ಎಕ್ಸ್‌ಪರ್ಟ್‌ನಲ್ಲಿ ಅಕ್ಟೋಬರ್‌ 18ರಂದು ʻಸೈನ್ಸ್ ಫೆಸ್ಟ್’: ವಿದ್ಯಾರ್ಥಿಗಳಿಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿಸಲು ವಿನೂತನ ಕಾರ್ಯಕ್ರಮ

ಮಂಗಳೂರು: ಮಂಗಳೂರಿನ ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯ ಅಧೀನದಲ್ಲಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು ಕೊಡಿಯಲ್ ಬೈಲ್ ಆಶ್ರಯದಲ್ಲಿ ಪ್ರೌಢಶಾಲಾ 8, 9, 10ನೇ ತರಗತಿಯ ವಿದ್ಯಾರ್ಥಿಗಳಿಗೆ ಅಕ್ಟೋಬರ್ 18ರಂದು ʻಎಕ್ಸ್‌ಲರೇಟ್ 2025ʼ ಎಂಬ ʻಸೈನ್ಸ್ ಫೆಸ್ಟ್’ ಕಾರ್ಯಕ್ರಮ ಆಯೋಜಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್‌. ನಾಯಕ್‌ ಹೇಳಿದರು.

ಮಂಗಳೂರಿನ ಪತ್ರಿಕಾಭವನದಲ್ಲಿ ಮಾಹಿತಿ ನೀಡಿದ ಅವರು, ವಿಜ್ಞಾನದ ಕುರಿತು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಿ ಅವರಲ್ಲಿನ ಚಿಂತನಾ ಕೌಶಲ್ಯವನ್ನು ಒರೆಗೆ ಹಚ್ಚುವ ಉದ್ದೇಶದಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಎಕ್ಸ್-ಕ್ವಿಝ್ ಇಟ್”, ಕೃತಕ ಬುದ್ಧಿಮತ್ತೆ (AI) ಕಾರ್ಯಾಗಾರ “ಎಕ್ಸ್-ಇಗೈಟ್”, ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆ “ಎಕ್ಸ್-ಬಿಟ್ ಹಾಗೂ ಸಂವಾದಾತ್ಮಕ ಡೆಮೊ “ಎಕ್ಸ್-ಸೈಟ್” ಎಂಬ ನಾಲ್ಕು ಮಾದರಿಯ ಕಾರ್ಯಕ್ರಮವನ್ನು ಆಯೋಜಿಸಿದೆ. ಪ್ರತಿಯೊಂದು ಶಾಲೆಯಿಂದ ಒಟ್ಟು 8 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರತಿಯೊಂದು ವಿಭಾಗದಲ್ಲಿ 2 ವಿದ್ಯಾರ್ಥಿಗಳ ಒಂದು ತಂಡದಂತೆ ಒಟ್ಟು 4 ವಿಭಾಗಗಳಲ್ಲಿ 4 ತಂಡಗಳು ಭಾಗವಹಿಸಬಹುದಾಗಿದೆ ಎಂದರು.

ಭಾಗವಹಿಸಲು ಇಚ್ಛಿಸುವ (xcelerate.expertedu.co.in) ನೋಂದಾಯಿಸಲು ಸೆ. 20 ತಂಡವು ಅನ್‌ಲೈನ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಸರು ಕೊನೆಯ ದಿನವಾಗಿರುತ್ತದೆ. ನೋಂದಾಯಿತ ತಂಡಕ್ಕೆ ಮಾತ್ರ ಭಾಗವಹಿಸಲು ಅವಕಾಶ ಇರುತ್ತದೆ. ಪ್ರತಿ ಸ್ಪರ್ಧೆಯ ವಿಜೇತರಿಗೆ ಪ್ರಥಮ ಮತ್ತು ದ್ವಿತೀಯ ಬಹುಮಾನ ನೀಡಿ ಪುರಸ್ಕರಿಸಲಾಗುತ್ತದೆ. ಅತೀ ಹೆಚ್ಚು ಅಂಕ ಪಡೆದ ಶಾಲೆಗೆ ಸಮಗ್ರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ನರೇಂದ್ರ ಎಲ್‌. ನಾಯಕ್‌ ಹೇಳಿದರು.

ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ.ಉಷಾಪ್ರಭಾ ಎನ್.ನಾಯಕ್ ಮಾತನಾಡಿ, ಎಕ್ಸ್-ಕ್ವಿಜಿಟ್ (ವಿಜ್ಞಾನ ರಸಪ್ರಶ್ನೆ)ನಲ್ಲಿ ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ರಸಪ್ರಶ್ನೆ ನಡೆಯಲಿದೆ. ಪ್ರತಿ ಶಾಲೆಯ ಇಬ್ಬರು ವಿದ್ಯಾರ್ಥಿಗಳ ಒಂದು ತಂಡವು ಭಾಗವಹಿಸಬಹುದು. ಎಕ್ಸ್-ಇಗೈಟ್ ಎಐ (Al) ವರ್ಕ್‌ ಶಾಪ್‌ನಲ್ಲಿ ಎಐ (Al) ಟೂಲ್ಸ್ ಮತ್ತು ಪ್ರಾಂಪ್ಟ್ ಎಂಜಿನಿಯರಿಂಗ್ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ಪರಿಕರಗಳನ್ನು ಹೇಗೆ ಬಳಸಬಹುದು ಎಂಬುದರ ಬಗ್ಗೆ ತರಬೇತಿಯನ್ನು ನೀಡಲಿದ್ದಾರೆ. ಬಳಿಕ ವಿದ್ಯಾರ್ಥಿಗಳು ಅತ್ಯುತ್ತಮ ವೆಬ್ ಅಪ್ಲಿಕೇಶನ್‌ಗಳನ್ನು ತಯಾರಿಸಬೇಕು. ಅಂತಹ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಲಾಗುತ್ತದೆ ಎಂದರು.

ʻಎಕ್ಸ್-ಝಿಬಿಟ್ʼ ಸ್ಪರ್ಧೆಯ ವಿಜ್ಞಾನ ವಿಷಯದಲ್ಲಿ ಮೊಡೆಲ್‌ಗಳನ್ನು ತಯಾರಿಸಿ ಪ್ರಸ್ತುತ ಪಡಿಸಬೇಕು. ಪ್ರತಿ ಶಾಲೆಗೆ ಕೇವಲ ಒಂದು ಮೊಡೆಲ್ ಅನ್ನು ಮಾತ್ರ ಪ್ರಸ್ತುತ ಪಡಿಸಲು ಅವಕಾಶ ಇದೆ. ವೈಜ್ಞಾನಿಕತೆ, ನಿಖರತೆ, ನಾವೀನ್ಯತೆ, ನಿರ್ಮಾಣ ಗುಣಮಟ್ಟ, ಪ್ರಸ್ತುತಿ ಮತ್ತು ಸಂವಹನ, ಶೈಕ್ಷಣಿಕ ಮೌಲ್ಯ ಮತ್ತು ನೈಜ-ಪ್ರಪಂಚದ ಅಪ್ಲಿಕೇಶನ್‌ಗಳನ್ನು ಪರಿಗಣಿಸಿ ಅಂಕ ನೀಡಲಾಗುತ್ತದೆ ಎಂದು ಅವರು ಹೇಳಿದರು.

ಎಲ್ಲರಿಗೂ ಭಾಗವಹಿಸಲು ಮುಕ್ತ ಅವಕಾಶ:

ವಿದ್ಯಾರ್ಥಿಗಳು ಶಾಲೆಯ ಅಧ್ಯಾಪಕರು/ಮುಖ್ಯಸ್ಥರೊಂದಿಗೆ ಚರ್ಚಿಸಿ ಶಾಲೆಯ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕು. ಪ್ರಾಯೋಗಿಕ ಪ್ರದರ್ಶನಗಳು ಮತ್ತು ಪ್ರಶೋತ್ತರ ಮೂಲಕ ಎಕ್ಸ್‌ಪರ್ಟ್ ಅಧ್ಯಾಪಕರೊಂದಿಗೆ ನೇರವಾಗಿ ಚರ್ಚಿಸಲು ಇದೊಂದು ವೇದಿಕೆಯಾಗಿದೆ. ಹೀಗೆ ಪದವಿ ಪೂರ್ವ ಶಿಕ್ಷಣ ಕ್ಷೇತ್ರದಲ್ಲಿ ಪ್ರತಿವರ್ಷ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯನ್ನು ಮಾಡುವ ಬಗ್ಗೆ ಹೆಮ್ಮೆ ಎನಿಸುತ್ತಿದೆ. ಅಂತೆಯೇ ಪತ್ಯೇತರ ಚಟುವಟಿಕೆಗಳಲ್ಲಿಯೂ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಸಾಧನೆಯನ್ನು ಮಾಡುತ್ತಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಸಂಸ್ಥೆಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ನಿರ್ದೇಶಕ ಅಂಕುಶ್ ಎನ್. ನಾಯಕ್, ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಮಚಂದ್ರ ಭಟ್, ಕಾರ್ಯಕ್ರಮ ಸಹಸಂಯೋಜಕರಾದ, ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಬಿ. ರಕ್ಷಿತಾ ಪ್ರಭು ಉಪಸ್ಥಿತರಿದ್ದರು.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

error: Content is protected !!