ಬೆಂಗಳೂರು: ಮುಂದಿನ 3 ಗಂಟೆಗಳೊಳಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಣ್ಣದಿಂದ ಮಧ್ಯಮ ಮಳೆಯೊಂದಿಗೆ ಗುಡುಗು-ಮಿಂಚು ಬೀಳುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಗಾಳಿಯ ವೇಗ ಗಂಟೆಗೆ 30–40 ಕಿಮೀ ತಲುಪುವ ಸಾಧ್ಯತೆ ಇದೆ. ಕೆಲವೆಡೆ ವಿದ್ಯುತ್ ವ್ಯತ್ಯಯ, ಟ್ರಾಫಿಕ್ ಅಡಚಣೆ ಹಾಗೂ ಮರಗಳ ಕೊಂಬೆ ಮುರಿಯುವ ಸಾಧ್ಯತೆಯೂ ಇದೆ.
👉 ಸಾರ್ವಜನಿಕರಿಗೆ ಸಲಹೆ: ಮನೆಯೊಳಗೆ ಇರಲು, ಬಾಗಿಲು-ಕಿಟಕಿಗಳನ್ನು ಮುಚ್ಚಲು, ಮರಗಳ ಕೆಳಗೆ ಆಶ್ರಯ ಪಡೆಯದಿರಲು, ವಿದ್ಯುತ್ ಸಾಧನಗಳನ್ನು ಪ್ಲಗ್‌ಅಫ್ ಮಾಡಲು ಹಾಗೂ ನೀರಿನ ಪ್ರದೇಶಗಳಿಂದ ದೂರವಿರಲು ಸೂಚಿಸಲಾಗಿದೆ.