ಚಿನ್ನಯ್ಯ ಭಯದಿಂದ ತಪ್ಪು ಸ್ಥಳಗಳನ್ನ ತೋರಿಸಿದ್ದಾನೆ, ಎಸ್‌ಐಟಿ ಕರೆದ್ರೆ ಸಂಭ್ರಮದಿಂದ ಹೋಗ್ತೇವೆ: ಗಿರೀಶ್‌ ಮಟ್ಟೆಣ್ಣನವರ್!

ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆಯುತ್ತಲೇ ಸಾಗಿದೆ. ಒಂದು ಕಡೆ ದೃಶ್ಯಮಾಧ್ಯಮಗಳು ತನಿಖಾ ವರದಿ ಮಾದರಿ ಸುದ್ದಿ ಬಿತ್ತರಿಸುತ್ತಿದ್ದು, ಇನ್ನೊಂದೆಡೆ ತಿಮರೋಡಿ ಬಳಗದವರು ಯೂಟ್ಯೂಬ್‌ ಲೈವ್‌ಗೆ ಬಂದು ಹೊಸ ಹೊಸ ವಿಚಾರಗಳನ್ನು ಹೇಳುತ್ತಲೇ ಬರುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಗೊಂದಲಕ್ಕೀಡಾಗುತ್ತಿದ್ದು, ಪ್ರಕರಣ ಯಾವ ಕಡೆ ಸಾಗುತ್ತಿದೆ ಎಂಬ ಆತಂಕ, ಕುತೂಹಲದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವತಃ ಎಸ್‌ಐಟಿ ಅಧಿಕಾರಿಗಳೇ ಪ್ರಕರಣಗಳ ಸತ್ಯಾಸತ್ಯತೆಯನ್ನು ಬಯಲಗೊಳಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ಇತ್ತೀಚೆಗೆ ಮಾಸ್ಕ್‌ ಮ್ಯಾನ್‌ ಚಿನ್ನಯ್ಯನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬೆನ್ನಲ್ಲೇ ಆತ ಧರ್ಮಸ್ಥಳದಿಂದ ಬುರುಡೆ ಪಡೆದು ಬಂದಿರುವುದಾಗಿ ದೃಶ್ಯ ಮಾಧ್ಯಮಗಳು ವರದಿ ಬಿತ್ತರಿಸಿವೆ. ಈ ವಿಚಾರಕ್ಕೆ ಸಂಬಂಧಿಸಿ ಮಹೇಶ್‌ ತಿಮರೋಡಿಯ ಸಹವರ್ತಿ ಗಿರೀಶ್‌ ಮಟ್ಟೆಣ್ಣನವರ್‌ ಯೂಟ್ಯೂಬ್‌ನಲ್ಲಿ ಲೈವ್‌ಗೆ ಬಂದಿದ್ದು, ಎಸ್‌ಐಟಿ ಕರೆದ್ರೆ ಸಂಭ್ರಮದಿಂದ ನಾವು ಹೋಗ್ತೇವೆ. ತನಿಖೆಗೆ ಕರೆದ್ರೆ ನಮಗೆ ಸಂಭ್ರಮ ಇದೆ. ಪ್ರತಿಯೊಂದು ನಾವು ಹೇಳ್ತೇವೆ, ಎಸ್‌ಐಟಿ ಅವರಾಗೆ ಬಂದ್ರೆ ಸುವರ್ಣಾವಾಶ. ಅನಾಮಿಕ ಭಯದಿಂದ ತಪ್ಪು ಸ್ಥಳಗಳನ್ನ ತೋರಿಸಿದ್ದಾನೆ. ಹೆದರಿ ಸ್ಥಳಗಳನ್ನ ಗುರುತಿಸುವಲ್ಲಿ ಎಡವಿದ್ದಾನೆ. ಇಲ್ಲದಿದ್ದರೆ ನೂರಾರು ಹೆಣಗಳನ್ನ ಹೂತಿಟ್ಟಿರುವುದು ನಿಜ ಎಂದು ಹೇಳಿದ್ದಾರೆ.

ಗಿರೀಶ್‌ ಹೇಳಿದ್ದೇನು?

ಈ ಸಂಬಂಧವಾಗಿ ಎಸ್‌ಐಟಿ ಅಧಿಕಾರಿಗಳು ಸಂಪೂರ್ಣ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಸೌಜನ್ಯ ಪರ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಅವರು ಒತ್ತಾಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಗಿರೀಶ್ ಮಟ್ಟಣ್ಣನವರ್ ಅವರು, ಮಾಸ್ಕ್ ಮ್ಯಾನ್ ಚಿನ್ನಯ್ಯ ಮಹೇಶ್ ಶೆಟ್ಟಿ ತಿಮರೋಡಿ ಅವರ ನಿವಾಸದಲ್ಲಿ ವಾಸವಿದ್ದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಚಿನ್ನಯ್ಯ ತನಗೆ ಮಹೇಶ್ ಶೆಟ್ಟಿ ತಿಮರೋಡಿ ಮನೆಯೇ ಬೇಕು ಎಂದು ಸ್ಪಷ್ಟವಾಗಿ ಹೇಳಿದ್ದ. ಅದರ ಜೊತೆಗೆ, ಕಳೆದ ಎರಡು ವರ್ಷಗಳಿಂದ “ಪೊಲೀಸರ ಹತ್ತಿರ ನನ್ನನ್ನು ಕರೆದೊಯ್ದು ಹೋಗಿ” ಎಂದು ಚಿನ್ನಯ್ಯ ಹೇಳುತ್ತಾ ಇದ್ದ ಗಿರೀಶ್ ಮಟ್ಟಣ್ಣನವರ್ ವಿವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರು ಅವನಿಗೆ ಆಶ್ರಯ ಒದಗಿಸಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಗಿರೀಶ್ ಮಟ್ಟಣನವರ್ ಲೈವ್ ಬಂದು ಎಸ್‌ಐಟಿಯಿಂದ ಎಲ್ಲಾ ತನಿಖೆ ಮಾಡಿಲಿ. ಎಸ್‌ಐಟಿ ಕರೆದ್ರೆ ಸಂಭ್ರಮದಿಂದ ನಾವು ಹೋಗ್ತೇವೆ. ತನಿಖೆಗೆ ಕರೆದ್ರೆ ನಮಗೆ ಸಂಭ್ರಮ ಇದೆ. ಪ್ರತಿಯೊಂದು ನಾವು ಹೇಳ್ತೇವೆ, ಎಸ್‌ಐಟಿ ಅವರಾಗೆ ಬಂದ್ರೆ ಸುವರ್ಣಾವಾಶ. ಅನಾಮಿಕ ಭಯದಿಂದ ತಪ್ಪು ಸ್ಥಳಗಳನ್ನ ತೋರಿಸಿದ್ದಾನೆ. ಹೆದರಿ ಸ್ಥಳಗಳನ್ನ ಗುರುತಿಸುವಲ್ಲಿ ಎಡವಿದ್ದಾನೆ. ಇಲ್ಲದಿದ್ದರೆ ನೂರಾರು ಹೆಣಗಳನ್ನ ಹೂತಿಟ್ಟಿರುವುದು ನಿಜ.

ಅಷ್ಟೇ ಅಲ್ಲದೆ, ಚಿನ್ನಯ್ಯನ ಸಂಬಂಧಿಕರು ಮಹೇಶ್ ಶೆಟ್ಟಿ ತಿಮರೋಡಿ ನಿವಾಸಕ್ಕೆ ಬಂದು ಹೋಗಿರುವುದು ಸಹ ಗಮನಾರ್ಹ ಸಂಗತಿ. ಚಿನ್ನಯ್ಯ ಯಾರನ್ನು ಭೇಟಿಯಾಗಬೇಕೆಂದು ಹೇಳುತ್ತಿದ್ದನೋ, ಅವರೊಂದಿಗೆ ಅವನಿಗೆ ಭೇಟಿ ಮಾಡಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿತ್ತು ಎಂಬುದನ್ನೂ ಮಟ್ಟಣ್ಣನವರ್ ಹೇಳಿದ್ದಾರೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಕಾರ್ ಖರೀದಿಯ ನಿಮ್ಮ ಕನಸು ನನಸಾಗಬೇಕೇ? ಇಲ್ಲಿದೆ ಒಂದು ಸುವರ್ಣಾವಕಾಶ! ಹೆಚ್ಚಿನ ಮಾಹಿತಿಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ🔰

error: Content is protected !!