ಬೆಂಗಳೂರು: ಸೆಪ್ಟೆಂಬರ್ 1 ರಿಂದ, ರಾಷ್ಟ್ರೀಯ ಹೆದ್ದಾರಿ 75 (ಬೆಂಗಳೂರು-ಮಂಗಳೂರು ರಸ್ತೆ) ದಲ್ಲಿರುವ ಎರಡು ಟೋಲ್ ಪ್ಲಾಜಾಗಳಲ್ಲಿ ವಾಹನಗಳ ಬಳಕೆದಾರ ಶುಲ್ಕವನ್ನು ಹೆಚ್ಚಿಸಲಾಗಿದೆ. ಪರಿಷ್ಕೃತ ದರಗಳು ದೊಡ್ಡಕರೇನಹಳ್ಳಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ) ಮತ್ತು ಕರೆಬೈಲು (ತುಮಕೂರು ಜಿಲ್ಲೆ) ಟೋಲ್ ಪ್ಲಾಜಾಗಳಿಗೆ ಅನ್ವಯವಾಗುತ್ತವೆ. ಪ್ರತಿ ಟೋಲ್ ಪ್ಲಾಜಾದಲ್ಲಿ 40.13 ಕಿ.ಮೀ ದೂರಕ್ಕೆ ಶುಲ್ಕಗಳು ಅನ್ವಯವಾಗುತ್ತವೆ.
ಈ ಟೋಲ್ ಪ್ಲಾಜಾಗಳಲ್ಲಿ ಕಾರ್, ಪ್ಯಾಸೆಂಜರ್ ವ್ಯಾನ್ ಹಾಗೂ ಜೀಪ್‌ಗಳು ಸಿಂಗಲ್ ಟ್ರಿಪ್‌ಗೆ 60 ರೂಪಾಯಿ, ದಿನದಲ್ಲಿ ಹಲವು ಟ್ರಿಪ್‌ಗೆ 85 ರೂಪಾಯಿ ಹಾಗೂ ಮಾಸಿಕ ಪಾಸ್‌ಗೆ 1745 ರೂಪಾಯಿ ನೀಡಬೇಕಿದೆ.
ಸಣ್ಣ ಕಮರ್ಷಿಯಲ್ ವೆಹಿಕಲ್ (ಎಲ್‌ಸಿವಿ) ಸಿಂಗಲ್ ಟ್ರಿಪ್‌ಗೆ 100, ದಿನದಲ್ಲಿ ಹಲವು ಟ್ರಿಪ್‌ಗೆ 155 ಹಾಗೂ ಮಾಸಿಕ ಪಾಸ್‌ಗೆ 3055 ರೂಪಾಯಿ ಪಾವತಿ ಮಾಡಬೇಕಿದೆ. ಬಸ್ ಹಾಗೂ ಟ್ರಕ್‌ಗಳಿಗೆ ಸಿಂಗಲ್ ಟ್ರಿಪ್‌ಗೆ 205, ದಿನದಲ್ಲಿ ಹಲವು ಟ್ರಿಪ್‌ಗೆ 305 ಹಾಗೂ ಮಾಸಿಕ ಪಾಸ್‌ಗೆ 6015 ರೂಪಾಯಿ ನೀಡಬೇಕಿದೆ.
ಮಲ್ಟಿ ಎಕ್ಸೆಲ್ ವೆಹಿಕಲ್ ಸೇರಿದಂತೆ ಇತರ ಭಾರೀ ವಾಹನಗಳು ಸಿಂಗಲ್ ಟ್ರಿಪ್‌ಗೆ 325 ರೂಪಾಯಿ, ದಿನದಲ್ಲಿ ಹಲವು ಟ್ರಿಪ್‌ಗೆ 490 ರೂಪಾಯಿ, ಮಾಸಿಕ ಪಾಸ್‌ಗೆ 9815 ರೂಪಾಯಿ ನೀಡಬೇಕಿದೆ.