ಹಳೆಯಂಗಡಿ: ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತೋಕೂರಿನಲ್ಲಿ ರವಿವಾರ(ಆ.17) ಬೆಳಿಗ್ಗೆ 10ಗಂಟೆಗೆ ದೇವಾಲಯದ ಸಭಾಂಗಣದಲ್ಲಿ ದೇವಳದ ಮೇಲ್ಛಾವಣಿಗೆ ತಗಡು ಚಪ್ಪರವನ್ನು ಹಾಕುವ ಬಗ್ಗೆ ಊರಪರವೂರ ಭಕ್ತರ ವಿಶೇಷ ಸಭೆಯು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಗುರುರಾಜ್ ಎಸ್ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜರಗಿತು.
ದೇವಳಕ್ಕೆ ಭೇಟಿ ನೀಡುವ ಭಕ್ತರಿಗೆ ಬಿಸಿಲು ಮಳೆಯಿಂದ ತೊಂದರೆಯಾಗುವ ಕಾರಣ ದೇವಳದ ಹೊರಾಂಗಣ ಹಾಗೂ ಒಳಾಂಗಣದ ಮೇಲ್ಛಾವಣಿಗೆ ತಗಡು ಚಪ್ಪರವನ್ನು ಹಾಕಿಸುವುದೆಂದು ನಿರ್ಣಯಿಸಲಾಯಿತು. ಆದರೆ ದೇವಳದ ಮುಖಾಂತರ ಮಾಡಲು ಅನುಕೂಲವಾದ ಕಾರಣ ಊರಪರವೂರ ಭಕ್ತಾದಿಗಳ ಸಹಕಾರದಿಂದ ತಗಡು ಚಪ್ಪರವನ್ನು ಹಾಕಿಸುವುದೆಂದು ನಿರ್ಣಯಿಸಲಾಯಿತು.
ಸಭೆಯಲ್ಲಿ ಕುಲಾಲ ಸುಧಾರಕ ಸಂಘ ಎಸ್. ಕೋಡಿ, ತೋಕೂರು ಇವರು ದೇವಳದ ಒಳಾಂಗಣ ಮೇಲ್ಛಾವಣಿಯ ಸಂಪೂರ್ಣ ಖರ್ಚನ್ನು ಭರಿಸುವುದಾಗಿ ಆಶ್ವಾಸನೆ ನೀಡಿದರು. ಹಾಗೂ ಭಕ್ತರಿಂದ ಒಂದು ಶೀಟಿನ ಬೆಲೆ ರೂ.2000/- (ಟ್ರಸ್ ಸೇರಿ) ಸ್ವೀಕರಿಸುವುದೆಂದು ನಿರ್ಣಯಿಸಲಾಯಿತು.
ಈ ಸಭೆಯಲ್ಲಿ ದೇವದ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಪುರುಷೋತ್ತಮ ಕೋಟ್ಯಾನ್, ಸಂಪತ್ ಜೆ ಶೆಟ್ಟಿ, ಅಶೋಕ್ ಕುಂದರ್, ವಿಶ್ವನಾಥ್, ಸವಿತಾ ಶರತ್, ಜೀರ್ಣೋದ್ಧಾರ ಸಮಿತಿಯ ಹರಿದಾಸ್ ಭಟ್,ಹರಿಪ್ರಸಾದ್ ಶೆಟ್ಟಿ ತೋಕೂರು ಗುತ್ತು ಹೊಸಮನೆ, ವಿಜಯ ಕುಮಾರ್ ರೈ, ಮೋಹನ್ ದಾಸ್, ಸುಗಂಧಿ ಡಿ. ಕೊಂಡಾಣ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಸುಮ ಚಂದ್ರಶೇಖರ್, ಉಪಾಧ್ಯಕ್ಷರಾದ ಹೇಮನಾಥ ಅಮೀನ್, ಜಿಲ್ಲಾ ಪಂಚಾಯತ್ ನ ನಿಕಟ ಪೂರ್ವ ಉಪಾಧ್ಯಕ್ಷರಾದ ಕಸ್ತೂರಿ ಪಂಜ, ಗ್ರಾಮಸ್ಥರಾದ ಹರೀಶ್ ಶೆಟ್ಟಿ, ಲೋಕಯ್ಯ ಸಾಲಿಯನ್,ಗಣೇಶ್ ಜಿ. ಬಂಗೇರ, ವಿಪುಲ ಡಿ. ಶೆಟ್ಟಿಗಾರ್, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಹಾಜರಿದ್ದರು.
ವ್ಯವಸ್ಥಾಪನ ಸಮಿತಿ ಸದಸ್ಯರಾದ ಸಂಪತ್ ಶೆಟ್ಟಿ ತೋಕೂರು ಗುತ್ತು ಕಾರ್ಯಕ್ರಮ ನಿರೂಪಿಸಿದರು, ಸಮಿತಿ ಸದಸ್ಯರಾದ ಪುರುಷೋತ್ತಮ ಕೋಟ್ಯಾನ್ ವಂದಿಸಿದರು.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19