ಶಿವಮೊಗ್ಗ: ನಗರದ ಇಂದಿರಾ ಗಾಂಧಿ ಬಡಾವಣೆಯಲ್ಲಿ ಬುಧವಾರ (ಆ.20) ತಡರಾತ್ರಿ ತಮ್ಮನೇ ಅಣ್ಣನಿಗೆ ಚಾಕು ಇರಿದ ಘಟನೆ ನಡೆದಿದೆ.
ಜನಾರ್ಧನ್ (27) ಮೃತಪಟ್ಟ ಯುವಕ (ಅಣ್ಣ). ಹನುಮಂತ (26) ಬಂಧಿತ ಆರೋಪಿ (ತಮ್ಮ) .
ಮೃತ ಜನಾರ್ಧನ್, ಶಿವಮೊಗ್ಗದ ನಿಸರ್ಗ ರೆಸ್ಟೋರೆಂಟ್ ನಲ್ಲಿ ಕುಕ್ ಆಗಿ ಕೆಲಸ ಮಾಡುತ್ತಿದ್ದ. ಹನುಮಂತ, ಮೃತರ ಚಿಕ್ಕಪ್ಪನ ಮಗ ಎನ್ನಲಾಗಿದೆ.
5 ವರ್ಷದ ಹಿಂದೆ ಬೈಕ್ ಅಪಘಾತದಲ್ಲಿ ತಮ್ಮ ಹನುಮಂತ ಎಂಬವನು ಕಾಲಿಗೆ ಪೆಟ್ಟು ಮಾಡಿಕೊಂಡು, ಬಳಿಕ ಆತ ಕುಂಟುತ್ತಾ ನಡೆದಾಡುತ್ತಿದ್ದ. ಅಣ್ಣ ಜನಾರ್ಧನ್ ಕಾಲು ಅರ್ಧ ಹೋಯ್ತು, ಪೂರ್ತಿ ಹೋಗಿಲ್ಲ ಎಂದು ಕಾಲಿನ ವಿಚಾರಕ್ಕೆ ಆತನನ್ನು ರೇಗಿಸುತ್ತಿದ್ದ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
ಇದೇ ಕಾರಣಕ್ಕೆ ಹನುಮಂತ ಬುಧವಾರ (ಆ.20) ತಡರಾತ್ರಿ ಅಣ್ಣ ಜನಾರ್ಧನ್ ಗೆ ಚಾಕು ಇರಿದಿದ್ದಾನೆ. ಏಕಾಏಕಿ 3-4 ಬಾರಿ ಇರಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ಜನಾರ್ಧನ್ ನನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜನಾರ್ಧನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಲಿಂಕ್ ಬಳಸಿಕೊಳ್ಳಿ👇
ಜನಾರ್ಧನ್ ಮೃತ ದೇಹವನ್ನು ಮೆಗ್ಗಾನ್ ಶವಾಗಾರಕ್ಕೆ ರವಾನಿಸಲಾಗಿದೆ. ಆರೋಪಿ ಹನುಮಂತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.