ಜಲಾಲಾಬಾದ್ (ಆಫ್ಘಾನಿಸ್ತಾನ): ಆಫ್ಘಾನಿಸ್ತಾನದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಈಗಾಗಲೇ 622ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂಬುದಾಗಿ ತಾಲಿಬಾನ್ ಆಡಳಿತದ ಗೃಹ ಸಚಿವಾಲಯ ಅಧಿಕೃತವಾಗಿ ದೃಢಪಡಿಸಿದೆ. ಅಲ್ಲದೆ 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ನೂರಾರು ಮಂದಿ ನಾಪತ್ತೆಯಾಗಿದ್ದಾಗಿ ವರದಿಯಾಗಿದೆ.
ಭೂಕಂಪದ ತೀವ್ರತೆ 6.3 ಮ್ಯಾಗ್ನಿಟ್ಯೂಟ್ ಇದ್ದು, ಇದರ ಕೇಂದ್ರಬಿಂದು ನಂಗರ್ಹಾರ್ ಪ್ರಾಂತ್ಯದ ಜಲಾಲಾಬಾದ್ ನಗರದ ಸಮೀಪವಾಗಿತ್ತು. ಭೂಗರ್ಭಶಾಸ್ತ್ರ ಸಂಸ್ಥೆ (USGS) ನೀಡಿರುವ ಮಾಹಿತಿಯಂತೆ ಭೂಗರ್ಭದ 140 ಕಿ. ಆಳದಿಂದ 4.7ರಷ್ಟು ತೀವ್ರತೆ ಕಂಪನವಾಗಿದ್ದು, ಮೊದಲ ಕಂಪನ ಸಂಭವಿಸಿದ ಬೆನ್ನಲ್ಲೇ ಭೂಮಿ ಮತ್ತೊಮ್ಮೆ 4.7 ತೀವ್ರತೆಯಲ್ಲಿ ಕಂಪಿಸಿದ್ದಾಗಿ ವರದಿಯಾಗಿದೆ.
ಹೆಚ್ಚು ಹಾನಿಯಾದ ಪ್ರದೇಶಗಳಲ್ಲಿ ರಕ್ಷಣಾ ತಂಡಗಳು ಮಣ್ಣಿನಡಿ ಸಿಲುಕಿರುವವರ ಹುಡುಕಾಟದಲ್ಲಿ ನಿರತರಾಗಿವೆ. ತೀವ್ರ ಹಾನಿಯಾದ ಪ್ರದೇಶಗಳು ಬೆಟ್ಟಗಳಿಂದ ಕೂಡಿರುವುದರಿಂದ ಅಲ್ಲಿಗೆ ಪ್ರವೇಶಿಸಲು ಅಡಚಣೆ ಉಂಟಾಗಿದೆ.
ಆರೋಗ್ಯ ಇಲಾಖೆ ವಕ್ತಾರ ಶರಾಫತ್ ಜಮಾನ್ನವರು ಹೇಳಿರುವಂತೆ, “ಸತ್ತವರ ಸಂಖ್ಯೆ ಇನ್ನೂ ಹೆಚ್ಚು ಆಗಬಹುದು. ಹಲವು ಪ್ರದೇಶಗಳಲ್ಲಿ ಸಂಪರ್ಕ ಸ್ಥಗಿತವಾಗಿದೆ” ಎಂದಿದ್ದಾರೆ.
ಇತಿಹಾಸದಲ್ಲೇ ಭೀಕರ
ಆಫ್ಘಾನಿಸ್ತಾನವನ್ನು 2023ರಲ್ಲಿ ಇದೇ ರೀತಿಯ ಭೂಕಂಪ ಸಂಭವಿಸಿತ್ತು. 2023ರಲ್ಲಿ ನಡೆದ ಭೂಕಂಪದಲ್ಲಿ ತಾಲಿಬಾನ್ ಪ್ರಕಾರ ಸುಮಾರು 4,000 ಮಂದಿ ಪ್ರಾಣ ಕಳೆದುಕೊಂಡಿದ್ದರು. ಆದರೆ, ಯುನೈಟೆಡ್ ನೇಷನ್ಸ್ ಪ್ರಕಾರ ಅದು 1,500 ಎಂದು ವರದಿಯಾಗಿತ್ತು.
ಭೂಕಂಪದ ಹಿನ್ನಲೆ: ಆಫ್ಘಾನಿಸ್ತಾನವು ಭೂಕಂಪಕ್ಕೆ ಬಹಳಷ್ಟು ಪ್ರಾಪ್ತವಾಗಿರುವ ಪ್ರದೇಶ. ಇದು ಹಿಂದೂಕುಶ ಪರ್ವತ ಶ್ರೇಣಿಯಲ್ಲಿ *ಭಾರತ ಮತ್ತು ಯುರೇಷಿಯನ್ ಪ್ಲೇಟ್‌ಗಳು ಸಂಧಿಸುತ್ತವೆ. ಇದು ಖಂಡಾಂತರ ಪ್ರದೇಶಗಳು ಸಂಧಿಸುವುದರಿಂದ ಭೂಗರ್ಭದ ಘರ್ಷಣೆಯಿಂದ ಇಲ್ಲಿ ಆಗಾ ಭೂಕಂಪ ಸಂಭವಿಸುತ್ತದೆ ಎನ್ನುವುದು ವಿಜ್ಞಾನಿಗಳ ವಿವರಣೆ.