ಉಡುಪಿ: ಕಾಪು ಸಮೀಪದ ಮೂಳೂರು ಬಳಿ ನಸುಕಿನ ಜಾವ 3 ಗಂಟೆ ಸುಮಾರಿಗೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಡಿಜೆ ಮರ್ವಿನ್ ಮೆಂಡೋನ್ಸಾ (35) ಸಾವನ್ನಪ್ಪಿದ್ದಾರೆ.
ಇತರ ಮೂವರೊಂದಿಗೆ ಉಡುಪಿಯಿಂದ ಮಂಗಳೂರು ಕಡೆಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕಾಪು ಸಮೀಪದ ಮೂಳೂರು ಬಳಿ ನಾಯಿಯೊಂದು ಕಾರಿಗೆ ಅಡ್ಡ ಬಂದಾಗ ಅದನ್ನು ತಪ್ಪಿಸಲು ಯತ್ನಿಸಿದಾಗ ಕಾರು ಪಲ್ಟಿ ಹೊಡೆದು ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಕಾರಿನಲ್ಲಿದ್ದ ಪ್ರಜ್ವಲ್, ಪ್ರಸಾದ್ ಹಾಗೂ ವಿಘ್ನೇಶ್ ಎಂಬವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.