ಬಂಟ್ವಾಳ: ಫರಂಗಿಪೇಟೆ ಶ್ರೀ ಗಣೇಶೋತ್ಸವದ ಬ್ಯಾನರ್ ಹರಿದು ಹಾಕಿದ ಆರೋಪಿಯ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಆತನನ್ನು ವಶಕ್ಕೆ ಪಡೆದ ಘಟನೆ ಬುಧವಾರ(ಆ.27) ರ ರಾತ್ರಿ ನಡೆದಿದೆ.
ಫರಂಗಿಪೇಟೆ ನಿವಾಸಿ ಹೈದರ್ ಆರೋಪಿ.
ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಆಳ್ವ ಅವರು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದು 3500 ರೂ. ವೆಚ್ಚದಲ್ಲಿ ಫರಂಗಿಪೇಟೆಯ ಕುಂಪಣಮಜಲು ಕ್ರಾಸ್ ಬಳಿ ಬ್ಯಾನರ್ ಅಳವಡಿಸಿದ್ದರು. ಆರೋಪಿ ಹೈದರ್ ಅದನ್ನು ಹರಿದು ಹಾಕಿದ್ದು, ಘಟನೆಯಿಂದ ಗಲಭೆ ನಡೆಯಬಹುದು ಎಂದು ತಿಳಿಸಿದ್ದರು.
ಆತ ಉದ್ದೇಶಪೂರ್ವಕವಾಗಿ ಕೃತ್ಯ ನಡೆಸಿರುವುದರಿಂದ ಆತನನ್ನು ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.