ಜೈಪುರ್: ಐಪಿಎಲ್ 2026ಕ್ಕೂ ಮುನ್ನವೇ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಸ್ಥಾನದಿಂದ ಮಾಜಿ ಭಾರತೀಯ ನಾಯಕ ರಾಹುಲ್ ದ್ರಾವಿಡ್ ಹಿಂದೆ ಸರಿಯಲಿದ್ದಾರೆ ಎಂದು ಫ್ರಾಂಚೈಸಿ ಶನಿವಾರ ಅಧಿಕೃತವಾಗಿ ಘೋಷಿಸಿದೆ.
ಇತ್ತೀಚಿನ ರಾಯಲ್ಸ್ ಸಂಸ್ಥೆಯ ಪುನರ್ ಪರಿಶೀಲನೆಯ ಭಾಗವಾಗಿ, ದ್ರಾವಿಡ್‌ಗೆ ಹೊಸ ಜವಾಬ್ದಾರಿಯನ್ನು ನೀಡಲು ಮುಂದಾಗಿದ್ದರೂ, ಅದನ್ನವರು ಸ್ವೀಕರಿಸಲು ನಿರಾಕರಿಸಿದ್ದಾರೆ.
“ರಾಹುಲ್ ನಾಯಕತ್ವವು ಹಲವು ತಲೆಮಾರಿನ ಆಟಗಾರರ ಮೇಲೆ ಪ್ರಭಾವ ಬೀರಿದೆ, ತಂಡದೊಳಗೆ ಶ್ರೇಷ್ಠ ಮೌಲ್ಯಗಳನ್ನು ಬೆಳೆಸಿದೆ ಮತ್ತು ಫ್ರಾಂಚೈಸಿಯ ಸಂಸ್ಕೃತಿಯ ಮೇಲೆ ಅಳಿಸದ ಗುರುತು ಮೂಡಿಸಿದೆ. ರಾಜಸ್ಥಾನ್ ರಾಯಲ್ಸ್, ನಮ್ಮ ಆಟಗಾರರು ಹಾಗೂ ವಿಶ್ವದಾದ್ಯಂತದ ಲಕ್ಷಾಂತರ ಅಭಿಮಾನಿಗಳು ದ್ರಾವಿಡ್ ಅವರ ಸೇವೆಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಾರೆ,” ಎಂದು ಫ್ರಾಂಚೈಸಿ ಪ್ರಕಟಣೆ ತಿಳಿಸಿದೆ.
ಕಳೆದ ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಒಟ್ಟು 10 ಪಂದ್ಯಗಳಲ್ಲಿ ಕೇವಲ 4ರಲ್ಲಷ್ಟೇ ಜಯ ಗಳಿಸಿದ ತಂಡ, ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಐದು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್‌ಗಿಂತ ಒಂದು ಹಂತ ಮೇಲೆಯೇ ಸ್ಥಾನ ಪಡೆದಿತ್ತು.