ಸುರತ್ಕಲ್: ಮುಂಚೂರು ಸಮೀಪದ ಮೋದಿನಗರ ಹಾಗೂ ಪದ್ಮಶ್ರೀ ಲೇಔಟ್ ಬಡಾವಣೆಗಳಲ್ಲಿ ಕಳ್ಳರು ನಾಲ್ಕು ಮನೆಗಳ ಬಾಗಿಲು ಮುರಿದು ಮನೆಯೊಂದರಲ್ಲಿದ್ದ ಬೆಳ್ಳಿ ದೀಪ ಸಹಿತ 50,000 ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ.
ಅಲ್ಲದೆ ಈ ಬಡಾವಣೆಯ ಏಳೆಂಟು ಮನೆಗಳ ಗೇಟು ತೆರೆದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಕಳ್ಳರ ಚಲನ ವಲನ ಬಡಾವಣೆಯಲ್ಲಿದ್ದ ಮನೆಗಳ ಸಿಸಿಟಿವಿಯಲ್ಲಿ ಪತ್ತೆಯಾಗಿದೆ.
(ಜಾಹೀರಾತು)ಮಂಗಳೂರು: ADVOCATE ಕಚೇರಿಗೆ ಪದವಿ ಪಡೆದಿರುವ ಯುವತಿ ಬೇಕಾಗಿದ್ದಾರೆ. ಸಂಪರ್ಕ ಸಂಖ್ಯೆ: 8660040298
ಇಬ್ಬರು ಕಳ್ಳರ ಕೃತ್ಯವಾಗಿದ್ದು ಕೈಯಲ್ಲಿ ಕತ್ತಿ, ಬ್ಯಾಗುಗಳಲ್ಲಿ ಆಯುಧ ಇಟ್ಟು ಕೊಂಡಿರುವ ಸಾಧ್ಯತೆಯಿದ್ದು, ಬಾಗಿಲು ಮುರಿಯಲು ಲಿವರ್‌ನಂತಹ ಚೂಪಾದ ವಸ್ತುಗಳನ್ನು ಬಳಸಿರುವ ಶಂಕೆ ವ್ಯಕ್ತವಾಗಿದೆ.
ಬಡಾವಣೆಯಲ್ಲಿ ಯಾರು ವಾಸ ಇಲ್ಲದಂತಹ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡಿದ್ದು. ಉಳಿದ ಮನೆಗಳಲ್ಲಿ ನಾಯಿಗಳು ಬೊಗಳುವ ಸದ್ದು ಕೇಳಿ ಹಿಂದಿರುಗಿದ್ದಾರೆ. ಸುರತ್ಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.