ಮಂಗಳೂರು: ಜಯ ಸುವರ್ಣ ಸಂಸ್ಮರಣೆಯ ಅಂಗವಾಗಿ ಜಯ ಸಿ ಸುವರ್ಣ ಜನಸೇವಾ ಪುರಸ್ಕಾರ ಶಿವಗಿರಿ ಸಮ್ಮಾನ್ ಪ್ರಶಸ್ತಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಸೆಪ್ಟಂಬರ್ 7 ರಂದು ಭಾನುವಾರ ಮುಂಬಯಿಯ ಜಯಲೀಲಾ ಬ್ಯಾಂಕ್ವೆಟ್ ಹಾಲ್ ಗೋರೆಗಾಂವ್ ಪೂರ್ವ ಇಲ್ಲಿ ಜಯ ಸಿ ಸುವರ್ಣ ಅಭಿಮಾನಿಗಳು ಮತ್ತು ಮುಂಬಯಿ ಬಿಲ್ಲವರು ಆಯೋಜಿಸಿರುವ 171 ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆಯ ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಐಕಳ ಹರೀಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಗುತ್ತದೆ.
(ಜಾಹೀರಾತು)ಮಂಗಳೂರು: ADVOCATE ಕಚೇರಿಗೆ ಪದವಿ ಪಡೆದಿರುವ ಯುವತಿ ಬೇಕಾಗಿದ್ದಾರೆ. ಸಂಪರ್ಕ ಸಂಖ್ಯೆ: 8660040298
ಐಕಳ ಹರೀಶ್ ಶೆಟ್ಟಿ ಅವರು ವಿಶ್ವಮಟ್ಟದಲ್ಲಿ ಸಮಾಜಸೇವೆಯ ಮೂಲಕ ಗುರುತಿಸಿಕೊಂಡವರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಜೊತೆಗೆ ನೂರಕ್ಕೂ ಮಿಕ್ಕಿದ ಸನ್ಮಾನ, ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ಐಕಳ ಅವರ ಸಮಾಜ ಸೇವೆ, ಸಂಘಟನಾ ಚತುರತೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.