ಬಜಾಲ್ ನಂತೂರ್‌ನಲ್ಲಿ ಜೆ.ಎಫ್ ಅಸೋಸಿಯೇಷನ್‌ನಿಂದ 79ನೇ ಸ್ವಾತಂತ್ರ್ಯೋತ್ಸವ

ಮಂಗಳೂರು: ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನು ತ್ಯಾಗ ಮಾಡಿದ ಎಲ್ಲ ಮಹಾತ್ಮಾರನ್ನು ನಾವು ಸ್ಮರಿಸಬೇಕು. ಸ್ವಾತಂತ್ರ್ಯವನ್ನು ಪಡೆಯಲು ಅವರು ಮಾಡಿದ ತ್ಯಾಗದಿಂದ ನಾವು ಇಂದು ನೆಮ್ಮದಿಯ ಉಸಿರಾಡುತ್ತಿದ್ದೇವೆ ಎಂದು ಮ.ನ.ಪಾ. ನಿಕಟ ಪೂರ್ವ ಸದಸ್ಯ ಹಾಗೂ ಬಜಾಲ್ ನಂತೂರ್ ಬದ್ರಿಯಾ ಜುಮಾ ಮಸ್ಜಿದ್ ಅಧ್ಯಕ್ಷ ಅಬ್ದುಲ್ ರವೂಫ್ ಹೇಳಿದ್ದಾರೆ.

79ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಜೆ.ಎಫ್ ಅಸೋಸಿಯೇಷನ್ (ರಿ) ಬಜಾಲ್ ನಂತೂರ್ ಇದರ ವತಿಯಿಂದ ಶುಕ್ರವಾ ಚೌಕ್ ನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಗೈದು ಬಳಿಕ ಅವರು ಮಾತನಾಡುತ್ತಿದ್ದರು.

ಜೆ.ಎಫ್.ಎ ಸಂಸ್ಥೆ ಹಲವಾರು ಜನಪರ ಕಾರ್ಯಕ್ರಮವನ್ನು ಹಾಕಿಕೊಂಡು ಉತ್ತಮ ಕೆಲಸವನ್ನು ಮಾಡುತ್ತಿದ್ದು, ಇನ್ನಷ್ಟು ಸೇವೆಗಳು ಜನರಿಗೆ ಸಿಗುವಂತಾಗಲಿ. ಸಂಸ್ಥೆಯ ಸಾಮಾಜಿಕ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಈ ವೇಳೆ ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪರೀಕ್ಷೆಯಲ್ಲಿ ಇತಿಹಾಸ ವಿಭಾಗದಲ್ಲಿ ಶೇ.80 ರ್ಯಾಂಕ್ ಪಡೆದ ದಿ. ಉಸ್ಮಾನ್ ಅವರ ಪುತ್ರ ಅಂಧ ವಿದ್ಯಾರ್ಥಿ ಸಜ್ಜಾದ್ ಹಾಗೂ ಎಸೆಸೆಲ್ಸಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಸುಜಾತ ಅವರ ಪುತ್ರಿ ಖುಷಿ ಆಮೇಹು, ಆಝೀಜ್ ಅವರ ಪುತ್ರ ಆತಿಫ್ ಸಾದ್ ಅವರನ್ನು ಸಂಸ್ಥೆಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರದಮದಲ್ಲಿ ಜೆ.ಎಫ್ ಅಸೋಸಿಯೇಷನ್ (ರಿ) ಸಂಸ್ಥೆಯ ಅಧ್ಯಕ್ಷ ನಝೀರ್ ಬಜಾಲ್ ಅಧ್ಯಕ್ಷತೆ ವಹಿಸಿದ್ದರು. ಬದ್ರಿಯಾ ಜುಮ್ಮಾ ಮಸೀದಿಯ ಖಾತಿಬ್ ನಾಸೀರ್ ಸಅದಿ ದುವಾ ನೆರೆವೇರಿಸಿದರು. ಮ.ನ.ಪಾ ನಿಕಟಪೂರ್ವ ಸದಸ್ಯ ಅಶ್ರಫ್.ಕೆ, ಎಸ್ ಕೆ ಎಸ್ ಎಸ್ ಎಫ್ ಬಜಾಲ್ ವಲಯ ಅಧ್ಯಕ್ಷ ಹಮ್ಮಬ್ಬಾ ಮೋನಕ, ಹಾಜಿ ಬಿ.ಎನ್ ಅಬ್ಬಾಸ್, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಬಿ.ಫಕರುದ್ದೀನ್, ಗೌಸಿಯ ಜುಮ್ಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಝಾಕ್, ಸದರ್ ಮುಅಲ್ಲಿಮ್ ಅಬೂಬಕ್ಕರ್ ಮುಸ್ಲಿಯಾರ್ ಕುಕ್ಕಾಜೆ, ಮುಅಲ್ಲಿಮ್ ಹಕೀಮ್ ಮದನಿ, ಅಬೂಬಕ್ಕರ್ ಸಖಾಫಿ, ಜೆ ಎಫ್ ಎ ಉಪಾಧ್ಯಕ್ಷ ಸೌಕತ್ ಇಬ್ರಾಹೀಂ, ಎಚ್.ಎಸ್ ಜಬ್ಬಾರ್, ಹನೀಫ್ ಕೆಳಗಿನಮನೆ, ಸಾಕೀರ್ ಚಾಕಿ, ಉನೈಸ್, ಅಮೀನ್, ನಾಸಿರ್ ಕೆಳಗಿನಮನೆ, ಅಶ್ಫಾಕ್, ಅನ್ಸಾರ್ ಕೆಳಗಿನಮನೆ, ಹರಿಪ್ರಸಾದ್, ಇಬ್ರಾಹೀಂ ಜಿಯಾ, ಉಬೈದ್, ಹರೀಶ್, ಇಸ್ಮಾಯೀಲ್ ಶೂಬ, ಎಸ್ ವೈ ಎಸ್ ಅಧ್ಯಕ್ಷ ಆರೀಸ್, ಕೆ.ಬಿ ಅಬ್ದುಲ್ ರಹಿಮಾನ್, ಕಲಂದರ್, ಯು ಪಿ ವಾಸಿಂ, ಎಚ್ ಎಸ್ ಮುನ್ನಿ, ಯು ಪಿ ಇಮ್ರಾನ್ ಮತ್ತಿತರರು ಉಪಸ್ಥಿತರಿದ್ದರು.

ಜೆ ಎಫ್ ಅಸೋಸಿಯೇಷನ್ (ರಿ) ಪ್ರಧಾನ ಕಾರ್ಯದರ್ಶಿ ಹಾಕೀಝ್ ಸ್ವಾಗತಿಸಿದರು. ಶಾಫಿ ಮಿಸ್ಬಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

error: Content is protected !!