ಮಂಗಳೂರು: ನಗರದಲ್ಲಿ ನಿನ್ನೆ ಸಂಜೆಯಿಂದ ಆರಂಭವಾದ ನಿರಂತರ ಮಳೆಯಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ನಗರದ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಸಂಚಾರಕ್ಕೆ ತೀವ್ರ ಅಡಚಣೆಯನ್ನುಂಟು ಮಾಡಿದೆ.
ಮುಲ್ಕಿ, ಕೊಟ್ಟಾರ, ಕುಲಾಯಿ ಸಂಪೂರ್ಣವಾಗಿ ಜಲಾವೃತವಾಗಿದ್ದು, ವಾಹನ ಸವಾರರು ಆತಂಕದಿಂದ ಪ್ರಯಾಣಿಸುವಂತಾಗಿದೆ.