ಮಂಗಳೂರು: ಶ್ರಾವಣಮಾಸ ಬಂತದ್ರೆ ಸಾಕು ಸಾಲು ಸಾಲು ಹಬ್ಬಗಳು, ಸಮಾರಂಭಗಳು. ಹಬ್ಬದ ಸಡಗರ ಮಾತ್ರವಲ್ಲದೆ ಮುಗಿಲೆತ್ತರಕ್ಕೆ ಮುಟ್ಟಿರೋ ಹೂವು-ಹಣ್ಣುಗಳ ದರ . ಆದರೂ ಮಾರುಕಟ್ಟೆಯಲ್ಲಿ ಕಡಿಮೆಯಾಗದ ಜನದಟ್ಟಣೆ. ಇಂದು ಗೌರಿ ಹಬ್ಬವಿದ್ದು, ನಾಳೆ ಗಣೇಶ ಹಬ್ಬವಿದೆ. ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ರಾಜ್ಯದೆಲ್ಲೆಡೆ ಜನ ಸಜ್ಜಾಗಿದ್ದು, ಹಬ್ಬದ ಖರೀದಿಗೆ ಮಾರ್ಕೆಟ್‌ಗೆ ಮುಗಿಬೀಳುತ್ತಿದ್ದಾರೆ.
ಹಬ್ಬ ಬಂತೆಂದರೆ ಸಾಕು, ಹಬ್ಬದ ತಯಾರಿ, ವಿವಿಧ ಬಗೆಯ ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿ ಮಾರ್ಕೆಟ್‌ನಲ್ಲಿ ಜೋರಾಗಿದೆ. ಗೌರಿ ಗಣೇಶ ಹಬ್ಬವನ್ನ ಇಡೀ ರಾಜ್ಯಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅದ್ರಲ್ಲೂ ಇಂದಿನ ಹಬ್ಬಕ್ಕೆ ಸೋಮವಾರದಿಂದಲೇ ತಯಾರಿ ಆರಂಭ ಆಗಿದ್ದು. ಹಬ್ಬದ ಖರೀದಿಗೆ ಮಾರುಕಟ್ಟೆಗಳಲ್ಲಿ ಜನರು ಮುಗಿ ಬೀಳುತ್ತಿದ್ದಾರೆ.
ಗೌರಿ ಗಣೇಶ ಹಬ್ಬದ ಹಿನ್ನೆಲೆ ಹಣ್ಣುಗಳ ಬೆಲೆ ಅಷ್ಟಾಗಿ ಏರಿಕೆ ಕಂಡಿಲ್ಲದಿದ್ದರೂ ಹೂವುಗಳ ಬೆಲೆ ಮಾತ್ರ ವಿಪರೀತ ಗಗನಕ್ಕೇರಿದೆ.
ಹೂವುಗಳ ಬೆಲೆ (ಕೆ.ಜಿಗೆ):
ಕನಕಾಂಬರ: 3,000-4,000 ರೂ.
ಮಲ್ಲಿಗೆ: 1,200-1,600 ರೂ.
ಸೇವಂತಿ: 500-600 ರೂ.
ಗುಲಾಬಿ: 600-800 ರೂ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
ಹಣ್ಣುಗಳ ಬೆಲೆ (ಕೆ.ಜಿಗೆ):
ಸೇಬು: 180 ರೂ.
ದಾಳಿಂಬೆ: 150 ರೂ.
ದ್ರಾಕ್ಷಿ: 200 ರೂ.
ಕಿತ್ತಳೆ: 200 ರೂ.
ಅನಾನಸ್: 50 ರೂ.