ ಇಬ್ಬರು ಕೈದಿಗಳು !

ಆಂಧ್ರಪ್ರದೇಶ: ಜೈಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ರಿಮಾಂಡ್‌ನಲ್ಲಿರುವ ಇಬ್ಬರು ಕೈದಿಗಳು ಪರಾರಿಯಾಗಿರುವ ಘಟನೆ ಆಂದ್ರಪ್ರದೇಶದ ಅನಕಪಲ್ಲಿಯಲ್ಲಿ ನಡೆದಿದೆ.

ನಕ್ಕಾ ರವಿಕುಮಾರ್ ಮತ್ತು ಬೆಜವಾಡ ರಾಮು ಪರಾರಿಯಾಗಿರುವ ಕೈದಿಗಳು ಎಂದು ಗುರುತಿಸಲಾಗಿದೆ.

ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ದೃಶ್ಯದಲ್ಲಿ ಕರ್ತವ್ಯದಲ್ಲಿದ್ದ ವಾರ್ಡನ್ ಮೇಲೆ ಇಬ್ಬರು ಕೈದಿಗಳು ಸುತ್ತಿಗೆಯಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ ಈ ವೇಳೆ ವಾರ್ಡನ್ ಕೈದಿಗಳನ್ನು ಸೆರೆಹಿಡಿಯುವ ಯತ್ನ ಮಾಡಿದ್ದರೂ ಸಾಧ್ಯವಾಗಲಿಲ್ಲ. ಸದ್ಯ ಸಿಟಿವಿ ದೃಶ್ಯಾವಳಿಯ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

(ಜಾಹೀರಾತು)ಮಂಗಳೂರು: ADVOCATE ಕಚೇರಿಗೆ ಪದವಿ ಪಡೆದಿರುವ ಯುವತಿ ಬೇಕಾಗಿದ್ದಾರೆ. ಸಂಪರ್ಕ ಸಂಖ್ಯೆ: 8660040298

ಈ ಕುರಿತು ಮಾಹಿತಿ ನೀಡಿದ ಜೈಲು ಅಧಿಕಾರಿ, ಪರಾರಿಯಾಗಿರುವ ಇಬ್ಬರೂ ಕೈದಿಗಳು ಅಡುಗೆಮನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಈ ವೇಳೆ ಏಕಾಏಕಿ ಜೈಲು ಸಿಬ್ಬಂದಿ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಲು ಮುಂದಾಗಿದ್ದಾರೆ ಬಳಿಕ ಸಿಬ್ಬಂದಿ ಕೈಯಲ್ಲಿದ್ದ ಕೀ ಕಿತ್ತುಕೊಂಡು ಬಾಗಿಲು ತೆರೆದು ಪರಾರಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಕೈದಿಗಳು ನಡೆಸಿದ ದಾಳಿಗೆ ಪೊಲೀಸ್ ಸಿಬ್ಬಂದಿ ತಲೆಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ

error: Content is protected !!