ಮಗು ಆರೋಗ್ಯ ಸರಿಯಿಲದ್ಲಕ್ಕೆ ಬೇಸತ್ತು ಬಾಣಂತಿ ಆತ್ಮಹತ್ಯೆಗೆ ಶರಣು !

ಬೆಂಗಳೂರು: ಲಾಲ್‌ಬಾಗ್‌ ಕೆರೆಯ ಬಳಿ ನೇಪಾಳ ಮೂಲದ ಸರ್ಜಾಪುರದ ಮಹಿಳೆಯೊಬ್ಬರ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ನೇಪಾಳ ನಿವಾಸಿ ಜೇನಿ ಶಾ ಮೃತ ಮಹಿಳೆ.

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಪತಿ ನಬ್ರಾಜ್‌ ಜೊತೆಗೆ ನಗರದಲ್ಲಿ ವಾಸಿಸುತ್ತಿದ್ದ ಜೇನಿಶಾ, 4 ದಿನಗಳ ಹಿಂದೆಯಷ್ಟೇ ವಾಣಿವಿಲಾಸ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿನ ಆರೋಗ್ಯ ಸರಿಯಿರದ ಕಾರಣ ಎಂದು ಮಾನಸಿಕವಾಗಿ ನೊಂದಿದ್ದು, ನಂತರ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದರು. ಪತ್ನಿ ಆಸ್ಪತ್ರೆಯಿಂದ ನಾಪತ್ತೆಯಾಗಿರುವ ಬಗ್ಗೆ ಆ.23ರಂದು ಪತಿ ಪೊಲೀಸ್‌ ಠಾಣೆಗೆ ದೂರು ನೀಡಲು ಮುಂದಾಗಿದ್ದರು. ಅಷ್ಟರಲ್ಲಿ ಲಾಲ್‌ಬಾಗ್‌ ಕೆರೆಯಲ್ಲಿ ಅಪರಿಚಿತ ಶವ ಪತ್ತೆಯಾಗಿರುವ ಬಗ್ಗೆ ಅಲ್ಲಿನ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರ ನಜ್ರಾಬ್‌ ಬಳಿ ಮಹಿಳೆಯ ಮೃತದೇಹವನ್ನು ತೋರಿಸಿದಾಗ ಇದು, ತಮ್ಮ ಪತ್ನಿ ಜೇನಿ ಶಾ ಎಂದು ಗುರುತಿಸಿದ್ದರು.


ಮಗುವಿನ ಆರೋಗ್ಯ ಸರಿಯಾಗಿಲ್ಲ ಎಂದು ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ನೇಪಾಳದಿಂದ ಜೇನಿ ಶಾ ಪಾಲಕರು ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಲಿಂಕ್ ಬಳಸಿಕೊಳ್ಳಿ👇
ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!