ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ಹಿಡಿತ: ಜಾಗತಿಕ ತೈಲ ಮಾರುಕಟ್ಟೆಗೆ ನಡುಕ!

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಹೆಚ್ಚಾಗುತ್ತಿದ್ದಂತೆ, ಇರಾನ್‌ನ ಪ್ರಭಾವಶಾಲಿ ಸೇನಾ ಪಡೆ IRGC (ರೆವಲ್ಯೂಷನರಿ ಗಾರ್ಡ್) ವಿಶ್ವದ ಅತ್ಯಂತ ಪ್ರಮುಖ ತೈಲ ಸಾಗಾಣಿಕೆ ಮಾರ್ಗವಾದ ಹಾರ್ಮುಜ್ ಜಲಸಂಧಿ (Strait of Hormuz) ಮೇಲೆ ತನ್ನ ಸಂಪೂರ್ಣ ನಿಯಂತ್ರಣವನ್ನು ಘೋಷಿಸಿದೆ.

ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಯಾವುದೇ ಹಡಗುಗಳು ಇರಾನ್‌ನ ಕ್ಷಿಪಣಿ ಅಥವಾ ಡ್ರೋನ್ ದಾಳಿಗೆ ತುತ್ತಾಗುವ ಅಪಾಯವಿದೆ ಎಂದು IRINN ಸುದ್ದಿ ಸಂಸ್ಥೆ ವರದಿ ಮಾಡಿದೆ. IRGC ನೌಕಾಪಡೆಯ ಅಧಿಕಾರಿ ಮೊಹಮ್ಮದ್ ಅಕ್ಬರ್ಜಾದೆ, “ಹಾರ್ಮುಜ್ ಜಲಸಂಧಿ ಈಗ ಇಸ್ಲಾಮಿಕ್ ಗಣರಾಜ್ಯದ ನೌಕಾಪಡೆಯ ಸಂಪೂರ್ಣ ನಿಯಂತ್ರಣದಲ್ಲಿದೆ” ಎಂದು ಘೋಷಿಸಿದ್ದಾರೆ.

ಇರಾನ್‌ನ ಈ ಬೆದರಿಕೆಗೆ ತಕ್ಷಣವೇ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಗಲ್ಫ್ ಮಾರ್ಗವಾಗಿ ಸಾಗುವ ತೈಲ ಟ್ಯಾಂಕರ್‌ಗಳಿಗೆ ಅಮೆರಿಕ ನೌಕಾಪಡೆಯು ಭದ್ರತೆ (Escort) ನೀಡಲು ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ. “ವಿಶ್ವದ ಇಂಧನ ಪೂರೈಕೆಯನ್ನು ಯಾರೂ ತಡೆಯಲು ಸಾಧ್ಯವಿಲ್ಲ” ಎಂದು ಟ್ರಂಪ್ ಗುಡುಗಿದ್ದಾರೆ.

ವಿಶ್ವದ ಒಟ್ಟು ತೈಲ ಸಾಗಾಣಿಕೆಯ ಸುಮಾರು 20% ರಿಂದ 30% ರಷ್ಟು ಇದೇ ಮಾರ್ಗದ ಮೂಲಕ ನಡೆಯುತ್ತದೆ. ಒಂದು ವೇಳೆ ಈ ಮಾರ್ಗ ಬಂದ್ ಆದರೆ, ಜಾಗತಿಕವಾಗಿ ಪೆಟ್ರೋಲ್-ಡೀಸೆಲ್ ಬೆಲೆ ಗಗನಕ್ಕೇರುವುದರಲ್ಲಿ ಸಂಶಯವಿಲ್ಲ. ಇದು ಭಾರತದಂತಹ ರಾಷ್ಟ್ರಗಳ ಆರ್ಥಿಕತೆಯ ಮೇಲೆ ನೇರ ಹೊಡೆತ ನೀಡಲಿದೆ.

“ಒಂದೆಡೆ ಇರಾನ್‌ನ ಪರಮೋಚ್ಛ ನಾಯಕ ಅಲಿ ಖಮೇನಿ ಅವರ ಹತ್ಯೆಯ ನಂತರದ ಸೇಡಿನ ಕಿಚ್ಚು, ಇನ್ನೊಂದೆಡೆ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡುವ ಬೆದರಿಕೆ. ಈ ಎಲ್ಲ ಬೆಳವಣಿಗೆಯಿಂದ ಇಡೀ ಪಶ್ಚಿಮ ಏಷ್ಯಾ ಈಗ ಸುಡುತ್ತಿರುವ ಕೆಂಡದಂತಿದೆ. ಅಮೆರಿಕದ ನೌಕಾಪಡೆ ಈ ಮಾರ್ಗದಲ್ಲಿ ಹಸ್ತಕ್ಷೇಪ ಮಾಡಲು ಮುಂದಾದರೆ, ಇದು ನೇರ ಜಾಗತಿಕ ಯುದ್ಧಕ್ಕೆ ನಾಂದಿ ಹಾಡಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

error: Content is protected !!