ಮಂಗಳೂರು: ವಿದುಷಿ ಸಪ್ನಾ ಕಿರಣ್ ಶಿಷ್ಯೆ ಮತ್ತು ಪುತ್ರಿ ದುಬೈ ಸಂಕೀರ್ಣ ಸ್ಕೂಲ್ ಆಫ್ ಡ್ಯಾನ್ಸ್‌ನ ಕು| ಅದಿತಿ ಕಿರಣ್ ಆ.17ರಂದು ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ಸಂಜೆ 5.30ಕ್ಕೆ ಭರತ ನಾಟ್ಯ ರಂಗ ಪ್ರವೇಶ ಮಾಡಲಿದ್ದಾರೆ.
ಶರವು ಮಹಾಗಣಪತಿ ದೇವಸ್ಥಾನ ಧರ್ಮದರ್ಶಿ ಶರವು ರಾಘವೇಂದ್ರ ಶಾಸ್ತ್ರಿ ಧರ್ಮಾಧಿಕಾರಿ ಆಶೀರ್ವಚನ ನೀಡಲಿದ್ದಾರೆ. ಬೆಂಗಳೂರಿನ ನೃತ್ಯ ವಿದ್ಯಾನಿಕೇತನದ ಮಹಾಗುರು ಕಲಾಶ್ರೀ ಸವಿತಾ ಅರುಣ್ ಉಪಸ್ಥಿತರಿರಲಿದ್ದಾರೆ. ವಿದುಷಿ ಸಪ್ನಾ ಕಿರಣ್ ಹಾಗೂ ಕಿರಣ್ ಕುಮಾರ್ ಕದ್ರಿ ಭರತನಾಟ್ಯ ಪ್ರಸ್ತುತಪಡಿಸಿದ್ದಾರೆ.