ಮಂಗಳೂರು: ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಈ ವರ್ಷದ ನವರಾತ್ರಿ ಮಹೋತ್ಸವವು ಸೆಪ್ಟೆಂಬರ್ 22 ಸೋಮವಾರದಿಂದ ಪ್ರಾರಂಭವಾಗಿ ಅಕ್ಟೋಬರ್ 1 ಬುಧವಾರದವರೆಗೆ ನಡೆಯಲಿದೆ.
ಪ್ರತಿದಿನ ಮಧ್ಯಾಹ್ನ ಚಂಡಿಕಾಹೋಮ ನಡೆಯಲಿದ್ದು, ರಾತ್ರಿ 8 ಗಂಟೆಗೆ ನವರಾತ್ರಿ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರಿಗಾಗಿ ಆಯೋಜಿಸಲಾಗಿವೆ.
ದೇವಸ್ಥಾನ ಸಮಿತಿ ಭಕ್ತರನ್ನು ಮಹೋತ್ಸವದಲ್ಲಿ ಭಾಗವಹಿಸಲು ಆಹ್ವಾನಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವಿಯ ಅನುಗ್ರಹ ಪಡೆಯುವಂತೆ ಕೋರಿದೆ.