ಬ್ರಹ್ಮಾವರ ಠಾಣೆಗೆ ವಿಚಾರಣೆಗೆ ಹಾಜರಾದ ಮಹೇಶ್ ಶೆಟ್ಟಿ ತಿಮರೋಡಿ!
ಬ್ರಹ್ಮಾವರ: ಬಿ.ಎಲ್.ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದಲ್ಲಿ ಇಂದು ಬೆಳಗ್ಗೆ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ನಿವಾಸದಲ್ಲಿ ವಿಚಾರಣೆಗಾಗಿ ವಶಕ್ಕೆ ಪಡೆದಿರುವ ಪೊಲೀಸರು ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕರ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.
.
ತಿಮರೋಡಿ ಅವರನ್ನು ಪೊಲೀಸರು ಕಾರ್ಕಳ ಪೆರ್ಡೂರು ಮಾರ್ಗವಾಗಿ ಕರೆದುಕೊಂಡು ಬಂದಿದ್ದು ಅಲ್ಲಲ್ಲಿ ಸೌಜನ್ಯ ಪರ ಹೋರಾಟಗಾರರು ನೆರೆದಿದ್ದರು. ಬ್ರಹ್ಮಾವರ ಮುಖ್ಯ ಜಂಕ್ಷನ್‌ನಿಂದ ಪೊಲೀಸ್ ಠಾಣೆಗೆ ಹೋಗುವ ಎಲ್ಲ ಮಾರ್ಗಗಳನ್ನು ಬಂದ್ ಮಾಡಲಾಗಿತ್ತು. ಪಾದಚಾರಿಗಳನ್ನು ವಿಚಾರಣೆ ನಡೆಸಿ ಒಳಗಡೆ ಬಿಡಲಾಗುತ್ತಿತ್ತು.
ವೃತ್ತ ನೀರಿಕ್ಷಕರ ಕಚೇರಿಗೆ ಬೇರೊಂದು ಮಾರ್ಗವಾಗಿ ತಿಮರೋಡಿ ಅವರನ್ನು ಕರೆದುಕೊಂಡು ಬರಲಾಗಿದೆ. ಜಂಕ್ಷನ್‌ನಲ್ಲಿ ನೆರೆದಿದ್ದ ಸೌಜನ್ಯ ಪರ ಹೋರಾಟಗಾರರು ʻಜಸ್ಟೀಸ್ ಫಾರ್ ಸೌಜನ್ಯʼ ಘೋಷಣೆಗಳನ್ನು ಕೂಗಿದರು.