ಉತ್ತರಪ್ರದೇಶ: ವಿವಾಹವಾದ ಒಂದೇ ವರ್ಷಕ್ಕೆ ಮಹಿಳೆಯೊಬ್ಬಳನ್ನು ವರದಕ್ಷಿಣೆಗಾಗಿ ಪತಿ, ಅತ್ತೆ, ಮಾವ ಸೇರಿ ಕಿರುಕುಳ ಕೊಟ್ಟು ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಅಮೋರ್ಹಾದಲ್ಲಿ ನಡೆದಿದೆ.
ಗುಲ್ ಫಿಜಾ ವರದಕ್ಷಿಣೆಯ ಕಿರುಕುಳಕ್ಕೆ ತುತ್ತಾಗಿ ಹತ್ಯೆಗೊಳಪಟ್ಟವರು.
ಗುಲ್ ಫಿಜಾ ಅವರು ಒಂದು ವರ್ಷದ ಹಿಂದೆ ಅಮ್ರೋಹಾದ ಕಾಲಾ ಖೇಡಾ ಗ್ರಾಮದ ಪರ್ವೇಜ್ ಅವರನ್ನು ವಿವಾಹವಾಗಿದ್ದರು. ಇದಾದ ಬಳಿಕ ಪತಿ ಮನೆಯಿಂದ ವರದಕ್ಷಿಣೆ ಕಿರುಕುಳ ನೀಡಲು ಶುರುವಾಗಿದೆ ಎಂದು ಗುಲ್ ಫಿಜಾ ತನ್ನ ಪೋಷಕರಲ್ಲಿ ಹೇಳಿಕೊಂಡಿದ್ದಳು, ಆದರೆ ತಾಯಿ ಮನೆಯವರು ಮಗಳನ್ನು ಪತಿ ಮನೆಯಲ್ಲಿ ಸ್ವಲ್ಪ ಹೊಂದಿಕೊಂಡು ಹೋಗುವಂತೆ ಹೇಳಿದ್ದಾರೆ. ಆದರೂ ಪತಿ ಮನೆಯವರ ಕಿರುಕುಳ ಮಾತ್ರ ಕಡಿಮೆಯಾಗಿಲ್ಲ.
ಇತ್ತೀಚಿಗೆ ಗುಲ್ ಫಿಜಾ ಅವರ ಅತ್ತೆ ಮಾವ ತನ್ನ ಮಗನಿಗೆ ಹೊಸ ಕಾರು ಮತ್ತು ಹಣ ನೀಡುವಂತೆ ಕೇಳಿಕೊಂಡಿದ್ದಾರೆ ಆದರೆ ಇದನ್ನು ನೀಡಲು ಸಾಧ್ಯವಾಗದಿದ್ದಾಗ ಆಗಸ್ಟ್ 11 ರಂದು ಅತ್ತೆ ಮಾವ ಸೇರಿಕೊಂಡು ಸೊಸೆಗೆ ಬಲವಂತವಾಗಿ ಆ್ಯಸಿಡ್ ಕುಡಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಆಕೆಯನ್ನು ಅತ್ತೆ ಮನೆಯವರೇ ಮೊರಾದಾಬಾದ್‌ನ ಆಸ್ಪತ್ರೆಗೆ ದಾಖಲಿಸಿ ಸೊಸೆ ಮನೆಯವರಿಗೆ ವಿಚಾರ ತಿಳಿಸಿದ್ದಾರೆ. ಇದಾದ ಬಳಿಕ ಸುಮಾರು ಹದಿನೇಳು ದಿನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಕೊನೆಯುಸಿರೆಳೆದಿದ್ದಾರೆ.
ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
ಗುಲ್ ಫಿಜಾ ಪೋಷಕರು ಪತಿ ಪರ್ವೇಜ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳ ಸೇರಿದಂತೆ ಹಲ್ಲೆ ಮತ್ತು ಇತರ ಆರೋಪಗಳಿಗೆ ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ಪ್ರಕರಣ ಸಂಬಂಧಿಸಿ ಮೊರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.