ಇಂಟಕ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆಯಾಗಿ ಖ್ಯಾತ ನ್ಯಾಯವಾದಿ ಕರೀಷ್ಮಾ ಎಸ್. ಆಯ್ಕೆ!

ಮಂಗಳೂರು: ಇಂಟಕ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆಯಾಗಿ ಖ್ಯಾತ ನ್ಯಾಯವಾದಿ ಕರೀಷ್ಮಾ ಎಸ್. ಅವರು ಆಯ್ಕೆಯಾಗಿದ್ದಾರೆ.


ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾ‌ರ್, ಕಾನೂನು ಮತ್ತು ಮಾಹಿತಿ ಹಕ್ಕುಗಳ ವಿಭಾಗದ ಉಪಾಧ್ಯಕ್ಷರಾದ ಡಾ| ಎಜೆ ಅಕ್ರಂ ಪಾಶಾ ಹಾಗೂ ಇಂಡಿಯನ್ ನ್ಯಾಶನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ಅಧ್ಯಕ್ಷ ಟಿ.ವೈ ಕುಮಾರ್ ಅವರ ಆದೇಶದ ಮೇರೆಗೆ ಈ ಆಯ್ಕೆ ನಡೆದಿದ್ದು ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ (ಐ.ಎನ್.ಟಿ.ಯು.ಸಿ) ಕಾಂಗ್ರೆಸ್ ವಿಭಾಗದ ಮಂಗಳೂರು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆಯನ್ನಾಗಿ ಕರಿಷ್ಮಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ.


ಕರೀಷ್ಮಾ ಎಸ್. ಅವರು ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಿದ್ದು ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. “ವಾಯ್ಸ್ ಆಫ್ ಪಬ್ಲಿಕ್” ಸುದ್ದಿ ಮಾಧ್ಯಮದ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಚೈಲ್ಡ್ ವೆಲ್ಫೇರ್ ಬ್ಯುರೋದ ಸಹ ಸಂಸ್ಥಾಪಕಿಯಾಗಿದ್ದು ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಾರೆ.

ಮಂಗಳೂರು: ಮುಸ್ಲಿಂ ಕುಟುಂಬವೊಂದಕ್ಕೆ ಮನೆಯಲ್ಲಿ ಅಡುಗೆ ಮಾಡಿಕೊಡಲು ಮುಸ್ಲಿಂ ಮಹಿಳೆ ಬೇಕಾಗಿದ್ದಾರೆ. Salary 25000/- ಸಂಪರ್ಕ ಸಂಖ್ಯೆ: 8660040298

error: Content is protected !!