“ಧರ್ಮಸ್ಥಳಕ್ಕೆ ಹೋಗಿದ್ದ ಅಪ್ರಾಪ್ತ ಸೋದರಿ ಮರಳಿ ಬಂದಿಲ್ಲ!” ಬಂಟ್ವಾಳ ನಿವಾಸಿಯಿಂದ ಎಸ್ ಐಟಿಗೆ ದೂರು!!

ಬೆಳ್ತಂಗಡಿ: ನನ್ನ ಸೋದರಿ 17 ವರ್ಷದವಳಾಗಿದ್ದಾಗ ನೆರೆಮನೆಯ ಮಹಿಳೆ ಧರ್ಮಾಸ್ಥಳ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದು ಇಲ್ಲಿಯವರೆಗೆ ವಾಪಾಸ್ ಆಗಿಲ್ಲ ಎಂದು ಬಂಟ್ವಾಳ ತಾಲೂಕಿನ ಕಾವಳ ಮುಡೂರು ಗ್ರಾಮದ ನಿವಾಸಿ ನಿತಿನ್ ಎಂಬವರು ಎಸ್ ಐಟಿ ಕಚೇರಿಗೆ ದೂರು ನೀಡಿದ್ದಾರೆ.

ಸೋದರಿ ಹೇಮಾವತಿ ಮಹಿಳೆಯೊಬ್ಬರ ಜೊತೆ 13 ವರ್ಷ ಹಿಂದೆ ಧರ್ಮಸ್ಥಳಕ್ಕೆ ಬಂದಿದ್ದು ಮಹಿಳೆ ಹಿಂದಿರುಗಿ ಬಂದರೂ ತಂಗಿ ಬಂದಿಲ್ಲ. SITರಚನೆಯಾದ ಬಳಿಕ ವಿಶ್ವಾಸ ಬಂದಿದೆ. ಹಾಗಾಗಿ ದೂರ ನೀಡಲು ಬಂದಿದ್ದೇನೆ ಎಂದು ನಿತಿನ್ ಹೇಳಿದ್ದಾರೆ. ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ಒಬ್ಬ ಮಹಿಳೆ ಕರೆದುಕೊಂಡು ಹೋಗಿದ್ದರು. ಅವರ ಹೆಸರು ಪೊಲೀಸರಿಗೆ ಹೇಳಿದ್ದೇನೆ ಎಂದರು. ಪುಂಜಾಲಕಟ್ಟೆ ಠಾಣೆಯಲ್ಲಿ ಹೇಮಾವತಿ ನಾಪತ್ತೆ ಕುರಿತು ದೂರು ನೀಡಲಾಗಿತ್ತು. ಕರೆದುಕೊಂಡ ಹೋಗಿದ್ದ ಮಹಿಳೆ ಸರ್ಕಾರಿ ಉದ್ಯೋಗಿಯಾಗಿದ್ದು ಆಕೆಯ ಬಗ್ಗೆ ಪೊಲೀಸರಿಗೆ ತಿಳಿಸಿದ್ದರೂ ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂಬ ಕಾರಣಕ್ಕೆ ಪೊಲೀಸರು ತನಿಖೆ ಮಾಡಿಲ್ಲ ಎಂದು ನಿತಿನ್ ಗಂಭೀರ ಆರೋಪ ಮಾಡಿದ್ದಾರೆ.

error: Content is protected !!