ಕರಾವಳಿಯಲ್ಲಿ ಸಂಭ್ರಮದ ಮಿಲಾದುನ್ನಭಿ, ಅಲ್ಲಲ್ಲಿ ರ‍್ಯಾಲಿ, ಶಾಂತಿ – ಸೌಹಾರ್ದತೆಯ ಸಂದೇಶ

ಮಂಗಳೂರು: ಪ್ರವಾದಿ ಮುಹಮ್ಮದ್ ಮುಸ್ತಫಾ (ಸ) ಅವರ 1500ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಕರಾವಳಿಯೆಲ್ಲೆಡೆ ಮಿಲಾದುನ್ನಬಿ ಮೆರವಣಿಗೆಗಳು ಭಕ್ತಿಭಾವದಿಂದ ನೆರವೇರಿದವು.‌
ವಿದ್ಯಾರ್ಥಿಗಳು , ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾ ಪಥಸಂಚಲನದಲ್ಲಿ ಭಾಗವಹಿಸಿದರು. ಮಕ್ಕಳ ಜತೆ ದೊಡ್ಡವರೂ ಸಹ ಉತ್ಸಾಹದಿಂದ ಪಾಲ್ಗೊಂಡು ವಿಶೇಷ ಆಕರ್ಷಣೆ ನೀಡಿದರು. ಧಾರ್ಮಿಕ ಏಕತೆ, ಸಹಬಾಳ್ವೆ ಮತ್ತು ಶಾಂತಿಯ ಸಂದೇಶ ಎಲ್ಲೆಡೆ ಪ್ರತಿಧ್ವನಿಸಿತು. ಅದೇ ರೀತಿ ಮಂಗಳೂರಿನ ವಿವಿಧೆಡೆ ಮಸೀದಿಗಳಲ್ಲಿ ಮುಹಮ್ಮದ್ ಮುಸ್ತಫಾ (ಸ) ರವರ ಜನ್ಮ ದಿನವನ್ನು ಆಚರಿಸಿ ಅವರ ಸಂದೇಶವನ್ನು ಧರ್ಮಗುರುಗಳು ಜನತೆಗೆ ಸಾರಿದ್ದಾರೆ.

ಉಳ್ಳಾಲ:
ಪ್ರವಾದಿ ಮುಹಮ್ಮದ್ ( ಸ) ರವರ ಜೀವನ ನಮಗೆ ಮಾರ್ಗದರ್ಶನ- ಖಾದರ್

ಪ್ರವಾದಿಯವರ ಜೀವನ ನಮಗೆ ಮಾರ್ಗದರ್ಶನ: ಸ್ಪೀಕರ್ ಯುಟಿ ಖಾದರ್
ವಿಧಾನ ಸಭಾ ಸ್ಪೀಕರ್‌ ಯು.ಟಿ. ಖಾದರ್‌ ಅವರು ಶಾಂತಿ ಸೌಹಾರ್ದತೆಯನ್ನು ಸಾರಿದ ಪ್ರವಾದಿ ಮುಹಮ್ಮದ್ ( ಸ) ರವರ ಜೀವನ ನಮಗೆ ಮಾರ್ಗದರ್ಶನ ಆಗಿದೆ. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಬದುಕು, ಸಮಾಜ ನಿರ್ಮಾಣ ಮಾಡಬೇಕು ಎಂದು ಜನತೆಗೆ ಕರೆ ನೀಡಿದ್ದಾರೆ.
ಉಳ್ಳಾಲ ಕೇಂದ್ರ ಜುಮ್ಮಾ ಮಸೀದಿ (402) ಹಾಗೂ ಸೈಯದ್‌ ಮದನಿ ದರ್ಗಾ ಸಮಿತಿ ಇದರ ಆಶ್ರಯದಲ್ಲಿ ಮುಹಮ್ಮದ್ ಮುಸ್ತಫಾ (ಸ) ರವರ ಜನ್ಮ ದಿನ ಪ್ರಯುಕ್ತ ಬೃಹತ್ ಮಿಲಾದುನ್ನಭಿ ರ್‍ಯಾಲಿ ಉದ್ಘಾಟಿಸಿ ಮಾತನಾಡಿದರು.
ಉಳ್ಳಾಲ ಕೇಂದ್ರ ಜುಮ್ಮಾ ಮಸೀದಿ ಹಾಗೂ ಸೈಯದ್ ಮದನಿ ದರ್ಗಾ ಸಮಿತಿ ಆಶ್ರಯದಲ್ಲಿ ಬೃಹತ್ ಮಿಲಾದುನ್ನಬಿ ರ‍್ಯಾಲಿ ನಡೆಯಿತು. ಕೋಟೆಪುರ ಮಸೀದಿಯಿಂದ ಉಳ್ಳಾಲ ದರ್ಗಾ ವರೆಗೆ ಶಾಂತಿಯುತ ಪಥಸಂಚಲನ ನಡೆಯಿತು.

ಮಂಗಳೂರು

ಮಂಗಳೂರು: ಅಲ್ ಮದ್ರಸತುಲ್ ಅಝ್ಹರಿಯದಿಂದ ಮೀಲಾದ್ ರ್‍ಯಾಲಿ
ನಗರದ ಬಂದರಿನ ಅಲ್ ಮದ್ರಸತುಲ್ ಅಝ್ಹರಿಯ ವತಿಯಿಂದ ನಡೆದ ‘ಇಷ್ಕೇ ಮದೀನಾ’ ಮೀಲಾದ್ ರ‍್ಯಾಲಿ ಮದ್ರಸ ಮಕ್ಕಳ ಆಕರ್ಷಕ ದಫ್ ಮೆರವಣಿಗೆಗಳಿಂದ ಮೆರುಗು ಪಡೆದುಕೊಂಡಿತು. ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ, ಮಾಜಿ ಕಾರ್ಪೊರೇಟರ್ ಲತೀಫ್ ಕಂದಕ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಬಂಟ್ವಾಳ


ಮಾಣಿ ಸಮೀಪದ ಕೊಡಾಜೆ ಬದ್ರಿಯಾ ಜುಮಾ ಮಸೀದಿ ಆಶ್ರಯದಲ್ಲಿ ಮಿಲಾದುನ್ನಭಿ ಆಚರಣೆ ನೆರವೇರಿತು. ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಅಬ್ಬಾಸ್ ನೇರಳಕಟ್ಟೆ ಹಸಿರು ಧ್ವಜ ಹಸ್ತಾಂತರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು. ಮೆರವಣಿಗೆಯುದ್ದಕ್ಕೂ ಭಾವೈಕ್ಯತಾ ವೇದಿಕೆ, ಮಿಲಾದ್ ಫ್ರೆಂಡ್ಸ್ ಸಂಘಟನೆಗಳ ವತಿಯಿಂದ ಸಿಹಿತಿಂಡಿ, ತಂಪು ಪಾನೀಯ ಹಾಗೂ ಐಸ್ ಕ್ರೀಮ್ ವಿತರಣೆ ನಡೆಯಿತು. ವಿದ್ಯಾರ್ಥಿಗಳ ದಫ್ ತಂಡ, ಸ್ಕೌಟ್ ಪಥಸಂಚಲನ ಮತ್ತು ಫ್ಲವರ್ ಶೋ ಆಕರ್ಷಣೆಯಾಗಿ ಕಂಡುಬಂತು.


ಪ್ರವಾದಿ ಮುಹಮ್ಮದ್ ಮುಸ್ತಫಾ(ಸ.) ಅವರ 1500ನೇ ಜನ್ಮದಿನಾಚರಣೆ ಪ್ರಯುಕ್ತ ನಗರದ ಬಂದರ್ ನ ಅಲ್ ಮದ್ರಸತುಲ್ ಅಝ್ಹರಿಯ ವತಿಯಿಂದ ಶುಕ್ರವಾರ ಬೆಳಗ್ಗೆ ‘ಇಷ್ಕೇ ಮದೀನಾ’ ಮೀಲಾದ್ ರ್‍ಯಾಲಿ ನಡೆಯಿತು. ಇಲ್ಲಿದೆ ಚಿತ್ರಗಳು

 

 

error: Content is protected !!