ನ್ಯೂಯಾರ್ಕ್ : ಆಸ್ಟಿನ್‌ನಲ್ಲಿ ಭಾನುವಾರ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಬಲಿಯಾದ ಮೂವರಲ್ಲಿ ಟೆಕ್ಸಾಸ್ ವಿಶ್ವವಿದ್ಯಾಲಯದ ಭಾರತೀಯ ಮೂಲದ ವಿದ್ಯಾರ್ಥಿನಿ ಸವಿತಾ ಷಣ್ಮುಗ ಸುಂದರಂ(21) ಕೂಡ ಒಬ್ಬರಾಗಿದ್ದಾರೆ.

ದಾಳಿ ನಡೆಸಿದ ಬಂದೂಕುಧಾರಿಯನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದ್ದು, ಒಟ್ಟು ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿದೆ. ಎಫ್‌ಬಿಐ ಈ ಘಟನೆಯನ್ನು ಸಂಭಾವ್ಯ ಭಯೋತ್ಪಾದಕ ದಾಳಿಯಾಗಿ ತನಿಖೆ ನಡೆಸುತ್ತಿದೆ. ಗುಂಡಿನ ದಾಳಿಯು ಇರಾನ್‌ನಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಸಂಬಂಧಿಸಿರಬಹುದೇ ಎಂಬ ಆಯಾಮದಲ್ಲಿ ತನಿಖೆ ನಡೆಸುತ್ತಿದೆ ಎಂದು ಪತ್ರಿಕಾ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್(ಎಪಿ) ವರದಿ ಮಾಡಿದೆ.

ಮೇ ತಿಂಗಳಲ್ಲಿ ನಿರ್ವಹಣಾ ಮಾಹಿತಿ ವ್ಯವಸ್ಥೆ ಮತ್ತು ಅರ್ಥಶಾಸ್ತ್ರದಲ್ಲಿ ಡ್ಯುಯಲ್ ಪದವಿಗಳೊಂದಿಗೆ ಪದವಿ ಮುಗಿಸಲಿದ್ದ ಸವಿತಾ, ಟೆಕ್ಸಾಸ್ ವಿಶ್ವವಿದ್ಯಾಲಯದ ಬಳಿಯ ಜನಪ್ರಿಯ ಸ್ಥಳವಾದ ಬುಫೋರ್ಡ್‌ನ ಬಾರ್ಮ್‌ನ ಹೊರಗೆ ಬಂದೂಕುಧಾರಿಯ ಗುಂಡಿಗೆ ಬಲಿಯಾಗಿದ್ದಾರೆ. ದಿ ಟೆಕ್ಸಾಸ್ ಟ್ರಿಬ್ಯೂನ್ ಪ್ರಕಾರ, ದಾಳಿಯಲ್ಲಿ ಕನಿಷ್ಠ 14 ಜನರು ಗಾಯಗೊಂಡಿದ್ದು, ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.

ಬಂದೂಕುಧಾರಿಯ ಮನೆಯನ್ನು ಶೋಧಿಸಿದ ಅಧಿಕಾರಿಗಳಿಗೆ ಇರಾನ್ ನ ಧ್ವಜ ಮತ್ತು ಇರಾನ್ ನಾಯಕರ ಚಿತ್ರಗಳು ಸಿಕ್ಕಿವೆ ಎಂದು ಅಧಿಕಾರಿಯೊಬ್ಬರು ಸಿಬಿಎಸ್ ಸುದ್ದಿ ನೀಡಿದ್ದಾರೆ.
ಗುಂಡಿನ ದಾಳಿಯ ಸಮಯದಲ್ಲಿ, ಡಯಾಗ್ನೆ ಮುಂಭಾಗದಲ್ಲಿ “ಅಲ್ಲಾಹನ ಆಸ್ತಿ” ಎಂದು ಬರೆದಿರುವ ಸ್ವೆಟ್‌ಶರ್ಟ್ ಮತ್ತು ಇರಾನಿನ ಧ್ವಜ ವಿನ್ಯಾಸವಿರುವ ಶರ್ಟ್ ಧರಿಸಿದ್ದ ಎಂದು ಎಪಿ ಮತ್ತು ಸಿಬಿಎಸ್ ಸುದ್ದಿಗಳು ತಿಳಿಸಿವೆ.