ಮನೆಗೆ ಬಂದಿದ್ದ ಯುವತಿ ನಿಗೂಢ ನಾಪತ್ತೆ

ಮಂಗಳೂರು: ಯುವತಿಯೋರ್ವಳು ನಿಗೂಢವಾಗಿ ನಾಪತ್ತೆಯಾದ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಶ್ವಿನಿ (21) ನಾಪತ್ತೆಯಾದ ಯುವತಿ.
ಅಶ್ವಿನಿ ಕಳೆದ 1 ವರ್ಷಗಳ ಹಿಂದೆ ಇನ್‍ಸ್ಟಾಗ್ರಾಂನಲ್ಲಿ ಚಿಕ್ಕಬಳ್ಳಾಪುರದ ಸಿದ್ಲಗಟ್ಟೆ ಎಂಬಲ್ಲಿನ ಮಹೇಶ್ ಎಂಬಾತನ ಜೊತೆ ಪರಿಚಯವಾಗಿ ಮಾತುಕತೆ ನಡೆಸುತ್ತಿದ್ದು, ಆತನೊಂದಿಗೆ ವಿವಾಹವಾಗುತ್ತೇನೆ ಎಂದು ಹೇಳಿ ಕಳೆದ ಒಂದು ವರ್ಷದ ಹಿಂದೆ ಆತನೊಂದಿಗೆ ಹೊರಟು ಹೋಗಿದ್ದರು..

ಕಳೆದ ಒಂದು ತಿಂಗಳಿನಿಂದ ಮನೆಯವರಿಗೆ ಕರೆ ಮಾಡಿ ನನ್ನನ್ನು ಇಲ್ಲಿ ಸರಿಯಾಗಿ ನೋಡಿಕೊಳ್ಳುವುದಿಲ್ಲ ಎಂದು ಹೇಳಿ, ಸೆಪ್ಟೆಂಬರ್ 1 ರಂದು ರಾತ್ರಿ ಸುಮಾರು 11.30 ಗಂಟೆಗೆ ಮಂಗಳೂರಿನ ಮನೆಗೆ ಬಂದಿದ್ದಳು. ಸೆಪ್ಟೆಂಬರ್ 2 ರಂದು ಹಗಲು ಮನೆಯಲ್ಲೇ ಇದ್ದು ಮರುದಿನ ಬೆಳಗ್ಗಿನ ಜಾವ 4 ಗಂಟೆಗೆ ಮನೆಯಿಂದ ಹೋದವರು ಕಾಣೆಯಾಗಿದ್ದಾಳೆ.

ಕಾಣೆಯಾದವರ ಚಹರೆ

  • ಎತ್ತರ: ಸುಮಾರು 5.3 ಅಡಿ

  • ಮೈಬಣ್ಣ: ಎಣ್ಣೆ ಕಪ್ಪು

  • ಕೂದಲು: ಕಪ್ಪು

  • ಶರೀರ: ಸಪೂರ

  • ಮಾತನಾಡುವ ಭಾಷೆಗಳು: ಕನ್ನಡ, ಇಂಗ್ಲಿಷ್, ತುಳು, ತಮಿಳು

  • ಉಡುಪು: ಗಿಳಿ ಹಸಿರು ಬಣ್ಣದ ಚೂಡಿದಾರ್ ಟಾಪ್ ಮತ್ತು ಬಿಳಿ ಬಣ್ಣದ ಲೆಗ್ಗಿನ್ಸ್ ಪ್ಯಾಂಟ್

ಕಾಣೆಯಾದವರ ಬಗ್ಗೆ ಮಾಹಿತಿ ದೊರೆತಲ್ಲಿ ಮಂಗಳೂರು ಗ್ರಾಮಾಂತರ ಪೋಲಿಸ್ ಠಾಣೆ, ವಾಮಂಜೂರುಗೆ ಸಂಪರ್ಕಿಸಲು ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

error: Content is protected !!