ಬಂಟ್ವಾಳ: ಕೊಳ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಚಿ ವಾರ್ಡಿನ ಮಂಚಿ ಜಂಕ್ಷನಲ್ಲಿ ಸ್ವಚ್ಚತೆ ಮತ್ತು ಅಂದವನ್ನು ಹೆಚ್ಚಿಸುವ ಸಲುವಾಗಿ ಆಟೋ ಪಾರ್ಕಿಗೆ ಗ್ರಾ.ಪಂಚಾಯತ್ ಅನುದಾನದಿಂದ ಇಂಟರ್ ಲಾಕ್ ಅಳವಡಿಸಿದ್ದು, ಅದನ್ನು ಇಂದು ಕೊಳ್ನಾಡು ಗ್ರಾ.ಪಂಚಾಯತ್ ಅದ್ಯಕ್ಷರಾದ ಅಶ್ರಪ್ ಕೆ.ಸಾಲೆತ್ತೂರು, ಉಪಾದ್ಯಕ್ಷರಾದ ಅಸ್ಮ ಹಸೈನಾರ್ ಸ್ಥಳೀಯ ಸದಸ್ಯರಾದ ಲವೀನಾ ಡಿ.ಸೋಜಾ ಉಪಸ್ಥಿತಿಯಲ್ಲಿ ಜಂಟಿಯಾಗಿ ಉದ್ಘಾಟಿಸಿದರು.
ಕೊಳ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಚಿ ವಾರ್ಡಿನ ಕೈಯ್ಯೂರು ಸ್ಥಳೀಯ ನಾಗರೀಕರು ಹಾಗೂ ಅಲ್ಲಿನ ಸ್ಥಳೀಯ ಜಂಕ್ಷನಿನ ರಿಕ್ಷಾ ( ಆಟೋ) ಚಾಲಕರು ಮಳೆಗಾಲದಲ್ಲಿ ಕೆಸರುಮಯವಾಗುವ ಪಾರ್ಕಿಗೆ ಇಂಟರ್ ಲಾಕ್ ಅಳವಡಿಸುವಂತೆ ಅದ್ಯಕ್ಷರಲ್ಲಿ ಬೇಡಿಕೆ ಸಲ್ಲಿಸಿದ್ದರು. ಅದ್ಯಕ್ಷರ ವಿವೇಚನಾ ನಿಧಿಯಿಂದ ಕೈಯ್ಯೂರು ರಸ್ತೆಗೆ ಅನುದಾನ ನಿಗದಿಪಡಿಸಲಾಗಿತ್ತು, ಆದರೆ ಆ ರಸ್ತೆಗೆ ಶಾಸಕರ ಅನುದಾನದಿಂದ ಡಾಮಾರೀಕರಣವಾದ ಕಾರಣ ಅದನ್ನು ಕೊಳ್ನಾಡು ಗ್ರಾ.ಪಂಚಾಯತ್ ಕ್ರೀಯಾಶೀಲ ಅದ್ಯಕ್ಷರಾದ ಅಶ್ರಪ್ ಕೆ.ಸಾಲೆತ್ತೂರು ತಮ್ಮ ವಿವೇಚನೆಯಿಂದ ಬದಲಾವಣೆ ಮಾಡಿ ಆಟೋ ಪಾರ್ಕಿಗೆ ಇಂಟರ್ ಲಾಕ್ ಅಳವಡಿಸಿ ಅನುದಾನ ನೀಡಿರುತ್ತಾರೆ. ಇಂದು ಅದ್ಯಕ್ಷರ ಸಮ್ಮುಖದಲ್ಲಿ ಉದ್ಘಾಟನೆಗೊಂಡಿತು.
ಉದ್ಘಾಟನ ಸಮಾರಂಭದಲ್ಲಿ ಎಂ.ಎಸ್.ಮಹಮ್ಮದ್, ಸುಭಾಶ್ಚಂದ್ರ ಶೆಟ್ಟಿ ಮಾತಾಡಿದರು. ಇವರಿಗೆ ಮಂಚಿ- ನೂಜಿಬೈಲ್ ವಾರ್ಡಿನ ಪ್ರಜ್ಞಾವಂತ ಮತದಾರರ ಪರವಾಗಿ ಹೃದಯ ತುಂಬಿದ ಅಭಿನಂದನೆಗಳು. ಈ ಸಂಧರ್ಭದಲ್ಲಿ ದ.ಕ ಜಿಲ್ಲಾ ಪಂಚಾಯತ್ ಮಾಜಿ ಉಪಾದ್ಯಕ್ಷರಾದ ಎಂ.ಎಸ್.ಮಹಮ್ಮದ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ದ.ಕ.ಜಿಲ್ಲಾದ್ಯಕ್ಷರಾದ ಕುಳಾಲು ಸುಭಾಶ್ಚಂದ್ರ ಶೆಟ್ಟಿ, ಗ್ರಾ.ಪಂಚಾಯತ್ ಉಪಾದ್ಯಕ್ಷರಾದ ಕೆ.ಎ.ಅಸ್ಮ ಹಸೈನಾರ್ ತಾಳಿತ್ತನೂಜಿ , ಗ್ರಾ.ಪಂಚಾಯತ್ ಸದಸ್ಯರಾದ ಸುಲೋಚನ ರೈ, ವಲಯ ಕಾಂಗ್ರೇಸ್ ಅದ್ಯಕ್ಷರಾದ ಪವಿತ್ರ ಪೂಂಜಾ, ವಲಯ ಕಾಂಗ್ರೇಸ್ ಮಾಜಿ ಅದ್ಯಕ್ಷರೂ, ಮಾಜಿ ಗ್ರಾ.ಪಂಚಾಯತ್ ಸದಸ್ಯರಾದ ಖಾದರ್ ಮೂಸ, ಯುವ ಕಾಂಗ್ರೇಸ್ ಮುಖಂಡ ಹಪೀಝ್ ಸಾಲೆತ್ತೂರು ಸೂಪರ್ ಸ್ಟಾರ್ ಮಂಚಿ ಇದರ ಅದ್ಯಕ್ಷರಾದ ಉದಯ ಕುಮಾರ್, ಮಾಜಿ ಅದ್ಯಕ್ಷರಾದ ರಾಜೇಂದ್ರ ಕೋಕಲ, ಹನೀಪ್ ಮಂಚಿ, ರಾಘವ ಮಂಚಿ, ಸದಾಶಿವ ಸಿಂಗರೇ ಕೋಡಿ ವಲಯ ಕಾಂಗ್ರೇಸ್ ಪಧಾದಿಕಾರಿಗಳಾದ ಸೋಮಶೇಖರ ಗೌಡ, ಖಾದರ್ ನಾರ್ಶ ಸೇರಿದಂತೆ ಸ್ಥಳೀಯ ನಾಗರೀಕರು ಉಪಸ್ಥಿತರಿದ್ದರು.