ರಾಹುಲ್ ಮೇಧಾವಿತನವನ್ನು ದೇಶ ಒಪ್ಪುವ ಕಾಲ ಬಂದಿದೆ: ರಮಾನಾಥ ರೈ

ಮಂಗಳೂರು: ಚುನಾವಣಾ ಆಯೋಗ ಮಾಡಿರುವ ತಪ್ಪುಗಳ ಬಗ್ಗೆ ರಾಹುಲ್‌ ಗಾಂಧಿ ಸಿಡಿಸಿ ಬಾಂಬ್‌ ಸಿಡಿಸಿ ಮತದಾರ ಪಟ್ಟಿ ಶುದ್ಧೀಕರಣಕ್ಕೆ ಹೆಜ್ಜೆ ಇಟ್ಟಿದ್ದಾರೆ‌. ಚುನಾವಣಾ ಆಯೋಗ ಮಾಡಿರುವ ತಪ್ಪುಗಳ ಬಗ್ಗೆ ಚುನಾವಣಾ ಆಯೋಗವೇ ಉತ್ತರ ಕೊಡಬೇಕು ಹೊರತು, ಅಧಿಕಾರದಲ್ಲಿರುವವರು ಉತ್ತರ ಕೊಡುವುದು ಸರಿಯಲ್ಲ. ರಾಹುಲ್ ಮೇಧಾವಿತನವನ್ನು ದೇಶ ಒಪ್ಪುವ ಕಾಲ ಬಂದಿದೆ ಎಂದು ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.

ಮಂಗಳೂರಿನ ಕಾಂಗ್ರೆಸ್‌ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮತದಾರರ ಪಟ್ಟಿಯಲ್ಲಾದ ಲೋಪ‌ದ ಬಗ್ಗೆ ಇಂಡಿಯಾ ಟುಡೆ ಸಮೀಕ್ಷೆ ನಡೆಸಿ, ಒಂದೇ ಡೋರ್‌ ನಂಬರ್ನಲ್ಲಿ 80 ಹೆಸರನ್ನು ಪತ್ತೆ ಮಾಡಿತ್ತು. ಚುನಾವಣೆಯಲ್ಲಿ ಪಾರದರ್ಶಕತೆ ತರುವಲ್ಲಿ ರಾಹುಲ್‌ ಇದೀ ಪ್ರಶ್ನೆ ಮಾಡಿದ್ದು ಅದೀಗ ದೇಶದಾದ್ಯಂತ ಚರ್ಚೆ ಆಗ್ತಿದೆ. ರಾಹುಲ್‌ ವಿಪಕ್ಷದ ನಾಯಕನಾಗಿ, ಚುನಾವಣಾ ಆಯೋಗ ಶುದ್ಧತಾ ಪ್ರಕ್ರಿಯೆ ನಡೆಸಿದ್ದಾರೆ ಎಂದರು.

ಮಹಾದೇವಪುರದಲ್ಲಿ ಮತದಾರರ ಪಟ್ಟಿಯಲ್ಲಿ ನಡೆದ ಅಕ್ರಮದ ಬಗ್ಗೆ ಚುನಾವಣಾ ಆಯೋಗ ಉತ್ತರ ಕೊಡಬೇಕೇ ಹೊರತು, ಅರವಿಂದ ಲಿಂಬಾವಳಿಯವರಲ್ಲ. ಇದೇ ರೀತಿ ಬೇರೆ ಕಡೆಗಳಲ್ಲೂ ಪ್ರಮಾದಗಳಾಗಿದೆ ಎಂದು ಕರ್ನಾಟಕ ಬಿಜೆಪಿಯೂ ಸ್ಪಷ್ಟೀಕರಣ ನೀಡಿದೆ. ಈ ಮೂಲಕ ಬಿಜೆಪಿ ಇಲ್ಲಿ ಮತಕಳವು ಆಗಿರುವುದನ್ನು ಪ್ಪಿಕೊಂಡು, ಸ್ಪಷ್ಟೀಕರಣ ಕೊಟ್ಟಿರುವುದು ಅತ್ಯಂತ ಗಂಭೀರ ವಿಚಾರ ಎಂದರು.

ಮಹಾರಾಷ್ಟ್ರ ಲೋಕ ಸಭಾ ಹಾಗೂ ವಿಧಾನ ಸಭಾ ಚುನಾವಣೆಯಲ್ಲಿಯೂ ಮತಗಳಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಇದೀಗ ಬಿಹಾರದಲ್ಲಿ ಚುನಾವಣೆ ನಡೆಯುತ್ತಿದ್ದು, ಇಲ್ಲಿಯೂ ತಪ್ಪುಗಳಾಗಬಾರದೆಂದು ರಾಹುಲ್‌ ಗಾಂಧಿ ಕೇಳಿದ್ದಾರೆ. ಹಾಗಾಗಿ ಚುನಾವಣಾ ಆಯೋಗ ಕಳೆದ 10 ವರ್ಷಗಳ ವೀಡಿಯೋ ಹಾಗೂ ಸಾಫ್ಟ್ ಕಾಪಿಯನ್ನು ಒದಗಿಸಬೇಕು. ಉತ್ತರದಾಯಿತ್ವ ಹೊಂದಿದವರು ಮೌನ ವಹಿಸಿದ್ದಾರೆ. ರಾಹುಲ್ ಅವರ ಮೇಧಾವಿತನವನ್ನು ದೇಶ ಒಪ್ಪುವ ಕಾಲ ಬಂದಿದೆ. ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಬೇಕಾದರೆ ಮತ ಕಳವು ನಿಲ್ಲಿಸುವಲ್ಲಿ ಎಲ್ಲರ ಪ್ರಯತ್ನ ಅಗತ್ಯವಿದೆ ಎಂದರು.

ಮತದಾರರ ಪಟ್ಟಿ ಶುದ್ಧೀಕರ ಆಗ್ಬೇಕು ಎಂಬ ರಾಹುಲ್‌ ಗಾಂಧಿ ಪ್ರಯತ್ನಕ್ಕೆ ನನ್ನ ಬೆಂಬಲವಿದ್ದು, ಇದನ್ನು ಪ್ರತಿಯೊಬ್ಬ ಭಾರತೀಯನೂ ಬೆಂಬಲಿಸಬೇಕು. ಈ ಮೂಲಕ ಚುನಾವಣೆಯಲ್ಲಿ ಪಾರದರ್ಶಕತೆ ತರಲು, ಮತಕಳವು ನಿಲ್ಲಿಸಲು ಗಂಭೀರ ಪ್ರಯತ್ನ ಆಗ್ಬೇಕು ಎಂದರು.

ಮತಗಳ್ಳತನ ಆರೋಪಕ್ಕೆ ಉತ್ತರಿಸುವ ಹೊಣೆ ಚುನಾವಣಾ ಆಯೋಗದ್ದು: ರಮಾನಾಥ ರೈ

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶಶಿಧರ ಹೆಗ್ಡೆ, ನವೀನ್ ಡಿʼಸೋಜ, ಇಬ್ರಾಹೀಂ ನವಾಝ್, ಆರ್.ಕೆ. ಪೃಥ್ವಿರಾಜ್, ಬಿ.ಎಂ. ಅಬ್ಬಾಸ್ ಅಲಿ, ಸುಹಾನ್ ಆಳ್ವ, ಜಯಶೀಲ ಅಡ್ಯಂತಾಯ, ಸೋಹನ್‌ ಆಳ್ವಾ, ಅಶೋಕ್ ಡಿ.ಕೆ., ಪ್ರೇಮ್ ಬಳ್ಳಾಲ್ ಬಾಗ್, ಶಬೀರ್ ಎಸ್. ಯಶವಂತ ಪ್ರಭು, ಫಯಾಝ್ ಅಮೆಮಾರ್ ಮತ್ತಿತರರಿದ್ದರು.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

error: Content is protected !!