ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಗೋಪಾಲಯ್ಯ ನೇತೃತ್ವದಲ್ಲಿ ಧರ್ಮಸ್ಥಳದ ವಿರುದ್ಧದ ಷಡ್ಯಂತ್ರವನ್ನು ಖಂಡಿಸಿ ಧರ್ಮಸ್ಥಳ ಚಲೋ ಯಾತ್ರೆ ಪ್ರಾರಂಭವಾಗಿದೆ.
ʻನಮ್ಮ ನಡಿಗೆ-ಧರ್ಮದೆಡೆಗೆʼ ಎಂಬ ಘೋಷ ವಾಕ್ಯದಡಿ ಧರ್ಮಸ್ಥಳ ಚಲೋ ಯಾತ್ರೆಯನ್ನು ಆಯೋಜಿಸಲಾಗಿದ್ದು, ಇಂದು(ಸೆ.1) ಬೆಳಗ್ಗೆ ರಾಣಿ ಅಬ್ಬಕ್ಕ ಆಟದ ಮೈದಾನದಿಂದ ಸಾವಿರಾರು ಕಾರ್ಯಕರ್ತರೊಂದಿಗೆ ನೂರಾರು ವಾಹನದಲ್ಲಿ ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಿಂದ ನಾವೆಲ್ಲ ಬಸ್‌ಗಳಲ್ಲಿ ಧರ್ಮಸ್ಥಳಕ್ಕೆ ಹೋಗಬೇಕೆಂದುಕೊಂಡಿದ್ದೆವು. ಆದರೆ ಬಸ್ ತಡೆಯುವ ಸಾಧ್ಯತೆ ಇರುವುದರಿಂದ ಕಾರುಗಳು ಮತ್ತು ಟೆಂಪೊ ಟ್ರಾವೆಲ್ಸ್ ಮೂಲಕ ಹೊರಟಿದ್ದೇವೆ ಎಂದು ಹೇಳಿದರು.
ಮಂಗಳೂರು: ಮುಸ್ಲಿಂ ಕುಟುಂಬವೊಂದಕ್ಕೆ ಮನೆಯಲ್ಲಿ ಅಡುಗೆ ಮಾಡಿಕೊಡಲು ಮುಸ್ಲಿಂ ಮಹಿಳೆ ಬೇಕಾಗಿದ್ದಾರೆ. Salary 25000/- ಸಂಪರ್ಕ ಸಂಖ್ಯೆ: 8660040298
ನಮ್ಮ ಧರ್ಮ ಉಳಿಯಬೇಕು, ಅದಕ್ಕಾಗಿ ಈ ಹೋರಾಟ ಪ್ರಾರಂಭವಾಗಿದೆ. ಕಳೆದ ಒಂದುವರೆ ತಿಂಗಳಿಂದ ಮಂಜುನಾಥೇಶ್ವರ ಮತ್ತು ಅಣ್ಣಪ್ಪ ಸ್ವಾಮಿಯ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ಇದರ ಹಿಂದೆ ಯಾರಿದ್ದಾರೆ ಮತ್ತು ಯಾರು ಷಡ್ಯಂತ್ರ ಮಾಡಿದ್ದಾರೆ ಎಂಬುದು ಜನತೆಗೆ ತಿಳಿಯಬೇಕು. ಹಾಗಾಗಿ ಇದನ್ನು ಎನ್‌ಐಎ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ಎನ್‌ಐಎ ತನಿಖೆ ಆದರೆ ಇದರ ಹಿಂದೆ ಯಾರಿದ್ದಾರೆ ಎಂಬುದು ತಿಳಿಯುತ್ತದೆ. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದಿರುವಂತಹ ಪಿತೂರಿ. ಹಾಗಾಗಿ ಎನ್‌ಐಎ ತನಿಖೆ ಸೂಕ್ತ ಎಂದಿದ್ದಾರೆ.