ಬೆಂಗಳೂರು : ಕಳೆದ ಎರಡು ತಿಂಗಳಿನಿಂದ 71 ವರ್ಷದ ಮಹಿಳೆಗೆ ಪ್ರತೀ ಬಾರಿ ಮೂತ್ರ ವಿಸರ್ಜನೆ ಮಾಡುವಾಗ ರಕ್ತ ಬರುತ್ತಿರುವುದನ್ನು ಕಂಡು ಭಯದಲ್ಲಿ ಬದುಕುತ್ತಿದ್ದರು. ಶರೀರ ದುರ್ಬಲವಾಗುತ್ತಿತ್ತು, ರಕ್ತದ ಮಟ್ಟ ಅಪಾಯಕಾರಿಯಾಗಿ ಕುಸಿಯುತ್ತಿತ್ತು. ಆಸ್ಪತ್ರೆಗೆ ಬಂದಾಗ ಅವರ ಹಿಮೋಗ್ಲೋಬಿನ್ ಕೇವಲ 5 ಗ್ರಾಂ/dl ಇತ್ತು. ಕುಟುಂಬದವರು ಬೆಚ್ಚಿಬಿದ್ದರು – “ಇನ್ನೆಷ್ಟು ದಿನ ಬದುಕುತ್ತಾರೆ?” ಎಂಬ ಭಯ ಅವರ ಕಣ್ಣಲ್ಲಿ ಕಾಣಿಸುತ್ತಿತ್ತು.
ಬಳಿಕೆ ಮಡಿಕವರ್ ಆಸ್ಪತ್ರೆಯ ಮೂತ್ರಶಾಸ್ತ್ರಜ್ಞ ಡಾ ದಿಲೀಪ್ ಅವರನ್ನು ಭೇಟಿ ಮಾಡಿ ಚಿಕಿತ್ಸೆ ಶುರು ಮಾಡಿದರು . ಸಿಟಿ ಸ್ಕ್ಯಾನ್ ಮಾಡಿದಾಗ ಎಡ ಕಿಡ್ನಿಯಲ್ಲಿ 20 ಸೆಂ.ಮೀ ಗಾತ್ರದ ಟ್ಯೂಮರ್ ಇರೋದು ಪತ್ತೆಯಾಯಿತು. ವೈದ್ಯರು ಇದನ್ನು ಕಿಡ್ನಿ ಟ್ಯೂಮರ್ ಎಂದು ಧೃಢಪಡಿಸಿದರು. ಇಳಿ ವಯಸ್ಸಿನಲ್ಲಿ, ಅವರ ಆರೋಗ್ಯ ಕೂಡ ಅಷ್ಟೊಂದು ಪ್ರಬಲವಾಗಿರಲಿಲ್ಲ. ಅಲ್ಲದೇ ಟ್ಯೂಮರ್ ತೆಗೆದು ಹಾಕದೇ ಇದ್ದಿದ್ದರೆ ಜೀವಕ್ಕೆ ಅಪಾಯವಾಗಿತ್ತು.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
ಹಾಗಾಗೀ ಸಾಂಪ್ರಾದಾಯಿಕ ಶಸ್ತ್ರಚಿಕಿತ್ಸೆ ಮಾಡದೇ, ರೋಬೊಟಿಕ್ ಮೂಲಕ ಆಪರೇಷನ್ ಮಾಡಿ ದೊಡ್ಡ ಗಾತ್ರದ ಟ್ಯೂಮರ್ ಅನ್ನು ತೆಗೆದು ಹಾಕಲಾಗಿದೆ. ಸರ್ಜರಿ ಬಳಿಕ ಮಾತನಾಡಿದ ಯೂರೋಲೋಜಿಸ್ಟ್ ಡಾ ದಿಲೀಪ್ , “ಇದು ಅತಿ ಅಪಾಯಕಾರಿ ಪ್ರಕರಣವಾಗಿತ್ತು. ರೋಗಿಯ ವಯಸ್ಸು, ಹೆಚ್ಚು ರಕ್ತಹೀನತೆ ಹಾಗೂ ಭಾರಿ ಗಡ್ಡೆ – ಇವುಗಳೊಂದಿಗೆ ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆ ಮಾಡಿದರೇ ಚೇತರಿಕೆ ಕಷ್ಟವಾಗ್ತಾ ಇತ್ತು . ಆದರೆ ರೋಬೋಟಿಕ್ ತಂತ್ರಜ್ಞಾನ ನಮಗೆ ಭರವಸೆ ನೀಡಿತು. ನಿಖರವಾಗಿ, ಸುರಕ್ಷಿತವಾಗಿ ಟ್ಯೂಮರ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲು ಸಾಧ್ಯವಾಯಿತು.”
ಕುಟುಂಬದವರು ಕಣ್ಣೀರಿನಿಂದ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು: “ನಾವು ಅವರನ್ನ ಕಳೆದುಕೊಳ್ಳುತ್ತೇವೆ ಎಂದುಕೊಂಡಿದ್ದೆವು. ಪ್ರತಿದಿನ ಅವರ ಆರೋಗ್ಯ ಹದಗೆಡುತ್ತಿತ್ತು. ಆದರೆ ಈ ಶಸ್ತ್ರಚಿಕಿತ್ಸೆ ಅವರಿಗೆ ಹೊಸ ಜೀವನ ಕೊಟ್ಟಿದೆ. ವೈದ್ಯರಿಗೆ ಮತ್ತು ಮೆಡಿಕವರ್ ಆಸ್ಪತ್ರೆಗೆ ನಮ್ಮ ಹೃದಯಪೂರ್ವಕ ಧನ್ಯವಾದಗಳು.”
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಲಿಂಕ್ ಬಳಸಿಕೊಳ್ಳಿ👇
ಪ್ರಸ್ತುತ ಅವರು ಸ್ಥಿರ ಆರೋಗ್ಯ ಸ್ಥಿತಿಯಲ್ಲಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ವೈದ್ಯರು ಹೇಳುವಂತೆ, ರೋಬೋಟಿಕ್ ಶಸ್ತ್ರಚಿಕಿತ್ಸೆ ಇಂತಹ ಸಂಕೀರ್ಣ ಪ್ರಕರಣಗಳಲ್ಲಿ ಜೀವ ಉಳಿಸುವ ಕ್ರಾಂತಿಕಾರಿ ತಂತ್ರಜ್ಞಾನವಾಗಿದೆ. ಕಡಿಮೆ ರಕ್ತಸ್ರಾವ, ಚಿಕ್ಕ ಕತ್ತರಿಕೆ, ವೇಗವಾದ ಚೇತರಿಕೆ ಮತ್ತು ಉತ್ತಮ ಫಲಿತಾಂಶ – ಇವುಗಳ ಮೂಲಕ ವಯೋವೃದ್ಧರಿಗೆ ಇದು ಅಮೂಲ್ಯವಾದ ವರದಾನ.