ಮಂಗಳೂರು: ಸೌಜನ್ಯ ಪ್ರಕರಣ ಮರು ತನಿಖೆ ಯಾವ ಆಯಮದಲ್ಲಿ ನಡೆದರೂ ನಾವು ಅದಕ್ಕೆ ಬೆಂಬಲ ಕೊಡುತ್ತೇವೆ. ಎಸ್‌ಐಟಿಯವರು ಬೇಕಾದ್ರೆ ಇನ್ನು ನಲ್ವತ್ತು ಗುಂಡಿ ತೆಗೆಯಲಿ. ಆದರೆ ನಮ್ಮ ಪಕ್ಷದ ಹಿರಿಯ ಮುಖಂಡರಾದ ಬಿ.ಎಲ್. ಸಂತೋಷ್ ಬಗ್ಗೆ, ಕ್ಷೇತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡುವವರ ಮೇಲೆ ಪೊಲೀಸರ್ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಷ್ ಕುಂಪಲ ಪ್ರಶ್ನಿಸಿದ್ದಾರೆ.
ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯನ್ನುದೇಶಿಸಿ ಮಾತಾಡಿದ ಅವರು, ಸೌಜನ್ಯ ಪ್ರಕರಣದಲ್ಲಿ ಆಕೆಯ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂಬುವುದು ನಮ್ಮ ಆಗ್ರಹವಾಗಿದೆ. ಅದೇ ರೀತಿ ಅನಾಮಿಕನೋರ್ವ ಹೇಳಿಕೆ ಪ್ರಕಾರ ಎಸ್‌ಐಟಿ ತನಿಖೆ ನಡೆಸುತ್ತಿದೆ ಇದಕ್ಕೆ ನಮ್ಮ ವಿರೋಧ ವಿಲ್ಲ. ಆದರೆ ಅನಾಮಿಕನ ನಡೆಯ ಬಗ್ಗೆ ಸಂಶಯ ಬರುತ್ತಿದೆ. ನಾವು ಆರಂಭದಲ್ಲಿಯೇ ಆತನ ಮಂಪರು ಪರೀಕ್ಷೆಗೆ ಒತ್ತಾಯಿಸಿದ್ದೆವು. ಇದೀಗ ಮಾಧ್ಯಮಗಳಲ್ಲೂ ಆತ ಈ ರೀತಿ ಹೇಳಲು ಎರಡ್ಮೂರು ಒತ್ತಾಯ ಇತ್ತು ಎಂದು. ಆ ಮೂರು ಜನರು ಯಾರು? ಇದರಲ್ಲಿ ಸೆಂಥಿಲ್ ಇದ್ದಾರಾ? ಗುಂಡುರಾವ್ ಎಡಪಂಥೀಯರು ಎಂದಿದ್ದಾರೆ. ಡಿಕೆಶಿ ಷಡ್ಯಂತ್ರ ಅಂತ ಹೇಳಿದ್ದಾರೆ. ಹಾಗಾದರೆ ಹಿಂದೂ ದೇಗುಲದ ಮೇಲೆ ಷಡ್ಯಂತ್ರ ನಡೆಯುತ್ತಿದ್ದೆಯಾ? ಎಂದು ಪ್ರಶ್ನಿಸುತ್ತಿದ್ದಾರೆ.
ನಮ್ಮ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡುತ್ತಿದ್ದರೂ ಅವರ ಮೇಲೆ ಪೊಲೀಸರ್ಯಾಕೆ ಸುಮುಟೋ ಕೇಸ್ ದಾಖಲಿಸುತ್ತಿಲ್ಲ. ಈ ಹಿಂದೆ ಶಬರಿಮಲೆ, ಶನಿಸಿಂಗ್ಣಾಪುರ್ ದೇವಸ್ಥಾನಗಳ ಮೇಲೆ ಷಡ್ಯಂತ್ರ ನಡೆದಾಗಲೂ ಬಿ.ಎಲ್ ಸಂತೋಷ್ ಹೋರಾಟ ಮಾಡಿದ್ದರು. ಇದೀಗ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ನಡೆದಾಗಲೂ ಅದರ ವಿರುದ್ಧ ಹೋರಾಡುತ್ತಿದ್ದಾರೆ. ಇದೀಗ ಜಾಲತಾಣಗಳಲ್ಲಿ ಅವರ ಅವಹೇಳನ ನಡೆಯುತ್ತಿದ್ದು, ಇದು ನಮ್ಮ ಕಾರ್ಯಕರ್ತರಿಗೆ ಮಾಡಿದ ಅಪಮಾನ ಎಂದರು.
ಕಳೆದ ಎರಡು ತಿಂಗಳಿನಿಂದ ಅನಾಮಿಕ ಬಂದಂದಿನಿಂದ ಎಸ್‌ಐಟಿ ಚರ್ಚೆ ನಡೆಯುತ್ತಾ ಇದೆ. ಸೌಜನ್ಯ ಪ್ರಕರಣದಲ್ಲಿ ನ್ಯಾಯ ಸಿಗಬೇಕು ಎನ್ನುವುದರಲ್ಲಿ ಭಾಜಪಾದಿಂದ ಎರಡು ಮಾತಿಲ್ಲ. ಮರುತನಿಖೆಗೂ ಭಾಜಪಾದ ಬೆಂಬಲವಿದೆ. ಆದರೆ ಸಂತೋಷ್ ಜೀ ಆರೆಸ್ಸೆಸ್‌ನಿಂದ ಬಂದಿದ್ದು, ತಮ್ಮ ಕುಟುಂಬವನ್ನೇ ತೊರೆದಿದ್ದಾರೆ. ಇವರ ನಿಂದಿಸುವವರ ಪೊಲೀಸರು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಕುಂಪಲ ಆಗ್ರಹಿಸಿದರು.
ಪೂವಪ್ಪನ ಮನೆ ಗೊತ್ತಿರುವ ಪೊಲೀಸರಿಗೆ ಮಹಮ್ಮದ್ ಅಲಿಯ ಮನೆ ಗೊತ್ತಿಲ್ವಾ?
ಪೊಲೀಸರಿಗೆ 84 ವರ್ಷದ ಪೂವಪ್ಪರ ಮನೆಗೆ ಹೋಗಿ ವಿಚಾರಣೆ ನಡೆಸುತ್ತಾರೆ. ಜನಾರ್ದನ ಪೂಜಾರಿಯವರ ಹೇಳಿಕೆ ಮುಂದಿಟ್ಟ ನಾರಾಯಣಗುರುಗಳನ್ನು ಅವಹೇಳನ ಮಾಡಿದ ಮಹಮ್ಮದ್ ಅಲಿಯ ಮೇಲೇಕೆ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ? ಒಬ್ಬರಿಗೊಂದು ನ್ಯಾಯ ಇನ್ನೊಬ್ಬರಿಗೊಂದ ನ್ಯಾಯವಾ? ಈ ಹಿಂದೆ ಪೊಲೀಸರು ಸಾಮಾಜಿಕ ಜಾಲತಾಣ ನೋಡಿಕೊಂಡು ಸುಮೊಟೊ ಕೇಸ್ ದಾಖಲಿಸಿದ್ದರು. ಆದರೆ ಈಗ್ಯಾಕೆ ಪೊಲೀಸರು ಮೌನವಾಗಿದ್ದಾರೆ? ಪೂವಪ್ಪನ ಮನೆ ದಾರಿ ಗೊತ್ತಿರುವ ಪೊಲೀಸರಿಗೆ ಮಹಮ್ದದ್ ಅಲಿಯ ಮನೆ ದಾರಿ ಗೊತ್ತಿಲ್ವಾ? ಎಂದು ಸತೋಶ್ ಕುಂಪಲ ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಹಾಗೂ ಯತೀಶ್ ಅರ್ವ, ಮುಖಂಡರಾದ ಸಂಜಯ್ ಪ್ರಭು, ಹಿಂದುಳಿದ ವರ್ಗದ ಅಧ್ಯಕ್ಷ ಮಹೇಶ್ ಜೋಗಿ,
ಜಿಲ್ಲಾ ವಕ್ತಾರ ಅರುಣ್ ಶೇಟ್ ಹಾಗೂ ಹಿಂದುಳಿದ ವರ್ಗದ ಸುಧಾಕರ್ ಅಡ್ಯಾರ್ ಉಪಸ್ಥಿತರಿದ್ದರು.