ಕಾಸರಗೋಡಿನಲ್ಲಿ ಒಂದೇ ಕುಟುಂಬದ ಮೂವರು ಆ್ಯಸಿಡ್ ಸೇವಿಸಿ ಆತ್ಮಹತ್ಯೆ!

ಕಾಸರಗೋಡು: ರಬ್ಬರ್‌ ಟ್ಯಾಪಿಂಗ್‌ಗೆ ತಂದಿದ್ದ ಆ್ಯಸಿಡ್ ಕುಡಿದು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡಿನ ಅಂಬಲತ್ತರ ಸಮೀಪದ ಪಾರಕ್ಕಾಯಿ ಎಂಬಲ್ಲಿ ನಡೆದಿದೆ.

ಗೋಪಿ(58) , ಪತ್ನಿ ಇಂದಿರಾ(54) ,ಪುತ್ರ ರಂಜೇಶ್(34) ಮೃತಪಟ್ಟವರು. ಇನ್ನೋರ್ವ ಪುತ್ರ ರಾಕೇಶ್ (27) ಗಂಭೀರ ಸ್ಥಿತಿಯಲ್ಲಿ ಕಣ್ಣೂರು ಸರಕಾರಿ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ತಂದೆ-ಮಕ್ಕಳು ಈ ಹಿಂದೆ ದಿನಸಿ ಅಂಗಡಿ ನಡೆಸುತ್ತಿದ್ದು ನಷ್ಟದ ಕಾರಣ ಅದನ್ನು ಮುಚ್ಚಿದ್ದರು. ಆರ್ಥಿಕ ಮುಗ್ಗಟ್ಟು ಆತ್ಮಹತ್ಯೆಗೆ ಕಾರಣ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಮುಂಜಾನೆ 3 ಗಂಟೆ ಸುಮಾರಿಗೆ ಕೃತ್ಯ ಬೆಳಕಿಗೆ ಬಂದಿದೆ. ಸಂಬಂಧಿಕರೋರ್ವರ ಮೊಬೈಲ್‌ಗೆ ಕರೆ ಮಾಡಿ, ತಮ್ಮನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ರಂಜೇಶ್ ಕರೆ ಮಾಡಿ ತಿಳಿಸಿದ್ದ ಎನ್ನಲಾಗಿದೆ.

ಸಂಬಂಧಿಕರು ಹಾಗೂ ನಾಗರಿಕರು ತಲುಪಿ ಆಸ್ಪತ್ರೆಗೆ ತಲಪಿಸಿದರೂ ಮೂವರೂ ಮೃತಪಟ್ಟಿದ್ದರು. ರಂಜೇಶ್ ಹಾಗೂ ರಾಕೇಶ್ ಈ ಹಿಂದೆ ದುಬೈಯಲ್ಲಿದ್ದರು. ಎರಡು ವರ್ಷಗಳ ಹಿಂದೆ ಊರಿಗೆ ಮರಳಿದ್ದು, ಉದ್ಯಮ ನಡೆಸುತ್ತಿದ್ದರು. ಇದು ಯಶಸ್ವಿಯಾಗಲಿಲ್ಲ. ಇದರಿಂದ ಸಾಲದ ಹೊರೆ ಹೆಚ್ಚಿತ್ತು ಎನ್ನಲಾಗಿದೆ. ಉದ್ಯಮ ನಿಲ್ಲಿಸಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.

ಕಾರ್ ಖರೀದಿಯ ನಿಮ್ಮ ಕನಸು ನನಸಾಗಬೇಕೇ? ಇಲ್ಲಿದೆ ಒಂದು ಸುವರ್ಣಾವಕಾಶ! ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ🔰

ಅಂಬಲತ್ತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

error: Content is protected !!