“ಎಸ್‌ಐಟಿ ಬೆಂಬಲಿಸಿ ಸೌಜನ್ಯ ಹೋರಾಟಗಾರರಿಂದ ಆ.24ರಂದು ʻಉಜಿರೆ ಚಲೋ’, ಲಕ್ಷಾಂತರ ಮಂದಿ ಭಾಗಿ!!

ಮಂಗಳೂರು: ಧರ್ಮಸ್ಥಳ ವ್ಯಾಪ್ತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಅತ್ಯಾಚಾರ, ಕೊಲೆ, ದರೋಡೆಯಂತಹ ಹಲವಾರು ಪ್ರಕರಣಗಳು ನಡೆದಿದ್ದು, ಆರೋಪಿಗಳ ಬಂಧನವಾಗಿಲ್ಲ. ವೇದವಲ್ಲಿ, ಮಾವುತ ನಾರಾಯಣ- ಯಮುನಾ ಕೊಲೆ ಪ್ರಕರಣ, ಪದ್ಮಲತಾ ಹಾಗೂ ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣಗಳನ್ನು ಎಸ್.ಐ.ಟಿ.ಗೆ ವಹಿಸಿ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಬೇಕು ಮತ್ತು ಈಗ ನಡೆಯುತ್ತಿರುವ ಎಸ್.ಐ.ಟಿ ತನಿಖೆಗೆ ಬೆಂಬಲ ವ್ಯಕ್ತಪಡಿಸಿ, ರಾಜ್ಯದ ಎಲ್ಲಾ ಭಾಗದ ಜನರೊಂದಿಗೆ ಸೇರಿ ಆಗಸ್ಟ್ 24ರ ಭಾನುವಾರ ʻಉಜಿರೆ ಚಲೋ’ ಎಂಬ ಹಮ್ಮಿಕೊಂಡಿದ್ದೇವೆ ಎಂದು ಸೌಜನ್ಯ ಹೋರಾಟ ಸಮಿತಿಯ ಕೆ. ದಿನೇಶ್‌ ಗಾಣಿಗ ಹೇಳಿದ್ದಾರೆ.

ಮಂಗಳೂರಿನ ಪತ್ರಿಕಾಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1983 ರಲ್ಲಿ ಈ ಭಾಗದಲ್ಲಿ ನಡೆದಂತಹ ಸಾವುಗಳ ಬಗ್ಗೆ ಅಂದಿನ ವಿಧಾನ ಸಭೆಯಲ್ಲಿ ಕೂಡಾ ಚರ್ಚೆಗಳು ನಡೆದಿದ್ದವು. ಆದಾದ ನಂತರ 1986ರಲ್ಲಿ ಶಾಲೆಯ ಶಿಕ್ಷಕಿ ವೇದವಲ್ಲಿ ಎನ್ನುವವರನ್ನು ಪೆಟ್ರೋಲ್ ಸುರಿದು ಕೊಲೆ ಮಾಡಲಾಗಿದ್ದು, ಆರೋಪಿ ಸಿಕ್ಕಿಲ್ಲ. 1973 ರಲ್ಲಿ ವಿದ್ಯಾರ್ಥಿನಿ ಪದ್ಮಲತಾ ಅತ್ಯಾಚಾರ, ಕೊಲೆ ನಡೆದಿದ್ದು ಇದರ ಆರೋಪಿಯೂ ಸಿಕ್ಕಿಲ್ಲ. 2012 ರಲ್ಲಿ ಆನೆ ಮಾವುತ ನಾರಾಯಣ ಮತ್ತು ಯಮುನಾ ಕೊಲೆ, ದರೋಡೆ ನಡೆದಿತ್ತು, ಇಲ್ಲೂ ಕೂಡ ಆರೋಪಿ ಸಿಕ್ಕಿಲ್ಲ. ಇದಾಗಿ 20 ದಿನದಲ್ಲೇ ಅಂದರೆ 2012ರ ಅಕ್ಟೋಬರ್‌ 9 ಸೌಜನ್ಯ ಅತ್ಯಾಚಾರ ಮತ್ತು ಕೊಲೆ ನಡೆದ್ದು, ಇದರ ಆರೋಪಿಯೂ ಸಿಕ್ಕಿಲ್ಲ, ಆರೋಪಿಗಳನ್ನು ಪತ್ತೆಹಚ್ಚಲು ಪ್ರಕರಣ ಎಸ್‌ಐಟಿಗೆ ವಹಿಸಲು ಆಗ್ರಹಿಸಿದರು.

ಧರ್ಮಸ್ಥಳ ಮತ್ತು ಉಜಿರೆಯಲ್ಲಿ 2002 ರಿಂದ 2012 ರವರೆಗೆ 452 ಅಸಹಜ ಸಾವು ಪ್ರಕರಣ ನಡೆದಿತ್ತು. ಇದರಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್‌ನವರು ಹೇಳಿರುವ ಶವಗಳಿಗೂ ಪೊಲೀಸ್‌ ಇಲಾಖೆ ನೀಡಿರುವ ಯು.ಡಿ.ಆ‌ರ್.ಗೂ ವ್ಯತ್ಯಾಸ ಕಂಡು ಬಂದಿದೆ. ಅಲ್ಲದೇ 1970 ರಿಂದ 2025 ರ ವರೆಗೆ ಹಲವಾರು ಕೊಲೆ ಮತ್ತು ಅತ್ಯಾಚಾರದಂತಹ ಪ್ರಕರಣಗಳು ನಡೆದಿದೆ. ಇಷ್ಟೆಲ್ಲಾ ಪ್ರಕರಣಗಳು ಧರ್ಮಸ್ಥಳದಲ್ಲಿ ನಡೆಯುತ್ತಿದ್ದರೂ ಕೂಡಾ ಯಾವ ಪ್ರಕರಣದಲ್ಲೂ ಆರೋಪಿ ಸಿಗುತ್ತಿಲ್ಲ.
ಪೊಲೀಸ್ ಇಲಾಖೆ ಆರೋಪಿಗಳನ್ನು ಹಿಡಿಯದೆ ಇರುವುದೇ ‌ ಶ್ರೀ ಕ್ಷೇತ್ರದ ಹೆಸರು ಹಾಳಾಗಿ ಜನರಲ್ಲಿ ಅಪನಂಬಿಕೆ ಬರುತ್ತಿವೆ ಎಂದು ಆರೋಪಿಸಿದರು.

ಹಿಂದಿನ ಎಲ್ಲಾ ಪ್ರಕರಣಗಳನ್ನು ತನಿಖೆ ಮಾಡಿ ಆರೋಪಿಗಳನ್ನು ಹಿಡಿಯಬೇಕು ಎಂದು ರಾಜ್ಯದ ಸರಕಾರದ ಪ್ರಧಾನ ಕಾರ್ಯದರ್ಶಿಯವರಿಗೆ ದೂರು ನೀಡಲಾಗಿದೆ. ಈ ಮಧ್ಯೆ ಕೆಲವು ರಾಜಕೀಯ ನಾಯಕರು ಮತ್ತು ಸಂಘಟನೆಯ ನಾಯಕರು ಶ್ರೀಕ್ಷೇತ್ರದ ಹೆಸರು ಹಾಳಾಗುತ್ತಿದೆ, ಹಿಂದೂ ಧರ್ಮ ಹಾಳಾಗುತ್ತಿದೆ ಎಂದೆಲ್ಲಾ ಪತ್ರಿಕಾಗೋಷ್ಠಿ ಮಾಡುತ್ತಿದ್ದಾರೆ. ಅಲ್ಲದೇ ಕೆಲವು ಶಾಸಕರು ವಿಧಾನಸಭೆಯಲ್ಲೂ ಕೂಡಾ ಈ ವಿಷಯ ಚರ್ಚೆ ಮಾಡುತ್ತಿದ್ದಾರೆ. ವೇದವಲ್ಲಿ, ಪದ್ಮಲತಾ, ನಾರಾಯಣ ಮತ್ತು ಯಮುನಾ, ಸೌಜನ್ಯ ಕೊಲೆ ಬಗ್ಗೆ ಮತ್ತು ಅಕ್ವಿಟಲ್ ಕಮಿಟಿ ಮಾಡುವುದರ ಬಗ್ಗೆ ಮಾತನಾಡದ ಈ ಶಾಸಕರು ಯಾರನ್ನು ಉಳಿಸುವ ಸಲುವಾಗಿ ಈಗ ಹೋರಾಟ ನಡೆಸುತ್ತಿದ್ದಾರೆ ಈ ಬಗ್ಗೆ ಜನಸಾಮಾನ್ಯರಿಗೆ ತಿಳಿದಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಆದಿತ್ಯ, ಯೋಗೇಂದ್ರ ಪುತ್ರನ್, ಸಚಿನ್ ಶ್ರೀಯಾನ್ ಉಪಸ್ಥಿತರಿದ್ದರು.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

error: Content is protected !!