ಕನ್ನಡ ಚಿತ್ರರಂಗದ ಖ್ಯಾತ ಬರಹಗಾರ ಎಸ್‌.ಎಸ್‌.ಡೇವಿಡ್‌ ನಿಧನ !

ಬೆಂಗಳೂರು: ಕನ್ನಡ ಸಿನಿಮಾ ಖ್ಯಾತ ಸಂಭಾಷಣೆಕಾರ ಎಸ್‌. ಎಸ್‌.ಡೇವಿಡ್‌ (55) ಭಾನುವಾರ (ಆ.31) ಸಂಜೆ 7:30ರ ಸುಮಾರಿಗೆ ನಿಧನ ಹೊಂದಿದ್ದಾರೆ.

ಅನಾರೋಗ್ಯದಿಂದ ಆರ್‌. ಆರ್‌.ನಗರದ ಎಸ್.ಎಸ್ ಆಸ್ಪತ್ರೆಯಲ್ಲಿ ದಾಖಲಾದ ಡೇವಿಡ್‌ ಅವರು ಹೃದಯಾಘಾತಕ್ಕೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಮಂಗಳೂರು: ಮುಸ್ಲಿಂ ಕುಟುಂಬವೊಂದಕ್ಕೆ ಮನೆಯಲ್ಲಿ ಅಡುಗೆ ಮಾಡಿಕೊಡಲು ಮುಸ್ಲಿಂ ಮಹಿಳೆ ಬೇಕಾಗಿದ್ದಾರೆ. Salary 25000/- ಸಂಪರ್ಕ ಸಂಖ್ಯೆ: 8660040298

ಕನ್ನಡದ ಹಿಟ್‌ ಸಿನಿಮಾಗಳಾದ ಪೊಲೀಸ್‌ ಸ್ಟೋರಿ, ಅಗ್ನಿ ಐಪಿಎಸ್‌ , ತಿರುಪತಿ, ಮಂಡ್ಯ ಸೇರಿದಂತೆ ಹಲವು ಚಿತ್ರಗಳಿಗೆ ಸಂಭಾಷಣೆ, ಚಿತ್ರಕತೆ ಬರೆದಿದ್ದ ಡೇವಿಡ್‌ ಕೆಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಗಡಿಪಾರು, ಪೊಲೀಸ್‌ ಡಾಗ್‌ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಜತೆಗೆ ಕೆಲವು ಸಿನಿಮಾಗಳಲ್ಲಿ ನಟರಾಗಿಯೂ ಗುರುತಿಸಿಕೊಂಡಿದ್ದಾರೆ.

error: Content is protected !!