ಮುಂಬೈ: 2025ರಲ್ಲಿ ಕ್ರಿಕೆಟ್ ನಿವೃತ್ತಿಗಳ ಅಲೆ ಎದ್ದಿದೆ, ದಿಗ್ಗಜರು ಮತ್ತು ಆಧುನಿಕ ಕ್ರಿಕೆಟಿಗರು ಕೂಡ ವಿದಾಯ ಹೇಳಿದ್ದಾರೆ. ವಿರಾಟ್ ಕೊಹ್ಲಿ ಅವರ ಆಘಾತಕಾರಿ ಟೆಸ್ಟ್ ನಿವೃತ್ತಿ ಮತ್ತು ರೋಹಿತ್ ಶರ್ಮಾ ಅವರ ನಿರ್ಗಮನವು ಭಾರತೀಯ ಕ್ರಿಕೆಟ್‌ನ ಒಂದು ಯುಗದ ಅಂತ್ಯವನ್ನು ಸೂಚಿಸಿತು. ಇದೀಗ ಚೇತೇಶ್ವರ ಪೂಜಾರ ಕೂಡ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದರು.
2025ರಲ್ಲಿ ವಿದಾಯ ಹೇಳಿದ ಕ್ರಿಕೆಟಿಗರ ಪಟ್ಟಿ :
ವಿರಾಟ್ ಕೊಹ್ಲಿ: ಟೀಂ ಇಂಡಿಯಾದ ದಿಗ್ಗಜ ವಿರಾಟ್ ಕೊಹ್ಲಿ ಈ ವರ್ಷ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದರು. ಕಳೆದ ವರ್ಷವೇ ಟಿ20ಐ ಕ್ರಿಕೆಟ್ ತೊರೆದಿದ್ದ ಅವರು ಈಗ ಏಕದಿನ ಕ್ರಿಕೆಟ್ ನಲ್ಲಿ ಮಾತ್ರ ಮುಂದುವರಿದಿದ್ದಾರೆ.
ರೋಹಿತ್ ಶರ್ಮಾ: ಡಬ್ಲ್ಯೂಟಿಸಿ ಫೈನಲ್ ಅವಕಾಶ ತಪ್ಪಿದ ಬಳಿಕ ರೋಹಿತ್ ಶರ್ಮಾ ಟೆಸ್ಟ್ ನಿವೃತ್ತಿ ಘೋಷಿಸಿದರು. ರೋಹಿತ್ ಕೂಡಾ ಕೊಹ್ಲಿಯಂತೆ ಏಕದಿನ ಕ್ರಿಕೆಟ್ ಪಂದ್ಯಾಟದಲ್ಲಿ ಮಾತ್ರ ಮುಂದುವರಿಯಲಿದ್ದಾರೆ.
ಚೇತಶ್ವರ ಪೂಜಾರ: ಭಾರತದ ಟೆಸ್ಟ್ ಸ್ಪೆಷಲಿಸ್ಟ್ ಎನಿಸಿಕೊಂಡಿರುವ ಇವರು ಆ.24ರಂದು ಎಲ್ಲಾ ಮಾದರಿ ಕ್ರಿಕೆಟ್ ಗೆ ವಿದಾಯ ಹೇಳಿದರು. ಚೇತಶ್ವರ ಪೂಜಾರ 2023ರಲ್ಲಿ ಕೊನೆಯದಾಗಿ ಭಾರತ ತಂಡದ ಪರ ಆಡಿದ್ದರು.
ನಿಕೋಲಸ್ ಪೂರನ್: ವೆಸ್ಟ್ ಇಂಡೀಸ್ ಯುವ ಆಟಗಾರರಾಗಿರುವ ಇವರು ತಮ್ಮ 29ನೇ ವಯಸ್ಸಿನಲ್ಲಿಯೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದರು. ಮುಂದಿನ ದಿನಗಳಲ್ಲಿ ಗ್ಲೋಬಲ್ ಟಿ20 ಟೂರ್ನಿಗಳಲ್ಲಿ ನಿಕೋಲಸ್ ಪೂರನ್ ಆಡುತ್ತಿದ್ದಾರೆ.
ಮಾರ್ಟಿನ್ ಗಪ್ಟಿಲ್: ನ್ಯೂಜಿಲ್ಯಾಂಡ್ ಕ್ರಿಕೆಟ್ ನ ಸ್ಪೋಟಕ ಆರಂಭಿಕ ಆಟಗಾರರಗಿದ್ದು ಈ ವರ್ಷದ ಆರಂಭದಲ್ಲಿ ಅಂತಾರಾಷ್ಟ್ರೀಯ ಕ್ರಿಕಟ್‌ನಿಂದ ನಿವೃತ್ತರಾದರು. ಕಿವೀಸ್ ಪರ ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಗಪ್ಟಿಲ್ ಐದನೇ ಸ್ಥಾನದಲ್ಲಿದ್ದಾರೆ.
ಸ್ಟೀವ್ ಸ್ಮಿತ್: ಆಸ್ಟ್ರೇಲಿಯಾದ ಬ್ಯಾಟಿಂಗ್ ದಿಗ್ಗಜರೆಂದೇ ಖ್ಯಾತಿ ಪಡೆದಿರುವ ಇವರು ಈ ವರ್ಷ ಚಾಂಪಿಯನ್ಸ್ ಟ್ರೋಫಿ ಬಳಿಕ ಏಕದಿನ ಕ್ರಿಕೆಟ್ ತೊರೆದರು. ಏಕದಿನ ವಿಶ್ವಕಪ್ ನಲ್ಲಿ ಎರಡು ಬಾರಿ ವಿಜೇತ ಆಟಗಾರರಾಗಿದ್ದವರು ಸ್ಟೀವ್ ಸ್ಮಿತ್.
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಲಿಂಕ್ ಬಳಸಿಕೊಳ್ಳಿ👇
ತಮೀಮ್ ಇಕ್ಬಾಲ್: ಬಾಂಗ್ಲಾದೇಶದ ಬ್ಯಾಟಿಂಗ್ ದಿಗ್ಗಜರಾಗಿರುವ ತಮೀಮ್ ಇಕ್ಬಾಲ್, ಆ ದೇಶದ ಸಾರ್ವಕಾಲಿಕ ರನ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ (15,192), ಜನವರಿ 2025 ರಲ್ಲಿ ತಮ್ಮ ಅಂತಿಮ ನಿವೃತ್ತಿಯನ್ನು ಘೋಷಿಸಿದರು.
ಏಂಜಲೋ ಮ್ಯಾಥ್ಯೂಸ್: ಶ್ರಿಲಂಕಾದ ಹಿರಿಯ ಬ್ಯಾಟರ್ ಏಂಜಲೋ ಮ್ಯಾಥ್ಯೂಸ್ ಈ ವರ್ಷ ನಿವೃತ್ತರಾದರು. 118 ಟೆಸ್ಟ್ ಗಳಿಂದ 8167 ರನ್ ಮಾಡಿದ್ದ ಮ್ಯಾಥ್ಯೂಸ್ ಲಂಕಾದ ದಿಗ್ಗಜರ ಪಾಲಿಗೆ ಸೇರುತ್ತಾರೆ.
ವೃದ್ಧಿಮಾನ್ ಸಾಹ: ಭಾರತ ಟೆಸ್ಟ್ ತಂಡದ ವಿಕೆಟ್ ಕೀಪರ್ ಆಗಿದ್ದು, 40 ಟೆಸ್ಟ್ ಆಡಿದ್ದ ವೃದ್ಧಿಮಾನ್ ಸಾಹ, ಅತ್ಯುತ್ತಮ ಕೀಪರ್ ಗಳಲ್ಲಿ ಒಬ್ಬರು. ಎಂ.ಎಸ್.ಧೋನಿ ಬಳಿಕ ಅವರು ಭಾರತ ತಂಡದ ವಿಕೆಟ್ ಕೀಪರ್ ಆಗಿದ್ದರು.
ಗ್ಲೆನ್ ಮ್ಯಾಕ್ಸ್‌ವೆಲ್: ಆಸ್ಟ್ರೇಲಿಯಾದ ಸೂಪರ್‌ಸ್ಟಾರ್ ಗ್ಲೆನ್ ಮ್ಯಾಕ್ಸ್‌ವೆಲ್ 2025 ರಲ್ಲಿ ಏಕದಿನಗಳಿಂದ ನಿವೃತ್ತರಾದರು. ಮರೆಯಲಾಗದ ಇನ್ನಿಂಗ್ಸ್‌ಗಳು, ಗಮನಾರ್ಹ ಸ್ಟ್ರೋಕ್-ಪ್ಲೇ ಮತ್ತು ಆಧುನಿಕ ಏಕದಿನ ಕ್ರಿಕೆಟನ್ನು ಮರು ವ್ಯಾಖ್ಯಾನಿಸಿದ ಪಂದ್ಯ ಗೆಲ್ಲುವ ತಾಕತ್ತಿನೊಂದಿಗೆ ವೈಟ್-ಬಾಲ್ ಅಧ್ಯಾಯವನ್ನು ಮುಕ್ತಾಯಗೊಳಿಸಿದರು.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
ಹೆನ್ರಿಚ್ ಕ್ಲಾಸೆನ್: ದಕ್ಷಿಣ ಆಫ್ರಿಕಾ ತಂಡದ ವಿಕೆಟ್ ಕೀಪರ್ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ ಅವರು ಈ ವರ್ಷದ ಜೂನ್ ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರವಾದರು. ಅವರು ಈಗ ಟಿ20 ಕೂಟಗಳಲ್ಲಿ ಆಡುತ್ತಿದ್ದಾರೆ.
ದಿಮ್ಮುತ್ ಕರುಣರತ್ನೆ: ಶ್ರೀಲಂಕಾದ ಮಾಜಿ ನಾಯಕ ದಿಮ್ಮುತ್ ಕರುಣರತ್ನೆ ಎಲ್ಲಾ ಮಾದರಿ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದರು. ಅವರು ಲಂಕಾ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಗಮನಾರ್ಹ ಸಾಧನೆ ಮಾಡಿದರು.