ಸಮರ್ಕಂಡ್: ಫಿಡೆ ಗ್ರಾಂಡ್ ಸ್ವಿಸ್ ಚದುರಂಗ(chess) ಸ್ಪರ್ಧೆಯ ಪ್ರಥಮ ಸುತ್ತಿನಲ್ಲಿ ಭಾರತದ ಮಹಿಳಾ ವಿಶ್ವಕಪ್ ವಿಜೇತ ದಿವ್ಯಾ ದೇಶಮುಖ್ ಅವರಿಗೆ ಆಘಾತಕಾರಿ ಎದುರಾಳಿ ಸಿಕ್ಕಿದ್ದಾರೆ. ಅವರ ತಂತ್ರ ರೂಪಿಸುವಲ್ಲಿ ಹಿಂದೆ ಸಹಕರಿಸಿದ್ದ ಗ್ರ್ಯಾಂಡ್‌ಮಾಸ್ಟರ್ ಅಭಿಮಾನಿ ಪುರಣಿಕ್ ಅವರೇ ಮೊದಲ ಸುತ್ತಿನಲ್ಲಿ ಎದುರಾಳಿಯಾಗಿ ನಿಂತಿದ್ದಾರೆ.
116 ಆಟಗಾರರ ಪೈಕಿ ದಿವ್ಯಾ ಕಡಿಮೆ ರೇಟಿಂಗ್ ಹೊಂದಿದ್ದರೂ, ಮಹಿಳಾ ವಿಭಾಗ ಬಿಟ್ಟು ಪುರುಷರ ವಿಭಾಗವನ್ನು ಆರಿಸಿಕೊಂಡಿದ್ದಾರೆ. “ಶಕ್ತಿಶಾಲಿ ಎದುರಾಳಿಗಳ ವಿರುದ್ಧ ಆಡುವುದರಿಂದ ಮನೋಬಲ ಹೆಚ್ಚುತ್ತದೆ” ಎಂಬ ವಿಶ್ವಾಸದಿಂದ ಅವರು ಈ ಸವಾಲು ಒಪ್ಪಿಕೊಂಡಿದ್ದಾರೆ.

ಈ ಟೂರ್ನಿಯಲ್ಲಿ ಗುಕೇಶ್, ಪ್ರಗ್ನಾನಂದಾ, ಅರ್ಜುನ್ ಎರಿಗೈಸಿ, ವಿದ್ಯತ್ ಗುಜ್ರಾತಿ ಸೇರಿದಂತೆ 18 ಭಾರತೀಯರು ಸ್ಪರ್ಧಿಸುತ್ತಿದ್ದು, ಇಯಾನ್ ನೆಪೋಮ್ನಿಯಾಚ್ಚಿ, ಲೆವಾನ್ ಅರೋನಿಯನ್, ಅನೀಶ್ ಗಿರಿ ಮುಂತಾದ ಅಂತರರಾಷ್ಟ್ರೀಯ ದಿಗ್ಗಜರೂ ಪಾಲ್ಗೊಂಡಿದ್ದಾರೆ.