ಬಂಧಿತ ಅತ್ಯಾಚಾರ ಆರೋಪಿ, ಎಎಪಿ ಶಾಸಕ ಪೊಲೀಸರಿಗೆ ಗುಂಡು ಹೊಡೆದು ಪರಾರಿ

ಪಂಜಾಬ್:‌ ಅತ್ಯಾಚಾರ ಪ್ರಕರಣದಲ್ಲಿ ಬಂಧಿತ ಪಂಜಾಬ್ ಆಮ್‌ ಆದ್ಮಿ ಪಕ್ಷದ ಶಾಸಕನೊಬ್ಬ ಪೊಲೀಸರ ಮೇಲೆ ಗುಂಡು ಹಾರಿಸಿ, ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾದ ಆಘಾತಕಾರಿ ಘಟನೆ ಇಂದು ನಡೆದಿದೆ. ಈತನನ್ನು ಹಿಡಿಯಲು ಪೊಲೀಸರು ಬೆನ್ನತ್ತಿದ್ದಾರೆ.

ಸನೂರ್‌ನ ಎಎಪಿ ಶಾಸಕ ಹರ್ಮೀತ್ ಪಠಣಮಜ್ರಾನನ್ನು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಇಂದು ಬೆಳಿಗ್ಗೆ ಕರ್ನಾಲ್‌ನಲ್ಲಿ ಬಂಧಿಸಲಾಗಿದೆ. ಈತನನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದಾಗ, ಪಠಣಮಜ್ರಾ ಮತ್ತು ಆತ ಸಹಾಯಕರು ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿದ್ದಾರೆ. ಒಬ್ಬ ಪೊಲೀಸ್ ಇದನ್ನು ತಡೆಯಲು ಪ್ರಯತ್ನಿಸಿದಾಗ, ಆತನ ಮೇಲೆ ಹಲ್ಲೆ ನಡೆಸಿ ಎರಡು ಎಸ್‌ಯುವಿ ಕಾರ್‌ಗಳಲ್ಲಿ ಪರಾರಿಯಾಗಿದ್ದಾರೆ.

ಆದರೂ ಬಿಡದ ಪೊಲೀಸರು ಪೊಲೀಸರು ಶಾಸಕನ ಬೆಂಗಾವಲು ಫಾರ್ಚೂನರ್ ಅನ್ನು ತಡೆಹಿಡಿಯುವಲ್ಲಿ ಯಶಸ್ವಿಯಾದರು, ಆದರೆ ಶಾಸಕ ಇನ್ನೊಂದು ವಾಹನದಲ್ಲಿದ್ದು, ಪರಾರಿಯಾಗಿದ್ದಾನೆ. ಈತನನ್ನು ಬೆನ್ನತ್ತಿ ಹಲವಾರು ಪೊಲೀಸ್ ತಂಡಗಳು ಬೇಟೆಗೆ ಹೊರಟಿವೆ.

ದೇಶದ ಇತಿಹಾಸದಲ್ಲಿ ಒಬ್ಬ ಶಾಸಕನೋರ್ವ ದೇಶದ ಕಾನೂನಿಗೆ ಸೆಡ್ಡು ಹೊಡೆದು ಪರಾರಿಯಾಗಿರುವುದು ಅತ್ಯಂತ ಕೆಟ್ಟ ಘಟನೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಈ ಮೂಲಕ ಆಮ್‌ ಆದ್ಮಿ ಪಕ್ಷದ ಘನತೆ ಮಣ್ಣು ಪಾಲಾಗಿದೆ ಎಂಬ ಆರೋಪ ಕೇಳಿಬಂದಿದೆ.

error: Content is protected !!