ಪಾಟ್ನಾ: ಮುಂಭಾಗದಲ್ಲಿ ಹೋಗುತ್ತಿದ್ದ ಟ್ರಕ್ ಗೆ ವೇಗವಾಗಿ ಬಂದ ಕಾರೊಂದು ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮವಾಗ, ಕಾರಿನಲ್ಲಿದ್ದ ಐವರು ಉದ್ಯಮಿಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಿಹಾರದಲ್ಲಿ ಬುಧವಾರ(ಸೆ.3) ತಡರಾತ್ರಿ ಸಂಭವಿಸಿದೆ.
ಪಾಟ್ನಾದ ನಿವಾಸಿಯಾಗಿರುವ ರಾಜೇಶ್ ಕುಮಾರ್ (50), ಪಾಟ್ನಾದ ಪಟೇಲ್ ನಗರದ ನಿವಾಸಿ ಸಂಜಯ್ ಕುಮಾರ್ ಸಿನ್ಹಾ (55), ಪಾಟ್ನಾ ದ ಕಮಲ್ ಕಿಶೋರ್ (38), ಸಮಸ್ತಿಪುರದ ನಿವಾಸಿ ಪ್ರಕಾಶ್ ಚೌರಾಸಿಯಾ (35) ಮತ್ತು ಮುಜಫರ್‌ಪುರ ನಿವಾಸಿ ಸುನಿಲ್ ಕುಮಾರ್ (38) ಮೃತ ಉದ್ಯಮಿಗಳು.
ಐವರು ಉದ್ಯಮಿಗಳು ಬಿಹಾರದ ಫತುಹಾಗೆ ತೆರಳಿ ಬುಧವಾರ ತಡರಾತ್ರಿ ಪಾಟ್ನಾಕ್ಕೆ ಹಿಂತಿರುಗುತ್ತಿದ್ದಾಗ ಬಿಹಾರದ ಪಾರ್ಸಾ ಬಜಾರ್ ಬಳಿಯ ರಾಷ್ಟ್ರೀಯ ಹೆದ್ದಾರಿ 83 ರಲ್ಲಿ ಎದುರುಗಡೆ ಹೋಗುತ್ತಿದ್ದ ಟ್ರಕ್ ಗೆ ಅತಿವೇಗದಿಂದ ಬಂದ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿರುವ ಪರಿಣಾಮ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು ಕಾರಿನೊಳಗೆ ಸಿಲುಕಿದ್ದ ಐವರನ್ನು ಹೊರತೆಗೆಯಲು ಸುಮಾರು ಎರಡು ಗಂಟೆಗಳ ಕಾಲ ಹರಸಾಹಸ ಪಟ್ಟು ಹೊರ ತೆಗೆಯಲಾಯಿತು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
(ಜಾಹೀರಾತು)ಮಂಗಳೂರು: ADVOCATE ಕಚೇರಿಗೆ ಪದವಿ ಪಡೆದಿರುವ ಯುವತಿ ಬೇಕಾಗಿದ್ದಾರೆ. ಸಂಪರ್ಕ ಸಂಖ್ಯೆ: 8660040298
ಮೃತರ ಮೊಬೈಲ್ ಗೆ ಬಂದಿರುವ ಕರೆಗಳ ಆಧಾರದ ಮೇಲೆ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಯಿತು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (PMCH) ಕಳುಹಿಸಲಾಗಿದ್ದು. ಘಟನೆಗೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.