ಕಂಕನಾಡಿ-ವಾಮಂಜೂರು ಠಾಣೆಗಳ ಮರುವಿಂಗಡಣೆ, ನಾಗರಿಕರಿಗೆ ಮಹತ್ವದ ಸೂಚನೆ

ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣೆ ಮತ್ತು ಮಂಗಳೂರು ಗ್ರಾಮಾಂತರ (ವಾಮಂಜೂರು) ಪೊಲೀಸ್ ಠಾಣೆಗಳ ವ್ಯಾಪ್ತಿಯ ಗ್ರಾಮಗಳನ್ನು ಮರುವಿಂಗಡಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದೀಗ ಕಂಕನಾಡಿ ಠಾಣಾ ವ್ಯಾಪ್ತಿಗಿದ್ದ ಹಲವು ಗ್ರಾಮಗಳು ವಾಮಂಜೂರು ಠಾಣಾ ವ್ಯಾಪ್ತಿಗೆ ಸೇರ್ಪಡೆಗೊಂಡಿದೆ.

ಸರ್ಕಾರದ ಅಧಿಸೂಚನೆ 31-05-2021 ರಂತೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್‌ನ ಮಂಗಳೂರು ಗ್ರಾಮಾಂತರ (ವಾಮಂಜೂರು) ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಅಡ್ಯಾರು ಮತ್ತು ಅರ್ಕುಳ ಗ್ರಾಮಗಳನ್ನು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಗಿದೆ. ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪದವು ಗ್ರಾಮವನ್ನು ಮಂಗಳೂರು ಗ್ರಾಮಾಂತರ (ವಾಮಂಜೂರು) ಪೊಲೀಸ್ ಠಾಣಾ ವ್ಯಾಪ್ತಿಗೆ ಮರುವಿಂಗಡಿಸಿ ಸರಕಾರದ ಅಧಿಸೂಚನೆಯಲ್ಲಿ ಆದೇಶಿಸಲಾಗಿದೆ.

ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಸಂಬಂಧಿಸಿದ ಪದವು ಗ್ರಾಮಕ್ಕೆ ಒಳಪಡುವ ಕುಲಶೇಖರ, ಸಿಲ್ವರ್‌ಗೇಟ್, ಡೈರಿ ಗೇಟ್, ಕುಲಶೇಖರ ಚೌಕಿ, ಪದವಿನಂಗಡಿ, ಗುರುನಗರ, ಮೇರಿಹಿಲ್ ವೆಂಕಟರಮಣ ದೇವಸ್ಥಾನ ರಸ್ತೆ, ಕೊಪ್ಪಲಕಾಡು, ಬಾಂದೋಟ್ಟು ಯೆಯ್ಯಾಡಿ, ದಂಡಕೇರಿ, ಶಕ್ತಿನಗರ, ನೀತಿ ನಗರ, ಪೊಲೀಸ್ ಲೇನ್, ಪ್ರೀತಿನಗರ, ಸಂಜಯ ನಗರ, ಮುಗೋಡಿ, ಕಾರ್ಮಿಕ ಕಾಲೋನಿ, ಕೆಹೆಚ್‌ಬಿ, ನಾಲ್ಯಪದವು, ಗಂಧಕಾಡು, ಯೆಯ್ಯಾಡಿ ಇಂಡಸ್ಟ್ರಿಯಲ್ ಏರಿಯ, ರಾಜೀವ ನಗರ, ಮುತ್ತಪ್ಪ ಗುಡಿ, ಕಕ್ಕೆಬೆಟ್ಟು, ಮಂಜಡ್ಕ, ದತ್ತ ನಗರ, ಸಿದ್ದ ಪಡ್ಡು, ಪ್ರದೇಶಗಳನ್ನು ಮಂಗಳೂರು ಗ್ರಾಮಾಂತರ (ವಾಮಂಜೂರು) ಪೊಲೀಸ್ ಠಾಣಾ ವ್ಯಾಪ್ತಿಗೆ ವಿಂಗಡಿಸಲಾಗಿದೆ.

ಅದೇ ರೀತಿ ಮಂಗಳೂರು ಗ್ರಾಮಾಂತರ (ವಾಮಂಜೂರು) ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಅಡ್ಯಾರು ಮತ್ತು ಅರ್ಕುಳ ಗ್ರಾಮಕ್ಕೆ ಒಳಪಡುವ ಸ್ಥಳಗಳಾದ ಅಡ್ಯಾ‌ರ್ ಪದವು. ವಳಚ್ಚಿಲ್, ಸೋಮನಾಥ ಕಟ್ಟೆ, ಅಡ್ಯಾರ್ ಕಟ್ಟೆ, ಅರ್ಕುಳ, ಶ್ರೀನಿವಾಸ ಕಾಲೇಜ್, ಸಹ್ಯಾದ್ರಿ ಕಾಲೇಜ್, ಪ್ರದೇಶಗಳನ್ನು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಮರುವಿಂಗಡಿಸಿ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿರುತ್ತದೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

ಆ.15ರಿಂದ ಬದಲಾವಣೆ:
ಆಗಸ್ಟ್ 15, 025 ರಿಂದ ಪದವು ಗ್ರಾಮಕ್ಕೆ ಒಳಪಡುವ ಮೇಲ್ಕಂಡ ಪ್ರದೇಶದ ಸಾರ್ವಜನಿಕರು ತಮ್ಮ ಕ್ರಿಮಿನಲ್ ಪ್ರಕರಣಗಳು, ದೂರು ಅರ್ಜಿಗಳು, ಪಾಸ್ ಪೋರ್ಟ್ ಅರ್ಜಿ ವಿಚಾರಣೆ, ಪಿಸಿಸಿ ವಿಚಾರಣೆ, ಹಾಗೂ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಇತರೆ ವಿಷಯಗಳ ಮಂಗಳೂರು ಗ್ರಾಮಾಂತರ (ವಾಮಂಜೂರು) ಪೊಲೀಸ್ ಠಾಣೆಗೆ ಸಂಪರ್ಕಿಸಬೇಕು. ಹಾಗೂ ಅಡ್ಯಾರು ಮತ್ತು ಅರ್ಕುಳ ಗ್ರಾಮಕ್ಕೆ ಒಳಪಡುವ ಮೇಲ್ಕಂಡ ಪ್ರದೇಶದ ಸಾರ್ವಜನಿಕರು ಕಂಕನಾಡಿ ನಗರ ಪೊಲೀಸ್ ಠಾಣೆಗೆ ಸಂಪರ್ಕಿಸಬೇಕಾಗಿ ಈ ಮೂಲಕ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.

error: Content is protected !!