ತುಳುಭಾಷೆಯ 150ನೇ ಚಿತ್ರ “ನೆತ್ತೆರ್ ಕೆರೆ” ಬಿಡುಗಡೆ!

ಮಂಗಳೂರು: “ವಿಭಿನ್ನ ಪರಿಕಲ್ಪನೆಯ ಚಿತ್ರವೊಂದು ತುಳುವಲ್ಲಿ ಬರುತ್ತಿದೆ. ನಿರ್ದೇಶಕ ಸ್ವರಾಜ್ ಶೆಟ್ಟಿಯ ಹಲವು ದಿನಗಳ ಕನಸು ‘ನೆತ್ತರಕೆರೆ’ ಮೂಲಕ ಸಾಕಾರಗೊಳ್ಳುತ್ತಿದೆ. ತುಳುಭಾಷೆಯ 150ನೇ ಚಿತ್ರ ಯಶಸ್ವಿಯಾಗಲಿ“ ಎಂದು ಹಿರಿಯ ರಂಗಭೂಮಿ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್ ಹೇಳಿದರು.

ಅವರು ಮಂಗಳೂರಿನ ಬಿಗ್ ಸಿನಿಮಾಸ್ ‌ನಲ್ಲಿ ಅಸ್ತ್ರ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ಲಂಚುಲಾಲ್ ಕೆ.ಎಸ್. ನಿರ್ಮಾಣದ ಸ್ವರಾಜ್ ಶೆಟ್ಟಿ ನಿರ್ದೇಶನದ “ನೆತ್ತರಕೆರೆ”ತುಳು ಚಿತ್ರವನ್ನು ದೀಪ ಬೆಳಗಿಸುವ ಮೂಲಕ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಲಿಂಕ್ ಬಳಸಿಕೊಳ್ಳಿ.

ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ ಮಾತನಾಡಿ, “ಇದುವರೆಗೆ ತುಳುವಲ್ಲಿ ಕಾಮಿಡಿ ಚಿತ್ರಗಳು ಬರುತ್ತಿದ್ದವು. ಇದೀಗ ವಿಭಿನ್ನ ಚಿತ್ರಗಳು ಬರಲಾರಂಭಿಸಿದೆ, ಚಿತ್ರಕ್ಕೆ ಎಲ್ಲರ ಸಹಕಾರವಿರಲಿ” ಎಂದರು.

ಸಾಮಾಜಿಕ ಹೋರಾಟಗಾರ ಕಿರಿಕ್ ಕೀರ್ತಿ ಮಾತಾಡಿ, “ಚಿತ್ರದ ಟ್ರೈಲರ್ ನೋಡಿ ವಿಮಾನ ಹತ್ತಿ ಚಿತ್ರ ನೋಡಲು ಮಂಗಳೂರಿಗೆ ಬಂದಿದ್ದೇನೆ, ಚಿತ್ರ 150ಕ್ಕೂ ಹೆಚ್ಚು ದಿನಗಳ ಓಡಲಿ” ಎಂದರು.

ನಿರ್ದೇಶಕ ಸ್ವರಾಜ್ ಶೆಟ್ಟಿ ಮಾತಾಡಿ, “ತುಳುವಲ್ಲಿ ಬದಲಾವಣೆ ಇರಬೇಕು ಎಂದು ನೆತ್ತೆರೆಕೆರೆ ಚಿತ್ರ ಮಾಡಲಾಗಿದೆ. ಇದಕ್ಕೆ ತುಳುನಾಡಿನ ಸಮಸ್ತ ಜನರ ಸಹಕಾರ, ಆಶೀರ್ವಾದ ಇರಲಿ” ಎಂದರು.

ವೇದಿಕೆಯಲ್ಲಿ ಇಸ್ಮಾಯಿಲ್ ಮೂಡುಶೆಡ್ಡೆ, ಲಕ್ಷ್ಮಣ್ ಕುಂದರ್, ಕಿಶೋರ್ ಶೆಟ್ಟಿ, ಸಂತೋಷ್ ಶೆಟ್ಟಿ, ಎ.ಕೆ.ವಿಜಯ ಕೋಕಿಲ, ಆರ್. ಧನರಾಜ್, ಹಿರಿಯ ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ಶೋಧನ್ ಶೆಟ್ಟಿ, ಶಶಿರಾಜ್‌ ಕಾವೂರು, ದಿಶಾಲಿ ಪೂಜಾರಿ, ಉದಯ್ ಬಳ್ಳಾಲ್ , ವಿನೋದ್ ರಾಜ್ ಕೋಕಿಲ, ಸಚಿನ್ ಎ.ಎಸ್., ನವೀನ್ ಶೆಟ್ಟಿ ಎಡ್ಮೆಮಾರ್, ಅಬು ಸಲೀಂ ಉಪಸ್ಥಿತರಿದ್ದರು.

ಸಿನಿಮಾ ಕುರಿತು:

ಸಿನಿಮಾಕ್ಕೆ ಚೇಳಾಯರು, ಮುಲ್ಕಿ, ಕಿನ್ನಿಗೋಳಿಯಲ್ಲಿ ಚಿತ್ರೀಕರಣ ನಡೆದಿದೆ. ಸ್ವರಾಜ್ ಶೆಟ್ಟಿ ಸಿನಿಮಾಕ್ಕೆ ಚಿತ್ರಕತೆ , ಸಂಭಾಷಣೆಯೊಂದಿಗೆ ನಿರ್ದೇಶನದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರಲ್ಲದೆ ನಾಯಕ ನಟನಾಗಿಯೂ ಅಭಿನಯಿಸಿದ್ದಾರೆ. ನಾಯಕಿಯಾಗಿ ದಿಶಾಲಿ ಪೂಜಾರಿ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಬಹುಭಾಷಾ ತಾರಾ ನಟ ಸುಮನ್ ತಲ್ವಾರ್, ಲಂಚುಲಾಲ್ ಕೆ.ಎಸ್. ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ಯುವ ಶೆಟ್ಟಿ, ಪುಷ್ಪರಾಜ್ ಬೊಳ್ಳೂರು, ಅನಿಲ್ ಉಪ್ಪಳ, ಭವ್ಯಾ ಪೂಜಾರಿ, ಪೃಥ್ವಿನ್ ಪೊಳಲಿ, ಉತ್ಸವ್ ವಾಮಂಜೂರು, ನೀತ್ ಪೂಜಾರಿ, ವಿಜಯ ಮಯ್ಯ, ಚಂದ್ರಶೇಖರ ಸಿದ್ದಕಟ್ಟೆ, ಮನೀಶ್ ಶೆಟ್ಟಿ ಉಪಿರ, ನಮಿತ ಕಿರಣ್, ಸುನೀತಾ, ವಿನಾಯಕ್ ಜಪ್ಪು, ಭಗವಾನ್, ಕೀರ್ತನ್ ಮುಲ್ಕಿ ಇದ್ದಾರೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಸಿನಿಮಾಕ್ಕೆ ಚಿತ್ರಕತೆ ನಿರ್ದೇಶನ ಸ್ವರಾಜ್ ಶೆಟ್ಟಿ, ಕ್ಯಾಮರಾ: ಉದಯ ಬಲ್ಲಾಳ್, ಸಂಗೀತ: ವಿನೋದ್ ರಾಜ್ ಕೋಕಿಲಾ, ಹಿನ್ನಲೆ ಸಂಗೀತ ಕಾರ್ತಿಕ್ ಮುಲ್ಕಿ, ಸಂಕಲನ: ಗಣೇಶ್ ನೀರ್ಚಾಲ್, ಸಾಹಸ: ಮಾಸ್ ಮಾದ, ಟೈಗರ್ ಶಿವ, ಎಕ್ಸಿಟಿವ್ ಪ್ರೊಡ್ಯೂಸರ್ : ಯತೀಶ್ ಪೂಜಾರಿ.

ನೆತ್ತೆರೆಕೆರೆ ಸಿನಿಮಾ ಮಂಗಳೂರಿನಲ್ಲಿ ರೂಪವಾಣಿ, ಪಿವಿಆರ್, ಸಿನಿಪೊಲಿಸ್, ಭಾರತ್ ಸಿನಿಮಾಸ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಸಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಭಾರತ್ ಸಿನಿಮಾಸ್, ಅಲಂಕಾರ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಕಾರ್ಕಳ ಪ್ಲಾನೆಟ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್ ದೇರಳಕಟ್ಟೆಯಲ್ಲಿ ಭಾರತ್ ಸಿನಿಮಾಸ್ ಚಿತ್ರಮಂದಿರದಲ್ಲಿ ನೆತ್ತೆರೆಕೆರೆ ಸಿನಿಮಾ ತೆರೆ ಕಾಣಲಿದೆ.

error: Content is protected !!