ʻTrump Is Dead!!: ಸೋಷಿಯಲ್‌ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದ ಉಪಾಧ್ಯಕ್ಷ ವ್ಯಾನ್ಸ್ ಹೇಳಿಕೆ

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುರಿತಂತೆ “Trump Is Dead” ಎಂಬ ಪದ ಸೋಷಿಯಲ್‌ ಮೀಡಿಯಾಗಳಲ್ಲಿ ಟ್ರೆಂಡ್‌ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ಆಗಸ್ಟ್ 27ರಂದು USA Todayಗೆ ನೀಡಿದ ಸಂದರ್ಶನದಲ್ಲಿ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌ ಅವರು, “ಅಧ್ಯಕ್ಷ ಟ್ರಂಪ್ ಅವರಿಗೆ ಯಾವದೇ ದುರ್ಘಟನೆ ಸಂಭವಿಸಿದರೆ, ನಾನು ಅಧ್ಯಕ್ಷ ಸ್ಥಾನ ವಹಿಸಲು ಸಿದ್ಧನಿದ್ದೇನೆ” ಎಂದು ಹೇಳಿದ ಮಾತುಗಳೇ ಇಷ್ಟೆಲ್ಲಾ ರಚ್ಚಾಪಚ್ಚ ಆಗಲು ಕಾರಣ.

ಇತ್ತೀಚೆಗೆ ಟ್ರಂಪ್ ಅವರ ಬಲಗೈಯಲ್ಲಿ ಕಂಡುಬಂದ ಗಾಯದ ಗುರುತು ಈಗಾಗಲೇ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದನ್ನು ವ್ಯಾನ್ಸ್ ಅವರ ಹೇಳಿಕೆಯೊಂದಿಗೆ ಸಂಪರ್ಕಿಸಿ, ಟ್ರಂಪ್ ಅವರ ಆರೋಗ್ಯ ಸ್ಥಿತಿ ಬಗ್ಗೆ ಪ್ರಶ್ನೆಗಳು ಮತ್ತೆ ತಲೆದೋರಿವೆ.

ಆದರೆ, ವ್ಯಾನ್ಸ್ ಸ್ಪಷ್ಟಪಡಿಸಿರುವಂತೆ “ಟ್ರಂಪ್ ಅತ್ಯುತ್ತಮ ಆರೋಗ್ಯದಲ್ಲಿದ್ದಾರೆ” ಎನ್ನುವುದು ಸತ್ಯ. ತಮ್ಮ ಹೇಳಿಕೆಯನ್ನು ನಾಯಕತ್ವದ ಸಿದ್ಧತೆ ತೋರಿಸಲು ನೀಡಿದ್ದರೂ, ಅವರ ಹೇಳಿಕೆಯ ತಾತ್ಪರ್ಯ ಅರ್ಥವಾಗದೆ ಅಮೆರಿಕಾದ ನಾಗರಿಕರು ಗಾಬರಿ ಬಿದ್ದರು.

ಈ ಬೆಳವಣಿಗೆಗೆ ಸಂಬಂಧಿಸಿದಂತೆ ಅಮೆರಿಕಾದ ರಾಜಕೀಯ ವಲಯ ಮತ್ತು ಮಾಧ್ಯಮಗಳಲ್ಲಿ ಚರ್ಚೆ ತೀವ್ರಗೊಂಡಿದ್ದು, ಟ್ರಂಪ್ ಅವರ ವಯಸ್ಸು, ಆರೋಗ್ಯ ಹಾಗೂ ಮುಂಬರುವ ಚುನಾವಣೆಯಲ್ಲಿ ಅವರ ಪಾತ್ರ ಮತ್ತೊಮ್ಮೆ ಕೇಂದ್ರಬಿಂದು ಆಗಿದೆ.

error: Content is protected !!